IMG-20240113-WA0010

ಡಾ. ಬಾಬು ಜಗಜೀವನರಾಮ್ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ – ಲಕ್ಷ್ಮಣ್ ಬಾರಿಗಿಡದ

ಕರುನಾಡ ಬೆಳಗು ಸುದ್ದಿ 

ಕುಕನೂರ,13- ಡಾ. ಬಾಬು ಜಗಜೀವನರಾಮ್ ಅವರು ದೇಶಕ್ಕೆ ನೀಡಿದ ಕೊಡಿಗೆ ಅಪಾರ ಎಂದು ಲಕ್ಷ್ಮಣ್ ಬಾರಿಗಿಡದ ಅವರು ಹೇಳಿದರು.

ಪಟ್ಟಣದ ಗಾಂಧಿನಗರದ 12ನೇ ವಾರ್ಡಿನಲ್ಲಿ ಡಾ. ಬಾಬು ಜಗಜೀವನ್ ರಾಮ್ ಯುವಕ ಸಂಘ ದವರಿಂದ ಶನಿವಾರ ಡಾ. ಬಾಬು ಜಗಜೀವನ ರಾಮ್ ಅವರ ನಾಮಫಲಕ ಉದ್ಘಾಟನೆ ಮಾಡಲಾಯಿತು.

ಉದ್ಘಾಟನೆ ನೆರವೇರಿಸಿ ಲಕ್ಷ್ಮಣ ಬಾರಿಗಿಡದ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ದೇಶದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿ ದುಡಿದ ಮುತ್ಸದ್ಧಿ ಹಾಗೂ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದರು.

ಜಗಜೀವನ ರಾಮ್ ಅವರು ಮೇಲು-ಕೀಳೆಂಬ, ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಶ್ರಮಿಸಿದವರು. ಸಾಮಾಜಿಕ ಬದಲಾವಣೆಗಾಗಿ ಹೋರಾಡಿದರು ಶೋಷಿತರ ಪರವಾಗಿ ದನಿ ಎತ್ತಿದ ಅವರ ಚಿಂತನೆಗಳನ್ನು ನಾವೆಲ್ಲರು ಮೈಗೂಡಿಸಿಕೊಳ್ಳಬೇಕು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ದೊಡ್ಡಈರಪ್ಪ ಆರುಬೆರಳಿನ್, ಮುದಿಯಪ್ಪ ಗೋರ್ಲೆಕೊಪ್ಪ, ನಾಗರಾಜ ಆರುಬೆರಳಿನ್, ನಾಗಪ್ಪ ಗುಡದಳ್ಳಿ, ಮಾಹಾಂತೇಶ ಆರುಬೆರಳಿನ್, ಯುವಕರಾದ ಮಂಜು ಗೋರ್ಲೆಕೊಪ್ಪ, ಶರಣಬಸಪ್ಪ ಆರು ಬೆರಳಿನ್, ಹನುಮ ಗುಡದಳ್ಳಿ, ಪ್ರಶಾಂತ ಭಂಡಾರಿ,ಪವಣ ಗೋರ್ಲೆಕೊಪ್ಪ , ಸಂತೋಷ್, ಆದಿ, ಶಿವರಾಜ, ದೇವರಾಜ, ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!