07. Guruvandana news Photo

                  ಶಿಕ್ಷಕ ವೃತ್ತಿ ಪವಿತ್ರವಾದದ್ದು – ಬಿ. ಕಲ್ಲೇಶ

ಕರುನಾಡ ಬೆಳಗು ಸುದ್ದಿ
ಕೊಪ್ಪಳ,೦೭- ವಿದ್ಯಾರ್ಥಿಗಳು ಗುರುಸ್ಮರಣೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ಹಾಗೆಯೇ ೧೮ ವರ್ಷಗಳ ಹಿಂದೆ ಈ ಶಾಲೆಯಲ್ಲಿ ಓದಿ, ಬೇರೆ ಬೇರೆ ಕಡೆಗಳಲ್ಲಿ ಚದುರಿ ಹೋಗಿ , ವಿವಿಧ ಉದ್ಯೋಗದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಪುನಃ ಒಂದೆಡೆ ಸೇರಿ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನಮಗೆ ಸಂತಸವನ್ನು ಉಂಟು ಮಾಡಿದೆ. ಗುರುಗಳಿಗೆ ವಿದ್ಯಾರ್ಥಿಗಳೇ ಆಸ್ತಿಗಳು. ಹೀಗಾಗಿ ಈ ಹಿಂದೆ ನಾನು ಶಿಕ್ಷಕನಾಗಿ ಸೇವೆ ಸಲ್ಲಿಸುವಾಗ ಇದ್ದ ತೃಪ್ತಿ ಇಂದು ನನಗೆ ಒಬ್ಬ ಅಧಿಕಾರಿಯಾಗಿ ತೃಪ್ತಿ ಸಿಗುತ್ತಿಲ್ಲ. ಹೀಗಾಗಿ ಶಿಕ್ಷಕ ವೃತ್ತಿ ಪವಿತ್ರವಾದದ್ದು. ಶಿಕ್ಷಕನಾಗಿ ಸೇವೆ ಸಲ್ಲಿಸಿದ ದಿನಗಳನ್ನು ನಾನು ಸದಾ ಸ್ಮರಿಸುತ್ತಿರುತ್ತೇನೆ ಎಂದು ಬೆಂಗಳೂರಿನ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಬಿ. ಕಲ್ಲೇಶ ಹೇಳಿದರು.
ಅವರು ಕೊಪ್ಪಳ ತಾಲೂಕಿನÀ ಹಿರೇಸಿಂದೋಗಿ ಸರಕಾರಿ ಪ್ರೌಢಶಾಲೆ ಹಿರೇಸಿಂದೋಗಿಯಲ್ಲಿ ೨೦೦೪ -೨೦೦೫ ನೇ ಸಾಲಿನ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಕಪ್ಪತ್ತಮಠದ ಚಿದಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಹಿರೇಸಿಂದೋಗಿಯ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ನಿರ್ಮಲವ್ವ ಷಣ್ಮುಖನ ಗೌಡ ಮಾಲಿಪಾಟೀಲ, ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಕೇಶವರೆಡ್ಡಿ ಮಾದಿನೂರು, ರೇವಯ್ಯ ಮಠದ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ದೇವಪ್ಪ ಬಚ್ಚಕ್ಕನವರ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಮಲ್ಲಪ್ಪ ಗುಡದಣ್ಣವರ, ಎಸ್. ಡಿ .ಎಂ. ಸಿ. ಮಾಜಿ ಅಧ್ಯಕ್ಷರಾದ ಯಂಕಣ್ಣ ಕೊಳ್ಳಿ, ಹೊನ್ನಪ್ಪ ಗದ್ದಿ, ಕಾಲೇಜು ಅಭಿವೃದ್ಧಿ ಸಮಿತಿ ಮಾಜಿ ಉಪಾಧ್ಯಕ್ಷರಾದ ಪ್ರಭುಗೌಡ ಮೈನಹಳ್ಳಿ, ಶಿಕ್ಷಣ ಪ್ರೇಮಿಯಾದ ರೇವಣಸಿದ್ದನಗೌಡ, ನಿವೃತ್ತ ಶಿಕ್ಷಕರಾದ ಸದಾಶಿವರೆಡ್ಡಿ ಮಾದಿನೂರು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಚೆನ್ನಯ್ಯ ಪೊಲೀಸಪಾಟೀಲ, ಎಸ್. ಡಿ. ಎಂ. ಸಿ.ಸದಸ್ಯರಾದ ಚಂದ್ರಶೇಖರ, ಸುಭಾಷ್ ರೆಡ್ಡಿ ಮೈನಹಳ್ಳಿ, ಮರಳಯ್ಯ ಮಠದ, ಚನ್ನನಗೌಡ ಮಾಲಿ ಪಾಟೀಲ, ಸಹಕಾರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರಾಜು ಎನ್. ಕೊಳ್ಳಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ರೇವಪ್ಪ ಬಿಸರಳ್ಳಿ, ಹಿರಿಯರಾದ ಸಿಡ್ಲಪ್ಪ ಡಂಬ್ರಹಳ್ಳಿ.

ಸುಭಾಷ್ ಚಂದ್ರ ಬೋಸ್ ಯುವಕ ಸಂಘದ ಅಧ್ಯಕ್ಷರಾದ ಬಸನಗೌಡ ಶಂಕರಗೌಡ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷರಾದ ವೀರೇಶ ಸಜ್ಜನ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಗುರುಗಳಾದ ವೀರಣ್ಣ ವಾಲಿ, ಮಹಾಂತೇಶ ಚೆನ್ನಿ ನಾಯ್ಕರ್, ರೇಣುಕಾ ಹಡಗಲಿ, ಸುಮನ್ ಗಜಕೋಶ, ಸೋಮರೆಡ್ಡಿ ಡಂಬರಹಳ್ಳಿ, ನಾಗರಾಜ ಸುನಗ, ಸುಧೀಂದ್ರ ಜೋಶಿ ಹಾಗೂ ನಿವೃತ್ತ ಸೈನಿಕರಾದ ಶಂಕರಗೌಡ ಎನ್ .ಕುರಡಗಿ, ರಾಮಣ್ಣ ಬರಡ್ಡಿ, ದೇವರೆಡ್ಡಿ ಹೆಚ್. ಮಾದಿನೂರು, ಹನುಮನಗೌಡ ಆರ್. ಹಸರಗನ್ನವರ್, ಪಾಂಡುರಂಗ ಹಳೇಮನಿ, ಭೀಮೇಶ್ ಎಚ್. ಭೋವಿ, ವೆಂಕನಗೌಡ ಮಾಲಿಪಾಟೀಲ, ಸಿದ್ದಲಿಂಗಯ್ಯ ಮುಂಡರಗಿಮಠ, ಪ್ರಗತಿಪರ ರೈತರಾದ ಭೂಮರೆಡ್ಡಿ ಮೂಲಿಮನಿ ಇವರನ್ನು ಸನ್ಮಾನಿಸಲಾಯಿತು. ಚಂದ್ರಶೇಖರ ಗದ್ದಿ ಪ್ರಾರ್ಥಿಸಿದರು. ಭುವನೇಶ್ವರಿ ಕುರುಡಗಿ ಸ್ವಾಗತಿಸಿದರು. ಎಂ. ಆರ್. ಡೊಳ್ಳಿನ, ಮಂಜುಳಾ ಮಕಾಳೆ ನಿರೂಪಿಸಿದರು. ಸೌಮ್ಯವಾಲಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!