5

ಪ್ರತಿಯೊಬ್ಬರೂ ಆರೋಗ್ಯದ ಕಡೆ ಗಮನಹರಿಸಲಿ : ಡಾ.ದಯಾನಂದ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, ೧೩- ತಾಲೂಕಿನ ಗುನ್ನಾಳ ಗ್ರಾಮದ ಡಿಪ್ಲೋಮ್ ಕಾಲೇಜನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿAದ ಹಮ್ಮಿಕೊಂಡಿದ್ದ ಪೌಷ್ಠಿಕ ಆರೋಗ್ಯ ಮತ್ತು ಕ್ಷಯರೋಗ, ಮಲೇರಿಯಾ, ಡೆಂಗೆ ಚಿಕ್ಕನ್ ಗುನ್ಯಾ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದಯಾನಂದ ಸ್ವಾಮಿ ಹಿರೇಮಠ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ‘ಆರೋಗ್ಯವೇ ಭಾಗ್ಯ’ದಂತೆ ಎಲ್ಲರೂ ಉತ್ತಮ ಜೀವನ ನಡೆಸುವ ಮೂಲ ಪೌಷ್ಠಿಕ ಆಹಾರ ಸೇವೆನೆಯಿಂದ ಜೀವನನ್ನು ಸರಿಯಾಗಿ ನಡೆಸಲು ಮುಂದಾಗಬೇಕು. ಗ್ರಾಮೀಣ ಭಾಗದಲ್ಲಿ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛ ಸುಂದರವನ್ನಾಗಿ ನಿರ್ಮಾಣಗೊಳಿಸಲು ವಿಶೇಷ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ರೇವಣಸಿದ್ದಯ್ಯ ಮಾಲಗಿತ್ತಿ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಕ್ಷಯ ರೋಗ ಘಟಕ ಕೃಷ್ಣಜಿ, ಆರೋಗ್ಯ ನೀರಿಕ್ಷಣಾಧಿಕಾರಿ ಮಲ್ಲಯ್ಯ, ಆರೋಗ್ಯ ಸುರಕ್ಷಣಾಧಿಕಾರಿ ಕಾವೇರಿ, ಸಮುದಾಯ ಆರೋಗ್ಯ ಅಧಿಕಾರಿ ಅನಸವ್ವ, ಆಶಾ ಕಾರ್ಯಕರ್ತೆಯರಾದ ಪರಿಮಳ ಬಡಿಗೇರ್, ಹನಮಕ್ಕ ಇಂಗಳದಾಳ್, ರೇಣುಕಾ ಯಲ್ಲಮ್ಮ, ಪ್ರಮುಖರಾದ ಲಕ್ಷö್ಮಣ್ ಕುಂಟೆ, ಚಂದ್ರಶೇಖರ್ ಸುಕ್ಕಂದ್, ಕರಬಸಪ್ಪ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!