9gvt3

ಕೊಪ್ಪಳ ಕುಲಪತಿಗಳೊಂದಿಗೆ ಸಂಘದ

ಚಟುವಟಿಕೆಗಳ ಚರ್ಚೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ,10- ಕರ್ನಾಟಕರಾಜ್ಯಮಹಾವಿದ್ಯಾಲಯಗಳ ಶಿಕ್ಷಕ ಸಂಘ(ರಿ ) ಬೆಂಗಳೂರಿನ ಪ್ರಾಂತ ಕಾರ್ಯಕಾರಿಣಿ ಸಭೆಯ ವಿಶೇಷ ಸೂಚನೆಯ ಮೇರೆಗೆ ರಾಜ್ಯದ ಆಯಾ ವಿಭಾಗದ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಲಾಗಿತ್ತು.

ಇದಕ್ಕನುಗುಣವಾಗಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಹಾಗೂ ಕೊಪ್ಪಳ ವಿಶ್ವ ವಿದ್ಯಾಲಯ ಕೊಪ್ಪಳದ ವಿಭಾಗಗಳ ವತಿಯಿಂದ ಕೊಪ್ಪಳ ವಿಶ್ವವಿದ್ಯಾಲಯ ಕೊಪ್ಪಳದ ಮಾನ್ಯ ಕುಲಪತಿಗಳಾದ ಪ್ರೊ. ಬಿ ಕೆ ರವಿ ರವರನ್ನು ಗಂಗಾವತಿಯ ವಿದ್ಯಾನಿಕೇತನ ಪದವಿ ಮಹಾ ವಿದ್ಯಾಲಯದಲ್ಲಿ ವಿಭಾಗದ ಪ್ರಮುಖ ಶಿವಾನಂದ ಮೇಟಿ ಅವರ ನೇತೃತ್ವದಲ್ಲಿ ಭೇಟಿ ಮಾಡಿ ಸಂಘದ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ನೀಡಿ, ಸಂಘಕ್ಕೆ ಮುಂಬರುವ ದಿನಗಳಲ್ಲಿ ಸಹಕಾರ ಮಾರ್ಗದರ್ಶನ ನೀಡಬೇಕೆಂದು ಕೋರಲಾಯಿತು.

ಈ ಸಂದರ್ಭದಲ್ಲಿವಿಶ್ವವಿದ್ಯಾಲಯ ಸಂಘದ ಅಧ್ಯಕ್ಷ ಶರಣಬಸಪ್ಪ ಬೀಳೆಯಲಿ, ಸಂಘದ ಪ್ರಧಾನ ಕಾರ್ಯದರ್ಶಿ ಪವನ ಕುಮಾರ ಗುಂಡೂರ್, ಸಂಘದ ಉಪಾಧ್ಯಕ್ಷ ಡಾ. ಶಿವರಾಜ್ ಗುರಿಕಾರ್ ಹಾಗೂ ಪ್ರೊ ಕರಿಗೂಳಿಯವರು, ಮತ್ತು ಸಂಘಟನಾ ಕಾರ್ಯದರ್ಶಿ ಅಭಿಷೇಕ, ವಿದ್ಯಾನಿಕೇತನ ವಿದ್ಯಾ ಸಂಸ್ಥೆಯ ಅಧ್ಯಕ್ಷ ನೆಕ್ಕುಂಟಿ ಸೂರಿಬಾಬು ಉಪಸ್ಥಿತರಿದ್ದರು.

ಕುಲಪತಿಗಳಿಗೆ ಸಂಘದ ದ್ಯೆಯೋದ್ದೇಶಗಳ ಹಾಗೂ ಕಾರ್ಯ ಚಟುವಟಿಕೆಗಳ ಕಿರುನೋಟವನ್ನು ವಿಭಾಗದ ಪ್ರಮುಖರಾದ ಶಿವಾನಂದ ಮೇಟಿರವರು ವಿವರಿಸಿದರು.

ಭವಿಷ್ಯದಲ್ಲಿ ಸಂಘದ ಯೋಜನೆಗಳ ಬಗ್ಗೆ ವಿಭಾಗದ ಅಧ್ಯಕ್ಷ ಶರಣಬಸಪ್ಪ ವಿವರಿಸಿದರು.

ಮುಂಬರುವ ದಿನಗಳಲ್ಲಿ ಸಂಘದ ಚಟುವಟಿಕೆಗಳಿಗೆ ವಿಶ್ವವಿದ್ಯಾಲಯವು ಸಹಕರಿಸಬೇಕೆಂದು ಸಂಘಟನಾ ಕಾರ್ಯದರ್ಶಿ ಪವನ ಕುಮಾರ ಗುಂಡೂರವಿನAತಿಸಿದರು.

ಕುಲಪತಿಗಳಿಗೆ ಉಪಾಧ್ಯಕ್ಷ ಶಿವರಾಜ್ ಗುರಿಕಾರ್ ಹಾಗೂ ಕರಿಗೂಳಿರವರು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಿದರು.

ಕುಲಪತಿಗಳು ಸಂಘದ ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಶಿಕ್ಷಕ ಸಂಘಕ್ಕೆ ನಮ್ಮ ವಿಶ್ವವಿದ್ಯಾಲಯದಿಂದ ಸಹಕಾರ ಮಾರ್ಗದರ್ಶನ ನೀಡುವ ಭರವಸೆ ನೀಡಿದರು.

ಮುಂಬರುವ ದಿನಗಳಲ್ಲಿವಿಶ್ವವಿದ್ಯಾಲಯದೊಂದಿಗೆ ಶಿಕ್ಷಕರ ಸಂಘವು ಕೂಡ ಒಟ್ಟಾಗಿ ಕಾರ್ಯನಿರ್ವಹಿಸಿ ಈ ಭಾಗದ ವಿದ್ಯಾರ್ಥಿಗಳ ಪ್ರಾಧ್ಯಾಪಕರ ಉನ್ನತಿಗಾಗಿ ಶ್ರಮಿಸೋಣ ಎಂದರು.

Leave a Reply

Your email address will not be published. Required fields are marked *

error: Content is protected !!