ಪ್ರತಿಯೊಬ್ಬರೂ ಕಣ್ಣುಗಳನ್ನು ಸುರಕ್ಷತೆಯಿಂದ ಕಾಪಾಡಿಕೊಳ್ಳಿ : ಶಿವಾನಂದಯ್ಯ ಸ್ವಾಮೀಜಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 5- ಕಣ್ಣುಗಳನ್ನು ಪ್ರತಿಯೊಬ್ಬರೂ ಸರಿಯಾಗಿ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದು ಮಕ್ಕಳ್ಳಿಯ ಶ್ರೀಶಿವಾನಂದಯ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಹೊಸೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೃಂದಾ ಇಂಡಿಯನ್ ಫೌಂಡೇಶನ್, ಜಿಲ್ಲಾ ಎಂ.ಎA.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ವತಿಯಿಂದ ಸಮಗ್ರ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಶಿವಪುತ್ರಪ್ಪ ವನಜಬಾವಿ, ರಾಮನಗೌಡ ಪೋಲಿಸ್ ಪಾಟೀಲ್, ಗ್ರಾಮ ಪಂಚಾಯಿತಿ ಸದಸ್ಯ ಲೋಕನಗೌಡ ಪಾಟೀಲ್, ರವಿಚಂದ್ರ ಭಾವಿಕಟ್ಟಿ, ಹಿರಿಯರಾದ ತೋಟಪ್ಪ ಭಾವಿಕಟ್ಟಿ, ತೇಜನಗೌಡ ಪಾಟೀಲ್, ಹನಮೇಶ ಮೂಲಿ, ಶಂಕರ ಮೂಲಿ, ಶರಣಗೌಡ ಗೌಡ್ರ, ಮಾನಪ್ಪ ಕಜ್ಜಿ, ಶರಣಪ್ಪ ಲಗಳೂರ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.