6

ಗಣೇಶ ವಿಸರ್ಜನೆ : ಸಂತೋಷದಲ್ಲಿ ಮಿಂದೆದ್ದ ಭಕ್ತ ಸಾಗರ

ಕರುನಾಡ ಬೆಳಗು ಸುದ್ದಿ

ಮರಿಯಮ್ಮನಹಳ್ಳಿ, 17- ಪಟ್ಟಣದ ಎಕೆ ಕಾಲೋನಿಯಲ್ಲಿ ಗಣೇಶನ ವಿಗ್ರಹವನ್ನು ಗಣೇಶ ಚತುರ್ಥಿಯಂದು ಕೂರಿಸಲಾಗಿತ್ತು. ೯ನೇ ದಿನಕ್ಕೆ ಅಪಾರ ಭಕ್ತವೃಂದ ಸೇರಿ ಗಣೇಶನ ಬೀಳ್ಕೊಡುವ ಸಂಧರ್ಭದಲ್ಲಿ ಡಿ.ಜೆ ಸಂಗೀತದ ಹಾಡುಗಳಿಗೆ ಹಿರಿಯರು, ಯುವಕ-ಯುವತಿಯರು ಮಹಿಳೆಯರೆನ್ನದೆ ಭರ್ಜರಿ ಸ್ಟೆಪ್ಸ್ ಹಾಕಿದರು.

ಈ ಸಂಧರ್ಭದಲ್ಲಿ ಭಕ್ತ ಸಾಗರ ಸಂತೋಷದಲ್ಲಿ ಮಿಂದೆದ್ದ ಭಕ್ತ ವೃಂದ ಕುಣಿದು ಕುಪ್ಪಳಿಸಿದ್ದು ರೋಮಾಂಚನಗೊಳಿಸಿತು. ಗಣೇಶ ಮಂಡಳಿಯವರಾದ ಜಿ.ಪರುಶುರಾಮ, ಎಲ್.ಹನುಮಂತ ಮಾಳಗಿ, ಪ್ರಕಾಶ, ಬಿ.ಗಂಗಾಧ, ಎಲ್.ಬಿ.ಮಂಜುನಾಥ, ಪೈಲ್ವಾನ್ ಹನುಮಂತ, ಎಂ.ಅಂಜಿನಿ, ಎಲ್.ಪ್ರಹಲ್ಲಾದ ಇನ್ನಿತರರು ಯಾವುದೇ ಅಹಿತಕರ ಘಟನೆ ಜರುಗದಂತೆ ವಾಲೆಂಟರ್‌ಗಳಾಗಿ ಹಲವಾರು ಯುವಕರು ಸ್ವಯಂಪ್ರೇರಣೆಯಿಂದ ಭಾಗವಹಿಸಿ ಪೊಲೀಸ್ ಇಲಾಖೆಯ ಸೂಚನೆಮೇರೆಗೆ ಬೀಳ್ಕೊಟ್ಟರು.

ಈ ಸಂಧರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು, ಭದ್ರತೆಗಾಗಿ ಸಿಪಿಐ ವಿಕಾಸ್ ಲಮಾಣಿ ನೇತೃತ್ವದಲ್ಲಿ ಪಿಎಸ್‌ಐ ಮೌನೇಶ್ ರಾಥೋಡ್, ಬಿ.ಬಿ.ಮರೇಮ್, ಎಎಸ್‌ಐ ರೂಪ್ಲಾನಾಯ್ಕ್, ಪಿಸಿ ಪರುಶುರಾಮ್ ಇತರ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!