ಗುರು ಎಂದರೆ ಅಜ್ಞಾನದಿಂದ ಸುಜ್ಞಾನದ ಹಾದಿಗೆ ಕರೆದೂಯ್ಯೂವ ಬೆಳಕು : ಶಾಸಕ ಹಿಟ್ನಾಳ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 5 ನಗರದ ಬಹದ್ದೂರ ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಇಂದು ಹಮ್ಮಿಕೊಳ್ಳಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರಾದ ರಾಘವೇಂದ್ರ ಹಿಟ್ನಾಳರವರು ಗುರು ಎಂದರೆ ವ್ಯಕ್ತಿಅಲ್ಲ ಜ್ಯೊತಿ ಅಜ್ಞಾನದಿಂದ ಸುಜ್ಞಾನದ ಹಾದಿಗೆ ಕರೆದೂಯ್ಯೂವ ಬೆಳಕು ಶಿಕ್ಷಕರು ದೇಶದ ನಿರ್ಮಾಪಕರು ಶಿಕ್ಷಕರ ಪಾತ್ರ ದೇಶಕ್ಕೆ ಹಾಗೂ ಪ್ರತಿಯೊಬ್ಬ ಜೀವನಕ್ಕೆ ಮುಖ್ಯವಾದದ್ದು. ಗುರುವಿಲ್ಲದೆ ಜೀವನ ಅಪರಿಪೂರ್ಣ ಪರಿಪೂರ್ಣ ಅರ್ಥ ಬರಿತವಾದ ಜೀವನಕ್ಕೆ ಗುರುವಿನ ಮಾರ್ಗದರ್ಶನ ಅತ್ಯಮೂಲ್ಯವಾದದು. ಎಂದು ಹೇಳಿದರು.
ಮಾಜಿ ಸಂಸದರು ಸಂಗಣ್ಣ ಕರಡಿರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂದೆ ಗುರಿ ಹಿಂದೆ ಗುರು ಇರಬೇಕು ಶಿಕ್ಷಕರು ಮನಸ್ಸು ಮಾಡಿದರೆ ಉನ್ನತ ಮಟ್ಟದಲ್ಲಿ ಸಾಧನೆಯನ್ನು ಮಾಡಬಹುದು. ಕ್ಷಮಾಶೀಲನಾಗಿ ದಯಾಮಯನಾಗಿ ಮಕ್ಕಳ ಮನಸ್ಸಿನಲ್ಲಿ ಪ್ರೀತಿಯಿಂದ ಅಕ್ಷರವೆಂಬ ಬೀಜ ಬೀತುವ ಕೆಲಸವನ್ನು ಪ್ರತಿಯೊಬ್ಬ ಶಿಕ್ಷಕರು ಮಾಡಬೇಕು. ಬೀಜ ಬಿದ್ದು ಮೊಳಕೆ ಒಡೆದು ಸಸಿಯಾಗಿ ಹೆಮ್ಮಮರವಾಗಿ ಎಲ್ಲರಿಗೆ ಯಾವರೀತಿ ನೆರಳನ್ನು ಕೊಡುತ್ತದೆ. ಅದೇ ರೀತಿಯಾಗಿ ಶಿಕ್ಷಕರು ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವಂತೆ ಮಾಡುವುದು ಶಿಕ್ಷಕರ ಕರ್ತವ್ಯ ವಾಗಿದೆ ಎಂದು ಹೇಳಿದರು.
ಇನೋರ್ವ ಅಥಿತಿಗಳಾದ ಕೆ.ಎಂ.ಸೈಯ್ಯದ ಮಾತನಾಡಿ, ಮಕ್ಕಳೆಂಬ ಬಿಳಿಯ ಹಾಳೆಯ ಮನಸ್ಸಿನ ಮೇಲೆ ಸುಂದರವಾದ ಅಕ್ಷರವನ್ನು ಕೆತ್ತುವಂತ ಶಿಲ್ಪಿಗಳು ಎಂದು ಹೇಳಿದರು.
ನಗರಸಭೆ ಅಧ್ಯಕ್ಷರ ಎಸ್.ಅಮ್ಜದ್ ಪಟೇಲ್ ಮಾತನಾಡಿ, ಓದು ಎಂಬ ಪದ ಉರ್ದು ಪದವಾಗಿದೆ ಅದಕ್ಕೆ ಸನಾತನ ಕಾಲದಿಂದಲು ಪ್ರಮುಖವಾದ ಮಹತ್ವವಿದೆ. ಶಿಕ್ಷಕರು ಇಂತಹ ಓದುವ ಪದವನ್ನು ಮನದಟ್ಟುಮಾಡಿಕೊಡುವ ಶಕ್ತಿ ಅವರಿಗೆ ಇದೆ ಆದರಿಂದ ಶಿಕ್ಷಕರು ಮಕ್ಕಳ ನಿಜವಾದ ಮಾರ್ಗದರ್ಶಕರು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದರಾದ ಕರಡಿ ಸಂಗಣ್ಣ , ಸೈಯ್ಯದ್ ಪೌಂಡೆಷನ್ ಅದ್ಯಕ್ಷರಾದ ಕೆ.ಎಂ.ಸೈಯ್ಯದ್, ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ನಾಟಕ ಆಕಾಡೆಮಿ ಸದ್ಯಸರಾದ ಚಾಂದ ಪಾಷಾ ಕಿಲ್ಲೇದಾರ್ ಹಾಗೂ ಮಹಮ್ಮದ್ ಜೀಲಾನ್ ರವರಿಗೆ ಸಂಸ್ಥಯ ಪರವಾಗಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಕಾರ್ಯಮದಲ್ಲಿ ಯಲ್ಲಪ್ಪ ತಳವಾರ ಗ್ರಾ.ಪಂ. ಅಧ್ಯಕ್ಷರು ಬಹದ್ದೂರು ಬಂಡಿ, ಚಾಂದ ಪಾಷಾ ಕಿಲ್ಲೇದಾರ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಸದಸ್ಯರು, ಮಹಮ್ಮದ್ ಜೀಲಾನ್, ಶರಣಪ್ಪ ಕುರಿ, ಸಂಸ್ಥೆಯ ಕಾರ್ಯದರ್ಶಿ ಆರ್.ಎಚ್.ಅತ್ತನೂರು, ಶಾಲೆಯ ಮುಖ್ಯೋಪ್ಯಾದ್ಯಾಯರು ರೇಣುಕಾ ಅತ್ತನೂರು ಹಾಗೂ ಶಾಲೆಯ ಶಿಕ್ಷಕವೃಂದ ಹಾಗೂ ಮಕ್ಕಳು ಶಾಲೆಯ ಪಾಲಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಪಾರ್ವತಿ ಹಾಗೂ ಶುಭಾ ನಿರೂಪಿಸಿದರು ಶಿಕ್ಷಕಿ ಅಶ್ವಿನಿ ಪಾರ್ಥಿಸಿದರು, ಶಾಲೆಯ ಮುಖ್ಯೋಪ್ಯಾದ್ಯಾಯರು ರೇಣುಕಾ ಅತ್ತನೂರು ಸ್ವಾಗತಿಸಿದರು ಕೊನೆಯಲ್ಲಿ ಲಕ್ಷ್ಮಿ ವಂದಿಸಿದರು. ಕಾರ್ಯಕ್ರಮದ ನಂತರ ಮಕ್ಕಳಿಗೆ ಶಿಕ್ಷಕರಿಗೆ ಸಿಹಿ ವಿತರಿಸಲಾಯಿತು.