ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣೆಗೆ ಚಾಲನೆ ನೀಡಿದ ಶಾಸಕ ದೊಡ್ಡನಗೌಡ ಪಾಟೀಲ
ಕರುನಾಡ ಬೆಳಗು ಸುದ್ದಿ
ಕುಷ್ಟಗಿ, 14- 2024-25ನೇ ಸಾಲಿನ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮವನ್ನು ತಾಲೂಕಿನ ಟೆಂಗುಂಟಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣೆ ಮಾಡುವ ಮೂಲಕ ಶಾಸಕರು ಹಾಗೂ ವಿಧಾನಪರಿಷತ್ ಮುಖ್ಯ ಸಚೇತಕರಾದ ದೊಡ್ಡನಗೌಡ ಪಾಟೀಲ್ ಚಾಲನೆ ನೀಡಿದರು.
ಇದೇ ವೇಳೆ ಶಾಲಾ ಆವರಣದಲ್ಲಿ ಸಸಿ ನೆಡುವುದರ ಮೂಲಕ ಹಾಗೂ ಶಾಲೆಯ ಕೆಲವು ಮಕ್ಕಳಿಗೆ ಸಾಂಕೇತಿಕವಾಗಿ 2024-25 ನೇ ಸಾಲಿನ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿ ನಂತರ ಮಾತನಾಡಿ, ಸರಕಾರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಸರಕಾರದ ಸೌಲಭ್ಯಗಳನ್ನು ಪಡೆದು ಮಕ್ಕಳು ಉತ್ತಮ ಶಿಕ್ಷಣವಂತರಾಗಬೇಕು. ಶಿಕ್ಷಕರು ಸಹ ಮಕ್ಕಳಿಗೆ ಕಲಾತ್ಮಕ ಶಿಕ್ಷಣ ನೀಡಿ ಪ್ರತಿಭೆಗೆ ತಕ್ಕ ಪ್ರೋತ್ಸಾಹ ನೀಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿ ನಂತರ ಟೆಂಗುಂಟಿ ಗ್ರಾಮದ ಗ್ರಾಮಸ್ಥರು ಶಾಲೆಯ ಮೂಲಭೂತ ಸೌಲಭ್ಯಗಳ ಕುರಿತು ಹಾಗೂ ಗ್ರಾಮದ ಬಹುದಿನದ ಬೇಡಿಕೆಯಾದ ಪ್ರೌಢಶಾಲೆಯ ಪ್ರಾರಂಭಿಸುವ ಕುರಿತು ಮನವಿಯನ್ನು ಸಲ್ಲಿಸಲಾಯಿತು. ಇದಕ್ಕೆ ಶಾಸಕರು ಮನವಿಗೆ ಸ್ಪಂದಿಸುವುದಾಗಿ ಆಶ್ವಾಸನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಂದ್ರ ಕಾಂಬಳೆ ಹಾಗೂ ಅಕ್ಷರ ದಾಸೋಹ ಅಧಿಕಾರಿಗಳಾದ ಶರಣಪ್ಪ ಕೆ ರವರು ಹಾಗೂ ತಾಲೂಕಿನ ಸಮೂಹ ಸಂಪನ್ಮೂಲ ವ್ಯಕ್ತಿ ಲೋಕೇಶ್, ಗ್ಯಾನಪ್ಪಯ್ಯ ತಾತನವರು ಹಾಗೂ ಶಾಲೆಯ ಮಾಜಿ ಎಸ್ಡಿಎಂಸಿ ಅಧ್ಯಕ್ಷರಾದ ಬಾಳಮ್ಮ ಕುಮಾರ್ ಗೌಡ್ರು ಪೊಲೀಸ್ ಪಾಟೀಲ್ ಹಾಗೂ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಾದ ಶರಣಪ್ಪ ಕೌದಿ ಹಾಗೂ ಬಾಳಮ್ಮ ಆಡಿನ್ ಹಾಗೂ ಗಂಗಮ್ಮ ಬಸವಂತಪ್ಪ ಜೈನರ್ ಹಾಗೂ ಹನುಮವ್ವ ಹನುಮಪ್ಪ ಮಾದರ್ ಹಾಗೂ ಊರಿನ ಪ್ರಮುಖ ಯುವ ಮುಖಂಡರಾದ ಭಾಗಪ್ಪ ತಳವಾರ್, ಗೌಡಪ್ಪ್ ಗೌಡ ಪೊಲೀಸ್ ಪಾಟೀಲ್, ಹನುಮಂತಪ್ಪ ಅಂಗಡಿ, ಮಲ್ಲಪ್ಪ ಮೇಟಿ, ಬಾಳನ್ ಗೌಡ ಮೇಟಿ, ಶರಣಪ್ಪ ಹೊಸೂರ್, ಶಿವಾನಂದ್ ಧರೆಗೊಂಡ ಹಾಗೂ ಶಾಲೆಯ ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ಮಂಜುನಾಥ ಲಕ್ಷ್ಮೇಶ್ವರ ಕಾರ್ಯಕ್ರಮದ ನಿರೂಪಣೆ ಮಾಡಿದರು.
