WhatsApp Image 2024-10-31 at 6.35.38 PM

ತೆಕ್ಕಲಕೋಟೆ : ಪ.ಪಂ. ವಿಶೇಷ ಸಾಮಾನ್ಯ ಸಭೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಕೆ ಚರ್ಚೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 31- ತಾಲೂಕು ತೆಕ್ಕಲಕೋಟೆ ಪಟ್ಟಣ ಪಂಚಾಯತ್ ಕಚೇರಿಯ ಸಭಾಭವನದಲ್ಲಿ ವಿಶೇಷ ಸಾಮಾನ್ಯ ಸಭೆ ಪಟ್ಟಣ ಪಂಚಾಯತ್ ಅಧ್ಯಕ್ಷ ಎಸ್ ಆನಂದ ಅಧ್ಯಕ್ಷತೆಯಲ್ಲಿ ನಡೆಯಿತು ತೆಕ್ಕಲಕೋಟೆ ವ್ಯಾಪ್ತಿಯ ಸತ್ಯ ನಗರ ಕಾಲೋನಿಯ ಸರ್ವೇ ನಂ.571/ಡಿ ರ 5.10ಎಕರೆ ಆಶ್ರಯ ನಿವೇಶನಗಳಲ್ಲಿ ಎರಡು ಮಾದರಿ ಮನೆಗಳ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಲಾಯಿತು.

14ನೇ ವಾರ್ಡ್ ಹುಚ್ಚೀರಪ್ಪ ಗುಡಿಯ ಹತ್ತಿರದ ಆಶ್ರಯ ನಿವೇಶನದಲ್ಲಿ ಅನಧಿಕೃತವಾಗಿ ವಾಸ ಮಾಡುತ್ತಿರುವ ಸಾರ್ವಜನಿಕರ ಹೆಸರನ್ನು ಆಶ್ರಯ ಸಮಿತಿಗೆ ಪ್ರಸ್ತಾವನೆ ಸಲ್ಲಿಸುವದು ಕೆಯುಐಡಿಎಫ್ ಸಿ ಇಲಾಖೆಯಿಂದ ಕುಡಿಯುವ ನೀರು ಸ್ಥಗಿತಗೊಂಡಿದ್ದು ಮುಂದುವರೆದ ಕಾಮಗಾರಿಗೆ ಅನುದಾನ ಕೊರತೆ ಮೊತ್ತಕ್ಕೆ ಪ್ರಸ್ತಾವನೆ ಸಲ್ಲಿಕೆ ಬಗ್ಗೆ ಚರ್ಚಿಸಲಾಯಿತು.

ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಪರಶುರಾಮ ಅವರು ಸರ್ವರನ್ನು ಸ್ವಾಗತಿಸಿದರು ಮತ್ತು ಸಭೆಯ ನಡಾವಳಿ ಓದಿದರು ಪಟ್ಟಣ ಪಂಚಾಯತ್ ಸದಸ್ಯರಾದ ನಸುರುದ್ದೀನ್ ಶಕೀಲಾ ಬಾನು ಮೇಲ್ಗಡೆ ಖಾದರ್ ವಲಿ ಪಿ ರಾಮಲಿಂಗಮ್ಮ ಎಸ್ ಸಿದ್ದೇಶ್ವರ ವಡ್ಡರ ದ್ಯಾವಣ್ಣ ದೊಡ್ಡ ರುದ್ರಮ್ಮ ಎಸ್ ಪೂರ್ಣಿಮಾ ಭದ್ರಗುಣಿ ನಾಗಮ್ಮ ದೇವರ ಮನೆ ರಂಗಮ್ಮ ನಾಮಾ ನಿರ್ದೇಶನ ಸದಸ್ಯರಾದ ರಂಜಾನ್ ಸಾಬ್ ಸುಂಕಣ್ಣ ಹನುವಾಳು ಭಾರತಿ ಸಾಕ್ಷರತಾ ಅಬ್ದುಲ್ ನಬಿ ಪಟ್ಟಣ ಪಂಚಾಯತ್ ಸಿಬ್ಬಂದಿ ವರ್ಗದವರು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!