ಕನ್ನಡ ಲೋಕಾನುಭಾವಿ ಆದ್ಯ ವಚನಕಾರ ದಾಸಿಮಯ್ಯ : ಶಂಶೇ ಆಲಂ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 13- ಶಿವನು ವಿಶ್ವ ಮಯನು ಸಾಧಿಸಲು ಅಸಾಧ್ಯನು ಅನಿರ್ವಚನೀಯನೂ ಅಲಭ್ಯನೂ ನಿರಾಕಾರನೂ ನಿರ್ಗುಣನೂ ಆಗಿದ್ದಾನೆ ಸಾಧನೆ ಮಾಡಿ ದೇವರನ್ನು ಕಂಡಿದ್ದೇನೆ ಎಂಬುದನ್ನು ಹೇಳುವ ಡಾಂಭೀಕರ ಬಗ್ಗೆ ದಾಸಿಮಯ್ಯ ಅವರು ಅವರ ವಚನದಲ್ಲಿ ಖಂಡಿತವಿಲ್ಲದ ಅಖಂಡಿತ ನೀನೇ ಕಂಡೇರುವಂತೆ ಹೇಳಯ್ಯ ಎಂದು ಹೇಳಿದ್ದಾರೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ತಾಲೂಕ ಕಾರ್ಯನಿರ್ವಾಹಕ ದಂಡಾಧಿಕಾರಿ ತಹಸಿಲ್ದಾರ್ ಶಂಶೇ ಆಲಂ ಅಭಿಪ್ರಾಯಪಟ್ಟರು.
ನಗರದ ಮಿನಿ ವಿಧಾನಸೌಧ ತಾಲೂಕ ಕಚೇರಿ ಸಭಾಂಗಣದಲ್ಲಿ ತಾಲೂಕ ಆಡಳಿತದಿಂದ ವಚನಕಾರದೇವರ ದಾಸಿಮಯ್ಯ ನವರ 1045ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಪುಷ್ಪ ಅರ್ಪಿಸಿ ಸ್ಮರಿಸಿ ನಮನ ಸಲ್ಲಿಸಿ ಗೌರವಿಸಿ ಮಾತನಾಡುತ್ತಾ ವಚನ ಸಾಹಿತ್ಯದಲ್ಲಿ ಯಾರು ಮರೆಯಲು ಸಾಧ್ಯವಿಲ್ಲದ ಹೆಸರು ದೇವರ ದಾಸಿಮಯ್ಯ ಅವರ ಜನ್ಮಸ್ಥಳ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ಮುದನೂರ ಕಾಮಯ್ಯ ಮತ್ತು ಶಂಕರಿ ಎಂಬ ನೇಕಾರ ದಂಪತಿಯರ ಪುತ್ರನಾಗಿ12ನೇ ಶತಮಾನದ ಮೊದಲ ಅರ್ಧಭಾಗದಲ್ಲಿ ದಾಸಿಮಯ್ಯ ಜನಿಸಿದ್ದರು ಎಂಬ ಪ್ರತೀತಿ ಇದೆ ಕನ್ನಡ ಲೋಕಾನುಭವಿ ಆದ್ಯ ವಚನಕಾರ ದಾಸಿಮಯ್ಯ ಎಂದರು.
ತಾಲೂಕ ಕಚೇರಿಯ ಶಿರಸ್ತೆದಾರ ಸಿದ್ದಾರ್ಥ ಕಾರಂಜಿ, ರಾಷ್ಟ್ರೀಯ ಸಾಕ್ಷರತಾ ಸಮಾಜ ಸುಧಾರಕ ಸಾಹಿತ್ಯ ಪ್ರೇಮಿ ಎ ಅಬ್ದುಲ್ ನಬಿ, ತಾಲೂಕ ಕಚೇರಿಯ ಎಫ್ ಡಿಎ ಮಹಾಂತೇಶ, ಶೇಖರ್, ತುಷಾರ್, ಹನುಮೇಶ್, ವೀರೇಶ, ವಿಶ್ವನಾಥ, ಲಕ್ಷ್ಮಮ್ಮ, ಕಚೇರಿಯ ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.
2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿನೀತಿ ಸಂಹಿತೆ ನಿಮಿತ್ತ ಸರಳವಾಗಿ ಜಯಂತಿಯನ್ನು ಆಚರಿಸಲಾಯಿತು.
