15gvt4

ಗ್ಯಾರಂಟಿ ಫಲಾನುಭವಿ ಮಹಿಳೆಯರು ದಾರಿತಪ್ಪಿಲ್ಲ ಕುಮಾರ ಸ್ವಾಮಿ ದಾರಿ ತಪ್ಪಿದ್ದಾರೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ,ಎ೧೫-ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಜೆಪಿ ಸ್ನೇಹಿತ ಎಚ್.ಡಿ.ಕುಮಾರಸ್ವಾಮಿಯವರು ದಾರಿತಪ್ಪಿ ಹಲವು ವರ್ಷಗಳು ಕಳೆದಿವೆ .ಈಗ ಹೊಟ್ಟೆ ಉರಿಯಿಂದ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾದ ಮಹಿಳೆಯರನ್ನು ದಾರಿ ತಪ್ಪಿದ್ದಾರೆ ಎಂದು ಹೇಳುವ ಮೂಲಕ ಮಹಿಳೆಯರಿಗೆ ಅಗೌರವ ತೋರಿರುವುದು ಖಂಡನೀಯ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಮುಖಂಡ ಶಿವಪ್ಪ ನವಣೆಕ್ಕಿ ತಿಳಿಸಿದರು.

ಕುಮಾರಸ್ವಾಮಿಯವರು ಕೂಡಲೇ ರಾಜ್ಯದ ಮಹಿಳೆಯರ ಕ್ಷಮೆ ಕೋರಬೇಕು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಹಣದಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವುದು ದಾರಿ ತಪ್ಪಿದಂತಾಗಲಿದೆಯೇ, ಹಸಿದ ಹೊಟ್ಟೆಗೆ ಊಟ ಕೊಡುವ ಅನ್ನಭಾಗ್ಯ ನೀಡಿದ್ದು ದಾರಿ ತಪ್ಪಿದಂತೆಯೇ, ಒಳ್ಳೆಯ ಬಟ್ಟೆ ಧರಿಸುವುದು ದಾರಿ ತಪ್ಪಿದಂತೆಯೇ. ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸಮಾಧಾನ ಪಟ್ಟು ಮನೆ ನಡೆಸಿದ್ದು ದಾರಿ ತಪ್ಪಿದಂತೆಯೇ. ಇಷ್ಟಕ್ಕೂ ದಾರಿ ತಪ್ಪಿದ್ದು ಎಂದರೆ ಏನು ಎಂಬುದನ್ನು ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!