285ನೇ ಸಂತ ಸೇವಾಲಾಲ್ ಮಹಾರಾಜರ ಜಯಂತೋತ್ಸವ ಸಮಾರಂಭ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,12- ಕರ್ನಾಟಕ ಸರ್ಕಾರ ತಾಲೂಕ ಆಡಳಿತ ತಾಲೂಕು ಪಂಚಾಯತ್ ತಾಲೂಕು ಸಮಾಜ ಕಲ್ಯಾಣ ಇಲಾಖೆ ನಗರಸಭೆ ಸರ್ವರ ಸಂಯುಕ್ತ ಆಶ್ರಯದಲ್ಲಿ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತೋತ್ಸವ ನಡೆಯಲಿದೆ.
ಫೆಬ್ರವರಿ 15ರಂದು ಶಾಸಕ ಬಿ ಎಂ ನಾಗರಾಜ ಅವರು ಉದ್ಘಾಟನೆ ಮತ್ತು ಅಧ್ಯಕ್ಷತೆ, ಕರ್ನಾಟಕ ಸರ್ಕಾರ ಪರಿಶಿಷ್ಟ ಪಂಗಡಗಳ ಕಲ್ಯಾಣ ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ ನಾಗೇಂದ್ರ, ಸಂಸದರಾದ ಕೊಪ್ಪಳ ಲೋಕಸಭಾ ಕ್ಷೇತ್ರದ ಕರಡಿ ಸಂಗಣ್ಣ, ಬಳ್ಳಾರಿ ರಾಜ್ಯಸಭಾ ಕ್ಷೇತ್ರದ ಡಾ ಸೈಯದ್ ನಾಸಿರ್ ಹುಸೇನ್, ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಡಾ ಚಂದ್ರಶೇಖರ್ ಬಿ ಪಾಟೀಲ್, ಶಶಿಲ್ ಜಿ ನಮೋಶಿ, ವೈ.ಎಂ.ಸತೀಶ್, ವಿಶೇಷ ಆಹ್ವಾನಿತರು.
ತಾಲೂಕ ಲಂಬಾಣಿ ಬಂಜಾರ ಸಂತ ಸೇವಾಲಾಲ್ ಸಂಘದ ತಾಲೂಕ ಅಧ್ಯಕ್ಷರು, ಪದಾಧಿಕಾರಿಗಳು, ಮುಖ್ಯ ಭಾಷಣಕಾರರು, ಉಪನ್ಯಾಸಕರು, ರಾಷ್ಟ್ರೀಯ ಸಾಕ್ಷರತಾ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ, ನಗರಸಭಾ ಪಟ್ಟಣ ಪಂಚಾಯತ್ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಭಾಗವಹಿಸುವರು ಎಂದು ತಿಳಿಸಲಾಗಿದೆ.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ತಾಲೂಕ ಕಾರ್ಯನಿರ್ವಾಹಕ ದಂಡಾಧಿಕಾರಿ ತಹಶೀಲ್ದಾರ್ ಶಂಶೇ ಆಲಂ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಎಸ್ ದಂಡಪ್ಪನವರ್, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಬಿ ರಾಜೇಶ್ವರಿ, ನಗರಸಭಾ ಪೌರಾಯುಕ್ತ ಗುರುಪ್ರಸಾದ್ ಅವರು ಸರ್ವರಿಗೂ ಸ್ವಾಗತ ಬಯಸಿದರು.
ತಾಲೂಕ ಕ್ರೀಡಾ ಮೈದಾನದಿಂದ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರದ ಭವ್ಯ ಅದ್ದೂರಿಯಾಗಿ ನೃತ್ಯಗಳೊಂದಿಗೆ ಮುಖ್ಯರಸ್ತೆಯಿಂದ ಮೆರವಣಿಗೆ ತಾಲೂಕ ಕಚೇರಿ ಮೈದಾನಕ್ಕೆ ವೇದಿಕೆ ಕಾರ್ಯಕ್ರಮ ಜರುಗುವವು ಎಂದು ತಿಳಿಸಿದರು.
