ಜೀವನದಲ್ಲಿ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ :
ಡಾ. ಮಾತಾ ಬಿ.ಮಂಜಮ್ಮ ಜೋಗತಿ
ಕರುನಾಡ ಬೆಳಗು ಸುದ್ದಿ
ಕುಕನೂರ19-ತಾಲೂಕಿನ ನೆಲೆಜೇರಿ ಗ್ರಾಮದ ಶ್ರೀ ಶರಣಬಸವೇಶ್ವರ ಪಬ್ಲಿಕ್ ಸ್ಕೂಲನ 6ನೇ ವರ್ಷದ ಶಾಲಾ ವಾರ್ಷಿಕೋತ್ಸವ ಶಾಲಾ ಹಬ್ಬ ಕಾರ್ಯಕ್ರಮವನ್ನು ಉದ್ದೇಶಿಸಿ ಉದ್ಘಾಟಕರಾಗಿ ಆಗಮಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಮಂಜಮ್ಮ ಜೋಗತಿ ಮಾತನಾಡಿ ಜೀವನದಲ್ಲಿ ಪ್ರತಿಯೊಬ್ಬರಿಗೂ ಕಷ್ಟ ಸುಖ ಬಂದೇ ಬರುತ್ತದೆ ಅದನ್ನು ಸಮಾನವಾಗಿ ಸ್ವೀಕರಿಸಬೇಕು. ಕಷ್ಟ ಬಂತು ಅಂತ ಯಾರೂ ಕುಗ್ಗಬಾರದು, ಸುಖ ಬಂತು ಅಂತ ಯಾರು ಹಿಗ್ಗಬಾರದು, ಒಳ್ಳೆಯವರು ನಮ್ಮವರೇ, ಕೆಟ್ಟವರೇ ನಮ್ಮವರೇ,ಜೀವನದಲ್ಲಿ ಎಲ್ಲರೂ ನಮ್ಮವರೇ. ನಾನು ಪಟ್ಟ ಕಷ್ಟ ಯಾರಿಗೂ ಬಾರದಿರಲಿ.
ನನ್ನನ್ನು ಕರೆದರೆ ಅಂಗನವಾಡಿ ಶಾಲೆಗೆ ಹೋಗುತ್ತೇನೆ ವಿಶ್ವವಿದ್ಯಾಲಯಕ್ಕೂ ಕೂಡ ಹೋಗುತ್ತೇನೆ ನನಗೆ ಹಳ್ಳಿಯ ಸಿರಿವಂತಿಕೆಯಿಂದ ಪದ್ಮಶ್ರೀ ಪ್ರಶಸ್ತಿ ಬಂದಿದೆ.
ಅಮ್ಮನವರು ವೇದಿಕೆಯ ಮೇಲೆ ತಮ್ಮ ಜೀವನ ಚರಿತ್ರೆಯನ್ನು ಹೇಳುತ್ತಿರುವಾಗ ಇಡೀ ಕಾರ್ಯಕ್ರಮವೇ ಬಾವುಕ ಸ್ಥಿತಿಯಲ್ಲಿತ್ತು. ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಸಂವಿಧಾನದಿಂದ ನಮ್ಮವರು ಕೂಡ ಶಿಕ್ಷಣದಲ್ಲಿ ಸಾಧನೆಯನ್ನು ಮಾಡಿದ್ದಾರೆ ಪ್ರತಿಯೊಬ್ಬ ಮಕ್ಕಳಿಗೂ ಕೂಡ ಶಿಕ್ಷಣವನ್ನು ನೀಡಿ ಅದು ಪಾಲಕರು ಮತ್ತು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಶ್ರೀ ಶರಣಬಸವೇಶ್ವರ ಪಬ್ಲಿಕ್ ಶಾಲೆಯ ಇನ್ನು ಉತ್ತುಂಗಕ್ಕೆ ಇರಲಿ ಎಂದು ಆಶಿಸಿ ತಮ್ಮ ಉದ್ಘಾಟನಾ ನುಡಿಗಳನ್ನು ನುಡಿದರು.
ಪ್ರಾಸ್ತಾವಿಕವಾಗಿ ದೇವೇಂದ್ರಪ್ಪ ಬಗನಾಳ ಸಿಆರ್ಪಿ ಮಾತನಾಡಿ ನಿರಂತರ ಪ್ರಯತ್ನದಿಂದಾಗಿ ಶಾಲಾ ಅಭಿವೃದ್ಧಿ ಹೊಂದಲು ಸಾಧ್ಯ ಮುದ್ದು ಮಕ್ಕಳಿಗೆ ಉತ್ತಮ ರೀತಿಯ ಶಿಕ್ಷಣ ನೀಡಿ ಶಿಕ್ಷಣ ಸಂಸ್ಥೆಯು ಉತ್ತಮ ಶಿಕ್ಷಣವನ್ನು ನೀಡುತ್ತದೆ ಈ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಪತ್ತದತ್ತ ಸಾಗಲಿ ಎಂದರು.
ಡಿ ಲಂಕೇಶ್ ವಕೀಲರು ಮಾತನಾಡಿ, ಬಡತನ ಅನಕ್ಷರತೆ ಹೋಗಲಾಡಿಸಲು ಶಿಕ್ಷಣದ ಅವಶ್ಯಕತೆ ಇದೆ. ಸಂವಿಧಾನವನ್ನು ರಕ್ಷಿಸುವುದು ನಮ್ಮ ಕರ್ತವ್ಯ ಸಂವಿಧಾನದಿಂದ ನಮ್ಮ ದೇಶ ಶಾಂತತೆಯಿಂದ ಇರಲು ಸಾಧ್ಯ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಎಂದರು.
ವೇದಿಕೆಯ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿಯರಿಂದ ಮಂಜಮ್ಮ ಜೋಗತಿ ಅವರಿಗೆ ಉಡಿತುಂಬುವ ಮತ್ತು ಮುದ್ದು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ಭೂತಪೂರ್ಣವಾಗಿ ಜರುಗಿ ಯಶಸ್ವಿಗೊಂಡಿತು.
ಈ ಸಂದರ್ಭದಲ್ಲಿ ಶ್ರೀ ವೇದಮೂರ್ತಿ ಪರ್ವತಯ್ಯ ಹಿರೇಮಠ್. ಹುಚ್ಚಮ್ಮ ಚೌದ್ರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಯಮನೂರಪ್ಪ ಪೂಜಾರ, ಬಸವರಾಜ ಗುಂಗಾಡಿ,ನಿಂಬಮ್ಮ ಚುಕಣಿ,ಶಿವಪ್ಪ ಉಪ್ಪಾರ್ ಬಿ ಆರ್ ಪಿ ಯಲ್ಬುರ್ಗಾ, ಡಿಎಸ್ ಪೂಜಾರ್, ಶೇಖಪ್ಪ ಡಿ.ಯಮನೂರಪ್ಪ ಭಜಂತ್ರಿ,ಗೌರಮ್ಮ ತಳವಾರ್ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ನೆಲಜೇರಿ ಗ್ರಾಮ್ ಪಂಚಾಯತ್ ಸದಸ್ಯರು ಸಿಬ್ಬಂದಿ ವರ್ಗ ಶಾಲಾ ಶಿಕ್ಷಕರು ಗ್ರಾಮದ ಗುರುಹಿರಿಯರು ಸಂಘ-ಸಂಸ್ಥೆ ಪದಾಧಿಕಾರಿಗಳು ಮುದ್ದು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
