ಯುವಕ ಕಾಣೆ : ಪತ್ತೆಗೆ ಸಹಕರಿಸಲು ಮನವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 4- ಕೊಪ್ಪಳದ ಸಜ್ಜಿ ಓಣಿಯ ನಿವಾಸಿ ಸಿದ್ದು ಶರಣಪ್ಪ ದೊಡ್ಡಮನಿ ಎಂಬ ಯುವಕ 2024ರ ಜನವರಿ 12ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಿದ್ದು ಶರಣಪ್ಪ ದೊಡ್ಡಮನಿ ಎಂಬ ಯುವಕನು 2024ರ ಜನವರಿ 12ರಂದು ಮದ್ಯಾಹ್ನ 1 ಗಂಟೆಯ ಸುಮಾರಿಗೆ 9 ದಿನಗಳ ಕಾಲ ಕಾರ್ ಡ್ರೈವಿಂಗ್ ಕೆಲಸ ಇದೆ ನಾನು ಶಿರಿಸಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಮನಗೆ ಬಾರದೆ ಎಲ್ಲಿಯೋ ಕಾಣೆಯಾಗಿದ್ದು, ಈ ಬಗ್ಗೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಗುನ್ನೆ ನಂ: 115/2024 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯುವಕನು ವಯಸ್ಸು 27 ವರ್ಷ, 5.6 ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಸಾದಾಗಪ್ಪು ಮೈ ಬಣ್ಣ, ಕಪ್ಪು ತಲೆಕೂದಲು ಹಾಗೂ ಕುರುಚಲು ಗಡ್ಡ ಹೊಂದಿದ್ದು, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾನೆ. ಮೈ ಮೇಲೆ ಬಿಳಿಯ ಬಣ್ಣದ ಅರ್ಧ ತೋಳಿನ ಟೀ ಶರ್ಟ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿಕೊಂಡು ಹೊಗಿರುತ್ತಾನೆ.
ಈ ವ್ಯಕ್ತಿಯ ಬಗ್ಗೆ ಯಾರಿಗಾದರು ಮಾಹಿತಿ ದೊರೆತಲ್ಲಿ ಅಥವಾ ಪತ್ತೆಯಾದಲ್ಲಿ ಕೊಪ್ಪಳ ನಗರ ಪೊಲೀಸ್ ಠಾಣೆಯ ಮೊ.ಸಂ: 9480803745, ಮತ್ತು ಕೊಪ್ಪಳ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮೊ.ಸಂ: 9449484086, ಕೊಪ್ಪಳ ನಗರ ಪೊಲೀಸ್ ಠಾಣೆಯ ದೂ.ಸಂ: 08539-220333, ಕಂಟ್ರೋಲ್ ರೂಂ.ದೂ.ಸA:08539-230100,230222 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
