WhatsApp Image 2024-04-14 at 12.04.13 PM

 ಶ್ರೇಷ್ಠ ನಾಯಕರಲ್ಲಿ ಅಂಬೇಡ್ಕರ್ ಒಬ್ಬರು : ಶಾಸಕ ಬಿ.ಎಂ.ನಾಗರಾಜ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 14- ಭಾರತದಲ್ಲಿ ಸಂಪೂರ್ಣ ಶಿಕ್ಷಣ ವನ್ನು ಪಡೆದ ಮೊದಲ ದಲಿತರಲ್ಲಿ ಒಬ್ಬರು ಅವರು ರಾಜಕೀಯ ವಿಜ್ಞಾನ ಅರ್ಥಶಾಸ್ತ್ರ ಮತ್ತು ಕಾನೂನಿನಲ್ಲಿ ಪದವಿ ಪಡೆದವರು ಶ್ರೇಷ್ಠ ವಕೀಲರು ಬರಹಗಾರರು ಇತಿಹಾಸಕಾರರು ಮತ್ತು ಶ್ರೇಷ್ಠ ರಾಜಕೀಯ ನಾಯಕರಲ್ಲಿ ಒಬ್ಬರು ಎಂದು ಶಾಸಕ ಬಿ ಎಂ ನಾಗರಾಜ ಅವರು ಹೇಳಿದರು.

ನಗರದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತದಲ್ಲಿ ಅಂಬೇಡ್ಕರ್ ರವರ 134 ನೇ ಜನ್ಮದಿನದ ಅಂಗವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಅರ್ಪಿಸಿ ಪುಷ್ಪ ಸಮರ್ಪಿಸಿ ಗೌರವಿಸಿ ಸ್ಮರಿಸಿ ಮಾತನಾಡುತ್ತಾ ಅಂಬೇಡ್ಕರ್ ಅವರು ಭಾರತದ ಇತಿಹಾಸದ ಶ್ರೇಷ್ಠ ನಾಯಕರಲ್ಲಿ ಒಬ್ಬರು ಅವರ ಕೊಡುಗೆ ಸಾಧನೆಗಳು ಅಪಾರ ಎಂದು ಕರೆ ನೀಡಿದರು.

ತಾಲೂಕ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಂ ಮಾರುತಿ ವರ ಪ್ರಸಾದ್ ರೆಡ್ಡಿ ನಗರಸಭೆ ಸದಸ್ಯರಾದ ಬಿ ವೆಂಕಟೇಶ್ ಎಚ್ ಗಣೇಶ್ ಜಾಜಿ ರಾಮ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ದೇವರ ಮನೆ ನಾಗಪ್ಪ ಶಿಕ್ಷಣ ಪ್ರೇಮಿ ಸೈಯದ್ ಮೋಹಿದೀನ್ ಖಾದ್ರಿ ಗೊರವರ ಶ್ರೀನಿವಾಸ ರಾಷ್ಟ್ರೀಯ ಸಾಕ್ಷರತಾ ಸಮಾಜ ಸುಧಾರಕ ಅಬ್ದುಲ್ ನಬಿ ದಲಿತ ಸಂಘಟನೆಯ ಮುಖಂಡರು ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!