ಮಹಿಳೆಯರು ಸರಕಾರಿ ಸೌಲಭ್ಯ ಪಡೆದು ಸ್ವಾವಲಂಭಿಗಳಾಗಬೇಕು : ಮಾದಿನೂರ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 28- ಸ್ವ-ಸಹಾಯ ಸಂಘದ ಮಹಿಳೆಯರು ಸರಕಾರದಿಂದ ಬರುವ ಸೌಲಭ್ಯವನ್ನು ಪಡೆದುಕೊಂಡು ಸ್ವಾವಲಂಬನೆ ಜೀವನ ನೆಡಸುವದಕ್ಕೆ ಸಹಕಾರಿಯಾಗುತ್ತದೆ. ಎನ್ಆರ್ಎಲ್ಎಂ ಸಂಜೀವಿನಿ ಒಕ್ಕೂಟದ ಮೂಲಕ ಮಹಿಳೆಯರು ಜೀವನೋಪಾಯ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಕಾರ್ಯಕ್ರಮದ ವಲಯ ಮೇಲ್ವೀಚಾರಕ ಶರಣಪ್ಪ ಮಾದಿನೂರ ತಿಳಿಸಿದರು.
ತಾಲೂಕಿನ ಮಾಟಲದಿನ್ನಿ ಗ್ರಾ.ಪಂ. ಸಭಾಂಗಣದಲ್ಲಿ ಲಕ್ಷ್ಮೀ ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಮಹಿಳೆಯರು ಹಣವನ್ನು ಮನೆಯಲ್ಲಿ ಡಬ್ಬಿಗೆ ಹಾಕಿ ಉಳಿತಾಯ ಮಾಡುತ್ತಿದ್ದರು. ಇದೇ ಕಲ್ಪನೆಯಲ್ಲಿ ಸ್ವಸಹಾಯ ಸಂಘದ ಮೂಲಕ ಮಹಿಳೆಯರು ಉಳಿತಾಯ ಮಾಡುತ್ತಿದ್ದಾರೆ. ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ ಚಟುವಟಿಕೆ ನಡೆಸಲು ಅವಕಾಶಗಳು ಕಡಿಮೆಯಿದ್ದು, ಇಂಥ ಸ್ವಸಹಾಯ ಸಂಘಗಳ ಮೂಲಕ ಮುಖ್ಯವಾಹಿನಿಗೆ ಬರಲು ಅವಕಾಶ ಕಲ್ಪಿಸಲಾಗಿದೆ ಇನ್ನೊ ಮಹಿಳೆಯರು ಸ್ವ ಸಹಾಯ ಸಂಘಗಳನ್ನು ರಚಿಸಿಕೊಂಡು ಉತ್ತಮ ರೀತಿಯಲ್ಲಿ ಬದುಕು ನಡೆಸಬೇಕೆಂದರು.
ಎಂ.ಬಿ.ಕೆ.ಜೋತಿ ಪ್ರಕಾಶ ಕೋರಿ ಮಾತನಾಡಿ ಗ್ರಾಮ ಪಂಚಾಯತ ಮಟ್ಟದಲ್ಲಿ ಒಟ್ಟು ೩೦ ಸಂಘಗಳಿವೆ ಇದರಲ್ಲಿ ೨೯ ಸ್ವ-ಸಹಾಯ ಸಂಘಗಳಿಗೆ ಒಟ್ಟು ೪೯,೦೫೦೦೦ ಸಾಲ ನೀಡಲಾಗಿದೆ ಒಟ್ಟು ೩೫೦ ಜನ ಸದಸ್ಯರನ್ನೊಳಗೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಹೆಚ್ಪಿಟಿ ವಲಯ ಮೇಲ್ವೀಚಾರಕಿ ಶಾರದಾ ಹಿರೇಮಠ, ಎಂ.ಬಿ.ಕೆ.ಜೋತಿ ಕೋರಿ, ಎಲ್ಸಿಆರ್ಪಿ ಗೀತಾ ಮಾಲಿ ಪಾಟೀಲ್, ಮಂಜುಳಾ ಹಡಪದ, ಪಶು ಸಖಿ ಕವಿತಾ ಹಂಚಿನಾಳ, ಶಿವಮ್ಮ ಮದ್ಲಗಟ್ಟಿ, ಅಧ್ಯಕ್ಷ ಚನ್ನಮ್ಮ ಪೋಲೀಸ್ ಪಾಟೀಲ್, ಕಾರ್ಯದರ್ಶಿ ಕಸ್ತೂರಿ ಕೋಳೂರು, ಕೆಹೆಚ್ಪಿಟಿ ಸುಮೀತ್ರಾ ಲೇಬಗೇರಿ, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.