IMG-20240113-WA0005

ಜನವರಿ 16 ರಿಂದ 437ನೇ ಖಾದರ್ ಶಾ ಮೌಲಾ ಉರುಸ್ ಮುಬಾರಕ್

ಕರುನಾಡ ಬೆಳಗು ಸುದ್ದಿ 

ಸಿರುಗುಪ್ಪ,13- ಐತಿಹಾಸಿಕ ಪ್ರಸಿದ್ಧರಾದ ಹಜರತ್ ಸೈಯದ್ ಶಾ ಖಾದರ್ ಶಾ ಸಿರಾಜುದ್ದೀನ್ ಅಲ್ ಮಾರುಫ್ ಖಾದರ್ ಶಾ ಮೌಲಾ ಖಾದ್ರಿ ರೆಹಮತುಲ್ಲಾ ಅಲೈಹಿ ಇವರ ಜನವರಿ 16 ಮಂಗಳವಾರ ಗಂಧಾ ಮಹೋತ್ಸವ ವೈಭವದಿಂದ ಸಂದಲ್ ಜೂಲುಸ್ 17ರಂದು ಬುಧವಾರ ಉರುಸ್ ಮುಬಾರಕ್ 18ರಂದು ಗುರುವಾರ ಜಿಯಾರತ್ ಶರೀಫ್ ಪ್ರತಿ ವರ್ಷದ ಪದ್ಧತಿ ಪ್ರಕಾರ ಈ ಬಾರಿಯೂ ಸಕಲ ಸಂಪ್ರದಾಯಕ ಧಾರ್ಮಿಕ ಸಾಂಸ್ಕೃತಿಕ ಪರಂಪರೆಯಂತೆ ಸಮಾಜಮುಖಿ ಚಿಂತಕರು ಶಿಕ್ಷಣ ಪ್ರೇಮಿ ಹಜರತ್ ಸೈಯದ್ ಶಾ ಮೋಹೀದ್ದೀನ್ ಖಾದ್ರಿ ಸಾಹೇಬ್ ತೆಕ್ಕಲಕೋಟೆ ಮುತವಲ್ಲಿ ಹಜರತ್ ಸೈಯದ್ ಶಾ ಖಾದರ್ ಶಾ ಸಿರಾಜುದ್ದೀನ್ ಅಲ್ ಮಾರುಫ್ ಖಾದರ್ಶಾ ಮೌಲಾ ಖಾದ್ರಿ ರ.ಅ ಹಾಗೂ ಹಜರತ್ ಸೈಯದ್ ಶಾ ಅಲಿ ರಜತ್ ಬಾದಷ ಖಾದ್ರಿ ರ.ಅ ಇವರ ಘನ ಅಧ್ಯಕ್ಷತೆಯಲ್ಲಿ ಸಂದಲ್ ನಗರದ ಸೌದಗರ್ ಮೊಹಲ್ಲಾ ಸಿರುಗುಪ್ಪ ಹಜರತ್ ಸೈಯದ್ ಶಾ ಅಬ್ದುಲ್ ಖಾದರ್ ಖಾದ್ರಿ ಉರುಫ್ ಜಿಗಳಿ ಪೀರ ಸಾಹೇಬ್ ಖಾದ್ರಿ ಇವರ ನಿವಾಸದಿಂದ ಹೊರಡುವದು ಉರುಸ್ ದಿನ ಸಂಜೆ ಸರ್ವ ಬಾಂಧವರಿಗೂ ಸದ್ಭಕ್ತರಿಗೂ ಊಟದ ವ್ಯವಸ್ಥೆ ಏರ್ಪಡಿಸಲಾಗಿದೆ ರಾತ್ರಿ ಮಹಾರಾಷ್ಟ್ರದ ಪುಣೆವಾಲಾ ಅಲ್ ಹಾಜ್ ಸುಲ್ತಾನ್ ನಜಾ ತಂಡದವರಿಂದ ಮಹೆಫಿಲೇ ಖಾವಾಲಿ ನಂತರ ಜಿಯಾರತ್ ಕಾರ್ಯಕ್ರಮಗಳು ಜರುಗುತ್ತವೆ ಸರ್ವರು ಭಾಗವಹಿಸಿ ಮಹಾತ್ಮರ ದರ್ಶನ ಪಡೆಯಬೇಕು ಎಂದು ದರ್ಗಾದ ಮುಜಾವರ್ ಹಜರತ್ ಎ ಟೈಲರ್ ಮಹೆಬೂಬ್ ಸುಭಾನ್ ಸಾಹೇಬ್ ಮತ್ತು ಅವರ ಮಕ್ಕಳಾದ ಎ ಮೊಹಮ್ಮದ್ ಗೌಸ್, ಎ ಮೊಹಮ್ಮದ್ ಇಬ್ರಾಹಿಂ, ಎ ಟಿ ಮೊಹಮ್ಮದ್ ಹಾಜಿ ಅವರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!