4781e9ed-c438-47b1-8cad-8047c0c45446

ಶ್ರೀ ಶ್ರೀ 1008 ಶ್ರೀ ವಿದ್ಯಾ ಸಂಪೂರ್ಣ ತೀರ್ಥ ಶ್ರೀಪಾದಂಗಳವರ ಆರಾಧನೆ

ಗೊರಲೂಟಿ.

ಶ್ರೀ ವಿಠ್ಠಲಕೃಷ್ಣೊ ವಿಜಯತೆ
⚜️⚜️⚜️⚜️⚜️⚜️⚜️⚜️⚜️
ಶ್ರೀ ಶ್ರೀ ಶ್ರೀ ೧೦೦೮ ಶ್ರೀ ವಿದ್ಯಾಸಂಪೂರ್ಣ ತೀರ್ಥರು
🌺🌺🌺🌺🌺🌺🌺🌺🌺
(ಶಾ.ಶೆ. 1866-1888).

 

ಶ್ರೀ ಮದ್ ಕಣ್ವ ಮಠದ 5 ನೆ ಪೀಠಾದಿಪತಿಗಳ ಆರಾಧನಾ ಮಹೋತ್ಸವ
ದಿನಾಂಕ 14-09-2024ಭಾದ್ರಪದ ಶುದ್ದ ಏಕಾದಶಿ ಶನಿವಾರ, 15-09-2024 ರವಿವಾರ

( ಶ್ರವಣೋಪಾಸ ಹರಿವಾಸರ) 16-09-2024 ಸೊಮವಾರ ಪಾರಣಿ ಇರುತ್ತದೆ.ಪ್ರ ಶ್ರೀ ಗುರುಗಳ ಸ್ರೋತ್ರ

ವಿದ್ಯಾಂಬುಧೌ ನಿಮಜ್ಜಂತಂ ಸದ್ವಿದ್ಯಾಪಾರಗಂ ಮುನಿಮ್|
ವಿದ್ಯಾಭಿವೃದ್ಧಿಸೊದ್ಯರ್ಥಂ ಭಕ್ತಾಭಿಷ್ಠಫಲಪ್ರದಮ್||
ವಿದ್ಯಾಸಂಪೂರ್ಣತೀರ್ಥರ್ಯಂ ಸದ್ಗುರುಂ ಪ್ರಣಮಾಮ್ಯಹಂ|
ಜ್ಞಾನಭಕ್ತಿಸಮೃದ್ಧಂ ತಂ ಸಜ್ಜನೋದ್ಧಾರಕಂ ಸದಾ||.

ಪೂರ್ವಾಶ್ರಮದ ಹೆಸರು ವೆ.ಮು. ಹನುಮಂತಾಚಾರ್ಯ ಕನಕಗಿರಿ,
ಪೂರ್ವಾಶ್ರಮದ ತಂದೆ , ವೇ.ಮು. ಗುರುರಾಜಾಚಾರ್ಯ ಕನಕಗಿರಿ.

ಪೂರ್ವಾಶ್ರಮದ ಸಹೋದರರು
ಶ್ರೀ ತಿಮ್ಮಣ್ಣಾಚಾರ್ಯ ಶ್ರೀ ರಾಮಾಚಾರ್ಯ ಶ್ರೀ ಶ್ರೀ ನಿವಾಸಾಚಾರ್ಯ ಶ್ರೀ ಕೃಷ್ಠಾಚಾರ್ಯರು,ಇವರಲ್ಲಿ ಶ್ರೀ ತಿಮ್ಮಣ್ಣಾಚಾರ್ಯ ರು ಮೈಸೂರಿನ ಅರಸರ ಆಸ್ಥಾನಪಂಡಿತರಾಗಿದ್ದ ಶ್ರೀ ಶೇಷಶಾಸ್ರ್ತೀಗಳವರಲ್ಲಿ ವಿಷೇಶ ಅಧ್ಯಯನ ಮಾಡಿದ ಮಹಾನ್ ಪಂಡಿತರಿದ್ದರು,

