ಭರತ್ ಕಂದಕೂರ ಸೆರೆಹಿಡಿದ ʻಅಂಜನಾದ್ರಿʼಯ ಚಿತ್ರಕ್ಕೆ ಚಿನ್ನದ ಪದಕ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 31- ಫೆಡರೇಷನ್ ಆಫ್ ಇಂಡಿಯನ್ ಫೊಟೋಗ್ರಫಿಯ ಸಹಯೋಗದಲ್ಲಿ ಪಶ್ಚಿಮ ಬಂಗಾಳದ ಕಲ್ಕತ್ತಾ ಶಾಡೋ ಲೈನ್ಸ್ ಸಂಸ್ಥೆ ಏರ್ಪಡಿಸಿದ್ದ ಶಾಡೋಸ್ಕೋಪ್-೨೦೨೪ ರಾಷ್ಟ್ರ ಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಕೊಪ್ಪಳದ ಪತ್ರಿಕಾ ಛಾಯಾಗ್ರಾಹಕ ಭರತ್ ಕಂದಕೂರ ಸೆರೆಹಿಡಿದ ʻಅಂಜನಾದ್ರಿಯಲ್ಲಿ ಭಕ್ತರುʼ ಶೀರ್ಷಿಕೆಯ ಛಾಯಾಚಿತ್ರ ಕಲ್ಕತ್ತಾ ಶಾಡೋ ಲೈನ್ಸ್ನ ಚಿನ್ನದ ಪದಕ  ಪಡೆದುಕೊಂಡಿದೆ.

ಅವಿಶ್ವಾಸನೀಯ ಭಾರತʼ ವಿಷಯಾಧಾರಿತವಾಗಿದ್ದ ಈ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿರುವ ಈ ಚಿತ್ರವನ್ನು ಹನುಮಮಾಲೆ ವಿಸರ್ಜನೆ ಸಂದರ್ಭದಲ್ಲಿ ಸೆರೆಹಿಡಿಯಲಾಗಿತ್ತು. ಮಾಲೆ ವಿಸರ್ಜನೆಗಾಗಿ ಸೂರ್ಯೋದಯ ಸಮಯದಲ್ಲಿ ಅಂಜನಾದ್ರಿ ಏರುತ್ತಿರುವ ಹನುಮಮಾಲಾಧಾರಿಗಳನ್ನು ಒಳಗೊಂಡ ಈ ಚಿತ್ರದಲ್ಲಿ ಅಂಜನಾದ್ರಿಯ ಮನಮೋಹಕ ವಾತಾವರಣವನ್ನು ವಿಹಂಗಮವಾಗಿ ಸೆರೆಹಿಡಿಯಲಾಗಿದೆ.

ದೇಶದ ವಿವಿಧ ರಾಜ್ಯಗಳ 310 ಜನ ಛಾಯಾಗ್ರಾಹಕರ ಸಾವಿರಕ್ಕೂ ಅಧಿಕ ಸಂಖ್ಯೆಯ ಛಾಯಾಚಿತ್ರಗಳು ಸ್ಪರ್ಧೆಗೆ ಆಗಮಿಸಿದ್ದವು. ಖ್ಯಾತ ಛಾಯಾಗ್ರಾಹಕರಾದ ಜಿನೇಶ್ ಪ್ರಸಾದ್, ಸೌಮೆನ್ ಮಂಡಲ್, ಅರೂಪ್ ಭಟ್ಟಾಚಾರ್ಯಜಿ ತೀರ್ಪುಗಾರರಾಗಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!