WhatsApp Image 2024-07-10 at 4.55.22 PM

ದಾನ ಧರ್ಮದಿಂದ ಜೀವನ ಸಾರ್ಥಕ ಪಡಸಿಕೊಳ್ಳಬಹುದು : ಪಿಎಸ್ಐ ವೆಂಕಟಸ್ವಾಮಿ

ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 101- ಸಂಪತ್ತು ಕೂಡಿಟ್ಟು ಕೊಂಡಷ್ಟು ಸಮಸ್ಯೆ ಹೆಚ್ಚು ಅದನ್ನು ಸದುಪಯೋಗಪಡಿಸಿ ಕೊಳ್ಳಬೇಕಾದಲ್ಲಿ ಹೀಗೆ ದಾನ ಧರ್ಮ ಮಾಡಿ ಸಾರ್ಥಕಗೊಳಿಸಿಕೊಳ್ಳಬೇಕು, ಎಲ್ಲರೂ ತಮ್ಮ ತಮ್ಮ ಕೈಲಾದಷ್ಟು ಸಮಾಜಕ್ಕೆ ಅದು ಹಸಿವು ಮತ್ತು ಜ್ಞಾನಕ್ಕಾಗಿ ದಾನ ನೀಡಿದಲ್ಲಿ ಬಡವರಿಗೆ ಸಹಕಾರಿಯಾಗುತ್ತದೆ ಎಂದು ಕೌಲ್ ಬಜಾರ್ ಠಾಣೆಯ ಪಿ.ಎಸ್.ಐ ವೆಂಕಟಸ್ವಾಮಿ ತಿಳಿಸಿದರು.
ಅವರು ನಗರದ ಕೌಲ್ ಬಜಾರ್ ಪ್ರದೇಶದಲ್ಲಿನ ಜಾಗೃತಿನಗರದ ಕರ್ನಾಟಕ ರಾಜ್ಯ ಸ್ಲಂ ಮಕ್ಕಳ ಶೈಕ್ಷಣಿಕ ಪ್ರಗತಿಯ ಚಿಂತನಾ ಸಂಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ  ಸಂಸ್ಕಾರ ಅನಾಥಾಶ್ರಮದಲ್ಲಿ ಜಿ.ಕೆ ಫೌಂಡೇಷನ್ ವತಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಗ ಮತ್ತು ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಜಿಕೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಜಿಕೆ ಸ್ವಾಮಿ ಮಾತನಾಡಿ, ಬಹಳಷ್ಟು ಜನ ಬಡ ವಿದ್ಯಾರ್ಥಿಗಳು ಬಡತನದಿಂದ ಅಥವಾ ಪೋಷಕರ  ನಿರ್ಲಕ್ಷದಿಂದಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಅಂತ ಮಕ್ಕಳನ್ನು ಕರೆತಂದು ಅಕ್ಷರ ಜ್ಞಾನವನ್ನು ನೀಡುತ್ತಿರುವ ಸಂಸ್ಕಾರ ಸಂಸ್ಥೆ ಕೆಲಸ ಅನನ್ಯವಾದದು, ಇದು ಹೀಗೆ ಮುಂದುವರಿಸಲಿ ಎಂದು ಸಂಸ್ಥಾಪಕರಾದ ವಿರೂಪಾಕ್ಷಯ್ಯನವರಲ್ಲಿ ಕೇಳಿಕೊಳ್ಳುತ್ತೇನೆ. ಮತ್ತು ಈ ಸಂಸ್ಥೆಯನ್ನು ನಡೆಸಲು ಏನಾದರೂ ತೊಂದರೆ ಬಂದಲ್ಲಿ ನಮ್ಮ ಜಿಕೆ ಫೌಂಡೇಶನ್ ವತಿಯಿಂದ ಸಹಾಯ ಸಹಕಾರ ಪಡೆದುಕೊಳ್ಳಬಹುದು, ನಾನು ಅದಕ್ಕೆ ಸದಾ ಸಿದ್ಧ ಎಂದು ತಿಳಿಸಿದರು.
ಸಂಸ್ಥೆಯ ಸಂಸ್ಥಾಪಕರಾದ ಬಿ.ಎಚ್.ಎಂ ವಿರೂಪಾಕ್ಷಯ್ಯ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಹೆಚ್ಚಾಗಿ ತಂದೆ ಇಲ್ಲದ ತಾಯಿ ಇಲ್ಲದ ಮತ್ತು ತಂದೆ ತಾಯಿ ಇಬ್ಬರು ಇಲ್ಲದ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ, ಅವರ ವಿದ್ಯಾಭ್ಯಾಸಕ್ಕಾಗಿ ಮತ್ತು ಮುಂದಿನ ಭವಿಷ್ಯಕ್ಕಾಗಿ ಸಂಸ್ಥೆವತಿಯಿಂದ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ ಇಂತಹ ವಿದ್ಯಾರ್ಥಿಗಳಿಗಾಗಿ ಈ ರೀತಿಯಾಗಿ ದಾನ ಧರ್ಮ ಮಾಡಿದಲ್ಲಿ ಮಕ್ಕಳಿಗೆ ಸಹಕಾರಿಯಾಗುತ್ತದೆ, ಇದರಿಂದ ಅವರ ಶೈಕ್ಷಣಿಕ ಪ್ರಗತಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಗೀತಾ ವಿರೂಪಾಕ್ಷಯ್ಯ, ಪುಸ್ತಕ ಮತ್ತು ಬ್ಯಾಗ್ ದಾನಿಗಳಾದ ಜಿ.ಕೆ ಸ್ವಾಮಿ, ವೆಂಕಟೇಶ್ ಸ್ವಾಮಿ, ಪವನ್ ಕುಮಾರ್, ಸಂತೋಷ್, ಸ್ವಾಮಿ ಜಗನ್ ನಾಗ,ಆನಂದ್ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!