ಆಶ್ರಮ ಗುರುಗಳು ಶ್ರೀ ಶ್ರೀ ಶ್ರೀ ೧೦೦೮ ಶ್ರೀ ವಿಧ್ಯಾನಿಧಿತೀರ್ಥರು,

ರಚಿಸಿದ ವಿದ್ವತ್ಪೂರ್ಣ ಗ್ರಥಗಳು
“ರತ್ನಪಂಚಕ”
“ಕಣ್ವಾಚಾರ ದರ್ಶನ”
( ಈ ಗ್ರಂಥಗಳ ಆಧಾರದ ಮೆಲೆ ಶ್ರೀ ಮಠದ ಪಂಚಾಂಗ ತಯಾರಿಸಲಾಗುತ್ತದೆ.)

 

ಇ ಗ್ರಂಥಗಳು ನಮ್ಮ ವೇದ ಶಾಖೆಯ ಋಷಿಗಳ ಆಧಾರ ಗ್ರಥಗಳಾಗಿ ಕಣ್ವ ಮಾಧ್ವರಿಗೆ ಸಂವಿಧಾನದ ರೀತಿ ಇವೆ ಈ ಗ್ರಂಥಕ್ಕೆ ಅಂದಿನ ಸಕಲ ಕಣ್ವಶಾಖೆಯ ಪಂಡಿತರು ಪ್ರಶಂಸೆ ಹಾಗು ಮೆಚ್ಚುಗೆ ಪಾತ್ರರಾಗಿದ್ದು ಶ್ರೀ ಅಗಡಿ ಮಠದಿಂದ ಮುನ್ನುಡಿ ಬರೆಯಲ್ಪಟ್ಟಿದೆ.

ಶ್ರೀ ಗಳವರು ತಮ್ಮ ದಿಗ್ವಿಜಯ ಯಾತ್ರೆ ಹಾಗು ಧರ್ಮಪ್ರಚಾರ ಕಾರ್ಯ ನಿಮಿತ್ತವಾಗಿ ಉತ್ತರದ ಶ್ರೀ ಕ್ಷೆತ್ರ ಪಂಢರಪುರದವರೆಗೆ ಮಾಡಿ ಧರ್ಮ ಜಾಗೃತಿಯನ್ನು ಮಾಡಿ ಶ್ರೀ ಮಠದವಭಕ್ತವೃಂದ ಸಂಪಾದಿಸಿದರು ,
ಇವರ ವಿದ್ವತ್ತಿಗೆ ಅಂದಿನ ಪಂಡಿತವೃಂದ ತಲೆ ಬಾಗಿತ್ತು, ಪಂಡರಾಪುರ ಯಾತ್ರೆಯ ನಂತರ ಹಾವೆರಿ, ಹಾನಗಲ್, ಅಗಡಿಕಡೆಗೆ ಪ್ರಯಾಣ ಬಯಸಿದರು ಅಗಡಿಯ ಸ್ವ ಶಾಖಾಭಿಮಾನಿಗಳಾದ ಶ್ರೀ ಹನುಂತಗೌಡ್ರ ಮನೆಯಲ್ಲಿ ಸೂಮಾರು 2 ವರ್ಷಗಳಕಾಲ ಇದ್ದು ಅಂದಿನ ಮೈಸೂರು ಹಾಗು ಮುಂಬಯಿ ಸರ್ಕಾರದಿಂದ ಧರ್ಮಪ್ರಚಾರಕ್ಕೆ ಯಾವುದೆ ತೊಂದರೆ ನಮ್ಮ ಶ್ರೀ ಮಠಕ್ಕೆ ಆಗಬಾರದೆಂದು ಹುಕ್ಕುಮ್ ತರೆಸಿದರು.

