4

ಸಿರುಗುಪ್ಪ  ನಗರ ಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಪೂರ್ವಭಾವಿ ಸಭೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 25- ನಗರದ ಬಿಡಿಸಿಸಿ ಬ್ಯಾಂಕ್ ನಲ್ಲಿ ಆಯೋಜಿಸಿದ ಸಿರುಗುಪ್ಪ ನಗರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ಆಗಸ್ಟ್ 27ರಂದು ನಡೆಯುವ ಚುನಾವಣಾ ಪೂರ್ವಭಾವಿ ಸಭೆ ಕರೆಯಲಾಗಿತ್ತು.

ವಿಧಾನ ಪರಿಷತ್ ಶಾಸಕರು ರಾಜ್ಯ ಅಲ್ಪಸಂಖ್ಯಾತರ ಕೆಪಿಸಿಸಿ ಅಧ್ಯಕ್ಷರು ಚುನಾವಣಾ ವೀಕ್ಷಕರು ಅಬ್ದುಲ್ ಜಬ್ಬಾರ್ ಸಾಹಬ್ ಅವರು ಹಾಗೂ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ ಅವರ ಸಮ್ಮುಖದಲ್ಲಿ ಸಭೆ ಜರುಗಿಸಲಾಯಿತು.

ಈ ಸಭೆಯಲ್ಲಿ ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಬಿವಿ ಶಿವಯೋಗಿ ಮಾಜಿ ಶಾಸಕರಾದ ಟಿಎಂ ಚಂದ್ರಶೇಖರಯ್ಯ ಸ್ವಾಮಿ, ಸಿರುಗುಪ್ಪ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್ ಕರಿಬಸಪ್ಪ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ ಮಾರುತಿ ವರಪ್ರಸಾದ್ ರೆಡ್ಡಿ ಸಹಕಾರಿ ಧುರೀಣ ಚೊಕ್ಕ ಬಸವನಗೌಡ ಬಳ್ಳಾರಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹುಮಾಯೂನ್ ಖಾನ್ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ ಗೋಪಾಲ ರೆಡ್ಡಿ ನಗರಸಭಾ ಮಾಜಿ ಅಧ್ಯಕ್ಷರಾದ ಬಿ ಎಂ ಸತೀಶ್ ಮುತ್ಯಾಲಯ್ಯ ಶೆಟ್ಟಿ ನಗರಸಭಾ ಸದಸ್ಯರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!