ಮಕ್ಕಳ ದಿನಾಚರಣೆ ಆಚರಣೆ ಫ್ಯಾಶನ್ ಶೋ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 21- ನಗರದ ಮಹಾನ್ ಕಿಡ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಆಚರಣೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಫ್ಯಾಶನ್ ಶೋ ಆಚರಿಸಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯರಾದ ನೇತ್ರಾಜ್ ಗುರುವಿನಮಠ ಮಾತನಾಡಿ, ವಿವಿಧ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಜಯ ಸಾಧಿಸಿದ ಮಕ್ಕಳಲ್ಲಿ ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ಎಲ್‌ಕೆಜಿ ಯಿಂದ ಹಿಡಿದು ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಫ್ಯಾಶನ್ ಶೋ ಆಯೋಜಿಸಲಾಗಿದ್ದು, ಫ್ಯಾಶನ್ ಶೋ ಎಂಬುವುದು ಕೇವಲ ತುಂಡು ಬಟ್ಟೆ ಧರಿಸಿಕೊಂಡು ಅಂಗಾAಗ ಪ್ರದರ್ಶನ ಮಾಡುವ ಉದ್ದೇಶ ಅಲ್ಲ ಎಂಬ ಸ್ಪಷ್ಟ ಸಂದೇಶವನ್ನು ಶಾಲಾ ಮಕ್ಕಳಿಂದ ನಡೆಸಲಾಗುತ್ತಿದೆ ಎಂದರು.

ಪಾಲಕರ ಪ್ರತಿನಿಧಿ ದೇವರಾಜ ವಕೀಲರು ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಮಹಾನ್ ಕಿಡ್ಸ್ ಶಾಲೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಮಕ್ಕಳಲ್ಲಿ ವ್ಯಕ್ತಿತ್ವ ವಿಕಾಸನ ಬೆಳೆಸಲು ಪೂರಕವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಪೂರ್ಣಿಮಾ, ಶ್ರೀದೇವಿ, ಸಹನಾ, ಸಲಿನಾ ಶೈಲಜಾ, ಕುಮುದಿನಿ, ಗೌಶಿಯಾ ಮತ್ತು ವಿಜಯಲಕ್ಷಿö್ಮ, ಸೌಜನ್ಯ, ದೀಪಾ, ಶಾಂತಾ ಊಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!