ಜಿಎಸ್ಟಿ ರದ್ದುಗೊಳಿಸಲು ಏಲ್ಐಸಿ ಉದ್ಯೋಗ ಮತ್ತು ಪ್ರತಿನಿಧಿಗಳ, ಸಂಘಗಳಿಂದ ಮನವಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 6- ವ್ಯಕ್ತಿಗತ ರಕ್ಷಣ ಗಾಗಿ ಸಾರ್ವಜನಿಕರು ತುಂಬುವ ಎಲ್ ಐ ಸಿ ಪ್ರೀಮಿಯಂ ಮೇಲೆ ಹಾಕಲಾಗಿರುವ ಜಿಎಸ್ಟಿಯನ್ನು ಕೂಡಲೇ ರದ್ದುಗೊಳಿಸಲು, ಲೋಕಸಭೆಯಲ್ಲಿ ಧ್ವನಿ ಎತ್ತಬೇಕೆಂದು, ಬಳ್ಳಾರಿ ಲೋಕಸಭಾ ಸದಸ್ಯರು, ಟೀ, ತುಕಾರಾಂ ಅವರಿಗೆ ಇಂದು,ಸಂಡೂರಿನಲ್ಲಿ, ಭಾರತೀಯ ಜೀವವಿಮೆ, ಉದ್ಯೋಗ ಮತ್ತು ಪ್ರತಿನಿಧಿಗಳ, ಸಂಘಗಳಿಂದ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಆಲ್ ಇಂಡಿಯಾ ಇನ್ಸೂರೆನ್ಸ್ ಎಂಪ್ಲಾಯೇಸ್ ಅಸೋಸಿಯೇಷನ್, ಬಳ್ಳಾರಿ ಎರಡನೇ, ಬ್ರಾಂಚಿನ,, ಪ್ರಧಾನ ಕಾರ್ಯದರ್ಶಿಗಳು, ಸೂರ್ಯನಾರಾಯಣ್ ಅವರು ಮಾತನಾಡುತ್ತಾ, ತಮ್ಮ ವೈಯಕ್ತಿಕ ಜೀವನ ಭದ್ರತೆಗಾಗಿ ತುಂಬವ ಎಲ್ಐಸಿ ಪ್ರೀಮಿಯಂ ಮೇಲೆ ಜಿಎಸ್ಟಿ ಹೇರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು. ಈಗಾಗಲೇ ಹಲವಾರು ಬಾರಿ ಉದ್ಯೋಗ ಮತ್ತು ಪ್ರತಿನಿಧಿಗಳ ಸಂಘದಿಂದ ಪ್ರತಿ ಘಟನೆ ಮಾಡಿ ಸರ್ಕಾರಕ್ಕೆ ಮನವಿ ಕಳಸಲಾಗಿದೆ ಎಂದರು.
ಲೋಕಸಭಾ ಸದನದಲ್ಲಿ ಬಳ್ಳಾರಿ ಲೋಕಸಭಾ ಸ್ಥಾನಕ್ಕೆ ಪ್ರತಿನಿಧಿಸುತ್ತವ ತಾವು ಸದನದಲ್ಲಿ ಧ್ವನಿ ಎತ್ತಬೇಕೆಂದು ಮನವಿ ಮಾಡಿದರು.. ಇದರಿಂದ ಇಡೀ ದೇಶದ ಜನತೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು. ಇನ್ನು ಆದಾಯ ತೆರಿಗೆ ಕಡಿತಗೊಳಿಸುವ ವಿಷಯದಲ್ಲಿ ಕೂಡ ಜನತೆಯ ಪರವಾಗಿ ಧ್ವನಿ ಎತ್ತಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ, ಆಲ್ ಇಂಡಿಯಾ ಇನ್ಸೂರೆನ್ಸ್ ಎಂಪ್ಲಾಯಿಸ್ ಅಸೋಸಿಯೇಷನ್, ಬಳ್ಳಾರಿ ಎರಡು ಶಾಖೆಗಳ ಪ್ರತಿನಿಧಿಗಳು, ದತ್ತಾತ್ರೇಯ, ಪಾರ್ಥಸಾರಥಿ, ಕ್ಲಾಸ್ ಒನ್ ಆಫೀಸರ್, ವಿಶ್ವನಾಥ್, ಅಭಿವೃದ್ಧಿ ಶಾಖೆ ಅಧಿಕಾರಿಗಳು ಶಶಿಧರ್, ಗಳ ಜೊತೆಗೆ ಎಲ್ಐಸಿ ಪ್ರತಿನಿಧಿಗಳು ಇದ್ದರು. ಮನವಿ ಪತ್ರವನ್ನು ಸ್ವೀಕರಿಸಿದ ಲೋಕಸಭಾ ಸದಸ್ಯರು ಟಿ ತುಕಾರಾಂ ಅವರು ಈ ವಿಷಯಗಳ ಮೇಲೆ ತಾವು ಲೋಕಸಭೆಯಲ್ಲಿ ಧ್ವನಿ ಎತ್ತುವುದಾಗಿ ತಿಳಿಸಿದರು.
