5

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸಬೇಕು : ಬಸವರಾಜ ತೆನ್ನಳಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 17- ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಹೈದ್ರಾಬಾದ ಕರ್ನಾಟಕಕ್ಕೆ ೧೭ ಸೆಪ್ಟಂಬರ ೧೯೪೮ರಂದು ಸ್ವಾತಂತ್ರ‍್ಯ ದೂರಯಿತು.

ಹೈದರಾಬಾದ್ ಕರ್ನಾಟಕ ಸ್ವಾತಂತ್ರ‍್ಯ ಗೋಸ್ಕರ ಅನೇಕ ಮಹಾತ್ಮರು ಹೋರಾಟ ನಡೆಸಿ ಹೋರಾಟಗಾರರ ತ್ಯಾಗ ಬಲಿದಾನಗಳ ಫಲವಾಗಿ ನಮ್ಮಗೆ ಸ್ವಾತಂತ್ರ‍್ಯ ಸಿಕ್ಕಿತ್ತು ಮಹಾತ್ಮರಿಗೆ ನಮನಗಳನ್ನು ಸಲಿಸಿ ನಾವು ಸ್ಮರಿಸಬೇಕು ಎಂದು ತಹಶೀಲ್ದಾರ್ ಬಸವರಾಜ ತೆನ್ನಳಿ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ತಾಲೂಕು ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿಯಿAದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೇರವೇರಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಸ್ವಾತಂತ್ರ‍್ಯ ವಾಗಲು ಯಲಬುರ್ಗಾ ಮತ್ತು ಕುಕನೂರು ಅವಳಿ ತಾಲೂಕಿನ ಕೊಡುಗೆ ಅಪಾರವಾಗಿದೆ ಹೈದರಾಬಾದ್ ಕರ್ನಾಟಕ ಭಾಗಗಳು ನಿಜಾಮರ ಆಳ್ವಿಕೆಯಲ್ಲಿ ರಾಯಚೂರು, ಬಳ್ಳಾರಿ, ಬೀದರ, ಯಾದಗಿರಿ, ಕಲಬುರ್ಗಿ, ಕೂಪ್ಪಳ ಸ್ವಾಂತ್ಯAತ್ರದ ಸವಿಯನ್ನು ಅನುಭವಿಸಲು ಹಲವಾರು ವರ್ಷಗಳ ಕಾಲ ಕಾಯಬೇಕಾಗಿತ್ತು ಎಂದು ಹೇಳಿದರು.

ನಂತರ ಶಾಲೆಯ ವಿದ್ಯಾರ್ಥಿಗಳಿಂದ ಪಥ ಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಕಾರ್ಯಕ್ರಮ ಕುರಿತು ಮಾತನಾಡಿದರು. ಪ.ಪಂ. ಸದ್ಯಸರುಗಳಾದ ಅಮರೇಶ ಹುಬ್ಬಳ್ಳಿ, ಅಶೋಕ ಅರಕೇರಿ, ಕಳಕಪ್ಪ ತಳವಾರ, ವಸಂತಕುಮಾರ ಭಾವಿಮನಿ, ರಿಯಾಜ್ ಖಾಜಿ, ಮುಖಂಡರುಗಳಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಬಿ.ಎಂ.ಶಿರೂರ, ಅತ್ತರಸಾಬ ಖಾಜಿ, ತಾಲೂಕು ಪಂಚಾಯಿತಿ ಇಓಮಸಂತೋಷ್ ಪಾಟೀಲ್ ಬಿರಾದಾರ, ಪ.ಪಂ ಮುಖ್ಯಾಧಿಕಾರಿ ನಾಗೇಶ್, ಪಿಎಸ್‌ಐ ವಿಜಯಪ್ರತಾಪ, ಪಿಡ್ಲೂಡಿ ಇಲಾಖೆ ಮಲ್ಲಿಕಾರ್ಜುನ, ತೋಟಗಾರಿಕೆ ಇಲಾಖೆ ನಿಂಗನಗೌಡ ಪಾಟೀಲ್, ಪಿಆರ್‌ಡಿ ಶ್ರೀಧರ ತಳವಾರ, ಸಾಮಾಜೀಕ ಅರಣ್ಯ ವಲಯಾಧಿಕಾರಿ ಬಸವರಾಜ ಗೊಗೇರಿ ಗ್ರೇಡ್-೨ ತಹಶೀಲ್ದಾರ್ ಹಂಪಣ್ಣ ಹೊರಪೇಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಗೌಡ ಪಾಟೀಲ್ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!