IMG-20240814-WA0049

ಬಿಸಿಎಂ ಬಾಲಕರ ವಸತಿ ನಿಲಯದ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 14- ತಾಲೂಕಿನ ಸಂಗಾಪುರ ಗ್ರಾಮದಲ್ಲಿರುವ ಹಿಂದುಳಿದ ವರ್ಗ ಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುವ ಬಾಲಕರ ವಸತಿ ನಿಲಯದಲ್ಲಿ ಕಳಪೆ ಆಹಾರ, ಕೊಳತೆ ತರಕಾರಿ ಬಳಸುವದನ್ನು ವಿರೋಧಿಸಿ ವಿದ್ಯಾರ್ಥಿಗಳು ಎಸ್ ಎಫ್ ಐ ನೇತೃತ್ವದಲ್ಲಿ ಹಾಸ್ಟೆಲ್ ಮುಂದೆ ಊಟ ಮಾಡದೇ ದಿಡೀರನೆ ಪ್ರತಿಭಟನೆ ನಡೆಸಿದರು.

ಎಸ್.ಎಫ್.ಐ ಸಂಘಟನೆಯ ರಾಜ್ಯ ಅಧ್ಯಕ್ಷ ಅಮರೇಶ್ ಕಡಗದ ಮಾತನಾಡಿ ವಿದ್ಯಾರ್ಥಿಗಳಿಗೆ ದಿನ ನಿತ್ಯದ ಊಟ ಗುಣಮಟ್ಟ ದ ಆಹಾರ ನೀಡಬೇಕು.
ವಾರ್ಡನ್ ಕೊಳೆತ ತರಕಾರಿ. ಬಿಟ್ ರೂಟ್. ಉಲಗಡ್ಡಿ ಟೊಮೊಟೊ. ಗಜ್ಜರಿ.ಹಾಕಿದ್ದು ಮಕ್ಕಳು ಅರೋಗ್ಯ ಕೆಡಲು ಕಾರಣ ವಾಗುತ್ತೆ ಹಾಸ್ಟೆಲ್ ನಲ್ಲಿ ಸರಿಯಾದ ಮೂಲಭೂತ ಸೌಲಭ್ಯ ಕೂಡುವಲ್ಲಿ ಇಲಾಖೆ ವಿಪಲವಾಗಿದೆ.

ಕರೆಂಟ್ ಸ್ವಿಚ್ ಬೋರ್ಡ್ ಮುರಿದು ಹೋದರು ಇಲ್ಲಿಯವರೆಗೆ ಮಾಡಿಸಿಲ್ಲ ಕೂಡಲೇ ನಿಲಯ ಪಾಲಕರ ಮೇಲೆ ಶಿಸ್ತು ಕ್ರಮ ತಗೆದು ಕೊಳ್ಳಬೇಕು.

ಹಾಸ್ಟೆಲ್ ಗೆ ಹಿಂದುಳಿದ ವರ್ಗ ಗಳ ಕಲ್ಯಾಣ ಅಧಿಕಾರಿ ಗಳನ್ನು ಕರೆಯಿಸಿ ಸಮಸ್ಯೆಗಳ ಪಟ್ಟಿ ಯ ಮನವಿಯನ್ನು ನೀಡಲಾಗಿದೆ.

ಬೇರೆ ಬೇರೆ ದೂರದ ಗ್ರಾಮದಗಳಿಂದ ಬಂದು ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿ ಗಳಿಗೆ ಸರಿಯಾದ ಗುಣಮಟ್ಟದ ಆಹಾರ. ತರಕಾರಿ ಇತರೆ ಪದಾರ್ಥಗಳು ಮಕ್ಕಳಿಗೆ ಕೊಡಬೇಕು ಎಂದರು.

ತಾಲೂಕ ಅಧಿಕಾರಿ ಗಳಿಗೆ ಮನವಿ ಸ್ವಿಕರಿಸಿ ಮಾತನಾಡಿ 2-3 ದಿನಗಳಲ್ಲಿ ಎಲ್ಲಾ ಸಮಸ್ಯೆ ಪರಿಹಾರ ಮಾಡು ತ್ತವೆಂದು ಒಪ್ಪಿಕೊಂಡ ಮೇಲೆ ಪ್ರತಿಭಟನೆ ಕೈಬಿಡಲಾಯಿತು.

ಈ ಸಂದರ್ಭ ದಲ್ಲಿ ಗ್ಯಾನೇಶ್ ಕಡಗದ ಶಿವುಕುಮಾರ್. ಮುತ್ತಣ್ಣ. ಬಾಳಪ್ಪ.ರವಿ. ಅಮರೇಶ್. ದಾನಪ್ಪ. ದೇವರಾಜ್ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!