ವಿಜೃಂಭಣೆಯಿಂದ ಜರುಗಿದ ಕುಂಭಮೇಳ ಹಾಗೂ ಶ್ರೀಗಳ ಮೆರವಣಿಗೆ
ಕರುನಾಡ ಬೆಳಗು ಸುದ್ದಿ
ಕುಕನೂರು, 25- ಶ್ರೀ ಅನ್ನದಾನೀಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ವಿಜೃಂಭಣೆಯಿಂದ ಕುಂಬೋತ್ಸವ ಹಾಗೂ ಶ್ರೀ ಗಳ ಮೆರವಣಿಗೆ ಪಟ್ಟಣದಲ್ಲಿ ಮಾಡಲಾಯಿತು.
ಪಟ್ಟಣದ ಶ್ರೀ ಅನ್ನದಾನೀಶ್ವರ ಮಠದಲ್ಲಿ ಬೆಳಿಗ್ಗೆ ಅಯ್ಯಾಚಾರ ಮತ್ತು ಲಿಂಗದೀಕ್ಷೆ ಮಾಡಿ, ತದನಂತರ ಶ್ರೀ ಅನ್ನದಾನೀಶ್ವರ ಮಠದಿಂದ ಕುಂಭೋತ್ಸವ ಹಾಗೂ ಡಾ. ಮಹಾದೇವ ಮಹಾಸ್ವಾಮಿಗಳು, ಅನ್ನದಾನೀಶ್ವರ ಮಠ ಕುಕನೂರು, ಶ್ರೀ ಷ. ಬ. ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀಧರ ಮುರುಡಿ ಹಿರೇಮಠ ಯಲಬುರ್ಗಾ, ಇನ್ನಿತರ ಶ್ರೀಗಳ ಮೆರವಣಿಗೆ ರವಿವಾರ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಡೊಳ್ಳು ,ತಾಳ ಮೇಳ ಹಾಗೂ ಗೊಂಬೆ ಕುಣಿತ ನೋಡುಗರ ಮನಸೆಳೆದಿದ್ದು , ವಿಶೇಷವಾಗಿತ್ತು, ಮೆರವಣಿಗೆ ಉದ್ದಕ್ಕೂ ಭಕ್ತಾದಿಗಳು ಮಹಾಸ್ವಾಮಿಗಳ ಆಶೀರ್ವಾದ ಪಡೆದು ಭಕ್ತಿ ಸಮರ್ಪಿಸಿದರು.
ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ , ಅನ್ನದಾನೀಶ್ವರ ಮಠಕ್ಕೆ ತೆರಳಿ ಮುಕ್ತಾಯಗೊಂಡಿತು, ಮಠದಲ್ಲಿ ಬುಂದೆ, ಮತ್ತು ಅನ್ನ ಪ್ರಸಾದ ಸೇವೆ ಮಾಡಲಾಗಿತ್ತು, ಭಕ್ತಾದಿಗಳು ಪ್ರಸಾದ ಸೇವೆ ಸ್ವೀಕರಿಸಿ ಶ್ರೀ ಅನ್ನದಾನೀಶ್ವರನ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಶ್ರೀ ಜಗದ್ಗುರು ಅನ್ನದಾನಿಶ್ವರ ಸಮಿತಿಯವರು, ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

