ಎಸ್‌ಡಿಪಿಐ ಪಕ್ಷದಿಂದ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 13- ನಗರದ ಗಾಂಧಿವೃತ್ತದಲ್ಲಿ ಎಸ್.ಡಿ.ಪಿ.ಐ ಪಕ್ಷದಿಂದ ಕೇಂದ್ರ ಸರ್ಕಾರದ ವಿರುದ್ದ ವಕ್ಫ ಬಿಲ್-೨೦೨೪-ವಿರುದ್ದ ಆಕ್ಷೇಪಣೆ ಸಲ್ಲಿಸಿ ಬೃಹತ ಪ್ರತಿಭಟನೆ ಮೂಲಕ ಉಪತಹಶಿಲದಾರ ಪ್ರಕಾಶ ನಾಯಕರವರಗೆ ಮನವಿ ಸಲ್ಲಿಸಲಾಯಿತು.
ಗಂಗಾವತಿ ನಗರದ ಮಸಿದಿಗಳ ಅಧ್ಯಕ್ಷ ಸಮಾಜದ ಮುಖಂಡ ಅಕ್ತರ ಅನ್ಸಾರಿ, ಸರ್ಕಾರ ಗ್ಯಾರಂಟಿಯೋಜನೆಗಳ ಜಿಲ್ಲಾ ಉಪಾಧ್ಯಕ, ಕಾಂಗ್ರೆಸ ಮುಖಂಡ ಎಸ್.ಬಿ.ಖಾದ್ರಿ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸಲಿಂ ಮನಿಯಾರ, ಮುಸ್ಲಿಂ ಸಮಾಜದ ಗುರುಗಳಾದ ಮೌಲಾ ಅಲಿ ಹಾಪಿಜಾ ಸಾಬ ಮಾತನಾಡಿ ಕೇಂದ್ರ ಸರ್ಕಾರ ವಕ್ಫ ಬಿಲ್-೨೦೨೪ ತಕ್ಷಣವೇ ಕೈಬಿಡಬೇಕು.
ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ. ವಕ್ಪ ಆಸ್ತಿ ನಮ್ಮ ಸಮಾಜದ ಹಿರಿಯರು ಅಲ್ಲಾ ದೇವರ ಹೇಸರಿನಲ್ಲಿ ಬಿಟ್ಟ ನಮ್ಮ ಸಮಾಜದ ಆಸ್ತಿಯಾಗಿದೆ. ಪ್ರಧಾನಮಂತ್ರಿ ನರೆಂದ್ರ ಮೋದಿ,ಕೇಂದ್ರ ಗೃಹ ಸಚಿವ ಅಮಿತ ಷಾರದಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಸಮಾಜದ ವಿರುದ್ದ ಪಿತುರಿಮಾಡಿದರೆ ಮುಂಬರುವ ದಿನದಲ್ಲಿ ೪೦ ಸ್ಥಾನಗಳಿಗೆ ಬಿಜೆಪಿ ಹೋಗುತ್ತದೆ. ಸಿಮಾಂಧ್ರ ಸಿಎಂ ಚಂದ್ರಬಾಬು ನಾಯ್ಡು,ಬಿಹಾರ ಸಿಎಂ ನಿತಿಶ ಕುಮಾರರವರಿರಿಗೆ ಕೊಟ್ಟ ಬೆಂಬಲ ಹಿಂಪಡೆದರೆ ಸ್ಥಿತಿ ಅಯೋಮಯವಾಗುತ್ತದೆ. ಗಂಗಾವತಿ ಶಾಸಕ ಗಾಲಿಜನಾರ್ಧನ ರೆಡ್ಡಿಯವರು ಡಬಲ ಬೆಡ ರೂಂ ಮನೆ ಕಟ್ಟಿಸುವ ಸುಳ್ಳು ಭರವಸೆ ಮೂಲಕ ಶಾಸಕರಾಗಿದ್ದಾರೆ ಜನರಿಗೆ ಚೆನ್ನಾಗಿ ಗೋತ್ತಿದೆ ಎಂದರು.
ಮಹಿಳಾ ನಾಯಕಿ ಆಸಿಫ್ ಪಾತಿಮಾ ಮಾತನಾಡಿ ಮುಸ್ಲಿಂ ಸಮಾಜದ ಆಸ್ತಿಯನ್ನು ಕಬಳಿಸುವ ಹುನ್ನಾರ ನಡೆಯೋದಿಲ್ಲ ಎಂದರು.
ಈ ಸಂದರ್ಭದಲ್ಲಿ ಮಹ್ಮದಲಿ, ಚಾಂದ ಸಲ್ಮಾ, ಫಯಾಜ ಅಹ್ಮದ, ಅಯೂಬೂಬ ಖಾನ, ಅಲ್ತಾಫ್ ಹುಸೇನ ಮುಂತಾದವರು ಉಪಸ್ಥಿತರಿದ್ದರು.