ಶ್ರೀಶ್ರೀಶ್ರೀ ೧೦೦೮ ಶ್ರೀ ವಿಧ್ಯಾಧಿರಾಜತೀರ್ಥರಿಗೆ ಆಶ್ರಮ ನೀಡಿ ಆಡಳಿತ ಒಪ್ಪಿಸಿದರು,

ನಂತರ ರಾಯಚೂರು ಜಿಲ್ಲೆಯ ಸಿಂಧನೂರು ತಾಲುಕಿನ ಗೊರಲುಟಿ ಗ್ರಾಮಕ್ಕೆ ಬಂದು ವೀರಾಪೂರ ದೇಶಪಾಂಡೆಯವರ ಮನೆತನದವರಿಗೆ ಸೆರಿದ ಹೊಲದಲ್ಲಿ ಶಾಲಿವಾಹನ ಶೆಕೆ 1810ನೇ ಸರ್ವಧಾರಿ ನಾಮ ಸಂವತ್ಸರದ ಭಾದ್ರಪದ ಶುದ್ಧ ಏಕಾದಶಿಯಂದು ವೈಕುಂಠ ವಾಸಿಗಳಾದರು.

ಸದ್ಯ ಗೊರಲೂಟಿ ಗ್ರಾಮದಲ್ಲಿ ವೃಂದಾವನಕ್ಕೆ ಶಿಲಾಮಂಟಪ, ಬೆಳ್ಳಿಕವಚ, ರಥ, ಅಡುಗೆ ಮನೆ, ಊಟದ ಸಾಲು, ಸಭಾಭವನ, ರೂಮುಗಳು, ಸ್ನಾನಗ್ರಹ ಸುಸಜ್ಜಿತ ಶೌಚಾಲಯದ ವ್ಯವಸ್ಥೆಯ ಇದ್ದು ನಾಡಿನಾದ್ಯಂತ ಭಕ್ತರು ಬಂದು ಗುರುಗಳ ಆರಾಧನಾ ಮಹೊತ್ಸವದಲ್ಲಿ ಭಾಗವಹಿಸುತ್ತಾರೆ.

 ಆಧಾರ
ಶ್ರೀ ವಿದ್ಯಾಸಂಪೂರ್ಣ ತೀರ್ಥರ ಚರಿತ್ರೆ ( ಕಣ್ವ ಚರಿತಾಮೃತ ಆಧರಿತ) .
ಶ್ರೀ ಕ್ಷೇತ್ರದಲ್ಲಿ ವಿವಿಧ ಧರ್ಮಿಕ ಆಚಾರಣೆಗಳು ನಿರಂತರವಾಗಿ ಶ್ರೀ ವಿದ್ಯಾಸಂಪೂರ್ಣ ತೀರ್ಥರ ಟ್ರಸ್ಟ ನೆರೆವೆರಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಶ್ರೀ ಭೋಗೇಶರಾವ್ ದೇಶಪಾಂಡೆ,
97318 94974
ಶ್ರೀ ಹನುಮೇಶ ದೇಶಪಾಂದೆ,
96861 61885

(ಸಂಗ್ರಹ)

ಸಂಜೀವ ಮುರ್ತಿ ದೇಶಪಾಂಡೆ

೯೯೮೬೧೫೧೯೦೯

1 thought on “ಶ್ರೀ ವಿದ್ಯಾ ಸಂಪೂರ್ಣ ತೀರ್ಥ ಶ್ರೀಪಾದಂಗಳವರ ಆರಾಧನೆ : ದೇಶಪಂಡೆ”

  1. ಚಿಕ್ಕದಾಗಿ ಚೊಕ್ಕವಾಗಿ ಗೊರಲೂಟಿ ಶ್ರೀಗಳವರ
    ಬಗ್ಗೆ ಲೇಖನ ದಲ್ಲಿ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು.

Leave a Reply

Your email address will not be published. Required fields are marked *

error: Content is protected !!