ವೀರ ವನಿತೆ ಒನಕೆ ಓಬವ್ವ ಅವರ ಜಯಂತಿ ಆಚರಣೆ ಪೂರ್ವಭಾವಿ ಸಭೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 31- ತಾಲೂಕ ಕಚೇರಿಯ ತಹಸೀಲ್ದಾರ್ ಸಭಾಭವನದಲ್ಲಿ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿ ನವಂಬರ್ 11ರಂದು ಆಚರಿಸಲಾಗುವುದು ಎಂದು ಗ್ರೇಡ್ -2 ತಹಸಿಲ್ದಾರ್ ಕುಮಾರಿ ಸತ್ಯನ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು.
ನವಂಬರ್ 11ರ ಜಯಂತಿ ಆಚರಣಾ ಕಾರ್ಯಕ್ರಮದ ಪೂರ್ವ ಸಿದ್ಧತೆಗೆ ಛಲವಾದಿ ಮಹಾಸಭಾದ ಮುಖಂಡರಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಚರ್ಚಿಸಿದರು.
ತಾಲೂಕ ಕ್ರೀಡಾ ಮೈದಾನದಿಂದ ವೀರ ವನಿತೆ ಒನಕೆ ಓಬವ್ವ ಭಾವಚಿತ್ರದ ಮೆರವಣಿಗೆ ಮುಖ್ಯ ರಸ್ತೆಯಿಂದ ತಾಲೂಕ ಪಂಚಾಯತ್ ಸಭಾಭವನದಲ್ಲಿ ಆಚರಿಸಲು ನಿರ್ಧರಿಸಲಾಯಿತು ಛಲವಾದಿ ಮಹಾಸಭಾ ಯುವ ಸಮಿತಿ ತಾಲೂಕ ಅಧ್ಯಕ್ಷ ನಗರಸಭಾ ಸದಸ್ಯರಾದ ಹೆಚ್ ಗಣೇಶ್ ತಾಲೂಕ ಅಧ್ಯಕ್ಷ ಬಿ ಸಣ್ಣರಾಮಯ್ಯ ಕಾರ್ಯದರ್ಶಿ ಕೆ ಶಿವರಾಮ್ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಛಲವಾದಿ ಮಹಾಸಭಾದ ಗೌರವ ಅಧ್ಯಕ್ಷ ಹೆಚ್.ಬಸವರಾಜ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಎಂ ಸಿದ್ದಯ್ಯ ಬಿಸಿಎಂ ಅಧಿಕಾರಿ ಗಾದಿಲಿಂಗಪ್ಪ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರಾಘವೇಂದ್ರ ವರ್ಮಾ ಸಿಡಿಪಿಓ ಜಿ ಪ್ರದೀಪ್ ಸಾಕ್ಷರತಾ ಸದಸ್ಯ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಮುಖಂಡರು ಇದ್ದರು.
