filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;
26 ರಂದು ರಾಜ್ಯಮಟ್ಟದ ಕಟ್ಟಡ ಕಾರ್ಮಿಕರ ಸಮಾವೇಶ
ಸಮಾವೇಶದ ಸಂಚಾಲಕ ಎಸ್ ಮಹಾದೇವಪ್ಪ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 23- ರಾಜ್ಯಮಟ್ಟದ ಕಟ್ಟಡ ಕಾರ್ಮಿಕರ ಸಮಾವೇಶ ಇದೇ 26 ರಂದು ಗುರುವಾರ ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಜರುಗಲಿದ್ದು ಕಾರ್ಮಿಕರ ಸಂಕಷ್ಟದ ಕುರಿತು ಚಿಂತನೆ ಜರುಗಲಿದ್ದು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೂಳಿಸುವಂತೆ ಸಮಾವೇಶದ ಸಂಚಾಲಕ ಎಸ್ ಮಹಾದೇವಪ್ಪ ಹೇಳಿದರು.
ಅವರು ಸೋಮವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ಸ್ಟೇಟ್ ಕನ್ಸ ಟ್ರಕ್ಣನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ರಾಜ್ಯಮಟ್ಟದ ಬೃಹತ್ತ್ ಸಮಾವೇಶ ಆಯೋಜಿಸಲಾಗಿದೆ ಎಂದರು.
ಸಮಾವೇಶದಲ್ಲಿ ಕಾರ್ಮಿಕರಿಗೆ ಎರಡು ಕಟ್ಟಡ ಕಾರ್ಮಿಕರ ಕಾನೂನು (BOCW) ಪುನಃಸ್ಥಾಪನೆ ಮಾಡಬೇಕು 032418ನೇ ಸಾಹನೆ ಮಾಡುವುದರ ಬಗ್ಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ವಿಧಾನಸಭೆಯಲ್ಲಿ ತೀರ್ಮಾನ ಹಾಗೂ ಲೇಬರ್ ಕೋಡ್‌ಗಳನ್ನು ಅನುಷ್ಠಾನಗೊಳಿಸುವುದನ್ನು ನಿಲ್ಲಿಸಬೇಕು,
ರಾಜ್ಯದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ ಹಣವನ್ನು ಕೇಂದ್ರ ಸರ್ಕಾರ E shram ನಲ್ಲಿ ನೋಂದಾಯಿತ ಕಾರ್ಮಿಕರಿಗೆ ವರ್ಗಾಯಿಸಬಾರದು ಈ ಪ್ರಸ್ತಾವವು ಕಾನೂನು ಬಾಹಿರವಾಗಿದೆ.
ಕಾರ್ಮಿಕರಿಗೆ ಪಿಂಚಣಿಯನ್ನು 3,000 ದಿಂದ 5,000 ರೂಗಳಿಗೆ ಹೆಚ್ಚಿಸಬೇಕು.ಕಟ್ಟಡ ಕಾರ್ಮಿಕರಿಗೆ ಮತ್ತು ಇತರೆ ಅಸಂತಟಿತ ಕಾರ್ಮಿಕರಿಗೆ ಇ.ಎಸ್.ಐ.ಜಾರಿಗೊಳಿಸಬೇಕು.
ಎಲ್ಲಾ ಕಟ್ಟಡ ಕಾರ್ಮಿಕರಿಗೂ ವಸತಿ ಒದಗಿಸಿಕೊಡಬೇಕು.
ಶೈಕ್ಷಣಿಕ ಸಹಾಯಧನ ಸಂಬಂಧಿಸಿ ಹೊರಡಿಸಲಾಗಿದ್ದ 2023 ಅಧಿಸೂಚನೆಯನ್ನು ರದ್ದುಮಾಡಿ 2021ರ ಅಧಿಸೂಚನೆ ಅನ್ವಯವೇ ಶೈಕ್ಷಣಿಕ ಸಹಾಯಧನ ನೀಡಬೇಕು.
ನೋಂದಣಿ ಮತ್ತು ಮರು ನೋಂದಣಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಸಕಾರಣವಿಲ್ಲದೇ, ಅರ್ಜಿ ಸಲ್ಲಿಕೆಯಲ್ಲಿನ ಸಣ್ಣಪುಟ್ಟ ದೋಷಗಳನ್ನೇ ಮುಂದುಮಾಡಿ ತಿರಸ್ಕರಿಸಲಾಗುತ್ತಿದೆ ಇದು ನಿಲ್ಲಬೇಕು. ಅರ್ಜಿ ಸಲ್ಲಿಕೆಯಲ್ಲಿ ದೋಷವಿದ್ದರೂ ನೈಜ ಕಾರ್ಮಿಕರಾಗಿದ್ದಲ್ಲಿ ಅವರ ಅರ್ಜಿಯನ್ನು ಮಾನ್ಯ ಮಾಡಬೇಕು ಹಾಗೂ ಕಾಲಮಿತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು.
ಈಗಾಗಲೇ ಹಲವಾರು ಕಾರ್ಮಿಕರು ಪಿಂಚಣಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು ಎಲ್ಲಾ ಅರ್ಜಿಗಳು ವಿಲೇವಾರಿಯಾಗದೆ ಹಾಗೆ ಉಳಿದಿದೆ. ಕಾರಣ ಕೇಳಿದರೆ ತಹಶೀಲ್ದಾರ್‌ರಿಂದ ಹಿಂಬರಹ ನೀಡಿಲ್ಲವೆಂದು ಎಲ್ಲಾ ಅರ್ಜಿಗಳನ್ನು ಅನುಮೋದಿಸಿರುವುದಿಲ್ಲ. ಆದಷ್ಟು ಬೇಗ ಕಾರ್ಮಿಕ ಸಚಿವರೊಂದಿಗೆ ಚರ್ಚಿಸಿ ನಿಯಮಗಳಲ್ಲಿ ತಿದ್ದುಪಡಿ ತರಬೇಕೆಂದು ಒತ್ತಾಯಿಸುತ್ತೇವೆ.
ವೃತ್ತಿವಾರು ಮಂಡಳಿಗಳನ್ನು ಸ್ಥಾಪಿಸಿ ಸರ್ಕಾರದ ಬಡ್ಡೆಟ್ ನಿಂದ ಶೇಕಡ 3% ರಿಂದ 5% ಹಣ ಮೀಸಲಿಟ್ಟು – ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಸೌಲಭ್ಯ ಒದಗಿಸಬೇಕು.
ಇನ್ನು ಹಲವಾರು ಬೇಡಿಕೆಯನ್ನು ಮುಂದಿಟ್ಟುಕೊಂಡು ಹಮ್ಮಿಕೊಂಡಿರುವ ರಾಜ್ಯಮಟ್ಟದ ಕಟ್ಟಡ ಕಾರ್ಮಿಕರ ಸಮಾವೇಶಕ್ಕೆ ಮಸ್ತ ಕಟ್ಟಡ ಕಾರ್ಮಿಕರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶದಲ್ಲಿ ಚರ್ಚೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು .
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ದ್ಯಾಮಣ್ಣ ಕರಿಗಾರ, ಸಂತೋಷ ಅಳವಂಡಿ, ಮೈಲಪ್ಪ ಕಂಬದವನ್ ಇತತರು ಇದ್ದರು .
