17 ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನ ೪ ಸಾವಿರ ಕೆಜಿ ಸಸ್ಯಹಾರಿ ಲಂಗರ್ ಭೋಜನ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 13 ಪ್ರಧಾನಿ ನರೇಂದ್ರ ಮೋದಿ ಅವರ ೭೪ನೇ ಹುಟ್ಟು ಹಬ್ಬ ಸೆ.೧೭ ರಂದು ಅಜ್ಮೀರ್ ಷರೀಫ್ ದರ್ಗಾ ೪ ಸಾವಿರ ಕೆಜಿ ಸಸ್ಯಹಾರಿ ಲಂಗರ್ ಭೋಜನವನ್ನು ಸಿದ್ಧಪಡಿಸಿ ವಿತರಿಸಲು ಸಿದ್ಧತೆ ನಡೆಸಿದೆ.
ಮೋದಿ ಅವರ ಜನ್ಮ ದಿನ ಆಚರಣೆ ಮತ್ತು ಅಜ್ಮೀರ್ ದರ್ಗಾ ಶರೀಫ್ ನ ಐತಿಹಾಸಿಕ ಹಾಗೂ ವಿಶ್ವ ವಿಖ್ಯಾತ ಬಿಗ್ ಶಾಹಿ ದೇಗ್ ನ ಸೇವಾ ಪಖ್ವಾಡದ ಸಂಯೋಗದೊಂದಿಗೆ ೫೫೦ ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯಕ್ಕೆ ಅನುಗುಣವಾಗಿ ಲಂಗರ್ ಭೋಜನವನ್ನು ಉಣ ಬಡಿಸಲಾಗುತ್ತದೆ ದರ್ಗಾದ ಅಧಿಕೃತ ಹೇಳಿಕೆಯೊಂದು ತಿಳಿಸಿದೆ ಎಂದು ಇಂಟರ್ನ್ಯಾಷನಲ್ ಮಿಲಾದ್ ಕಮಿಟಿ ಸ್ಥಾಪಕರು ಬಳ್ಳಾರಿ ಜಿಲ್ಲಾ ಸಿರುಗುಪ್ಪ ತಾಲೂಕು ಅಧ್ಯಕ್ಷರು ಕರ್ನಾಟಕ ವಾಕ್ಫ್ ಬೋರ್ಡ್ ಜಿಲ್ಲಾ ಮಾಜಿ ಸದಸ್ಯರು ಸಾಮಾಜಿಕ ಕಾರ್ಯಕರ್ತ ಅಲ್ ಹಾಜ್ ಎ ಅಬ್ದುಲ್ ನಬಿ ಚಿಸ್ತಿ ನಿಜಾಮಿ ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಸಂದರ್ಭ ಜನರಿಗೆ ಸಸ್ಯಹಾರಿ ಊಟ ವಿತರಿಸಲಾಗುತ್ತದೆ ಗದ್ದಿ ನಶೀನ್ ದರ್ಗಾ ಅಜ್ಮೀರ್ ಶರೀಫ್ ನ ಸೈಯದ್ ಅಫ್ಶಾನ್ ಚಿಸ್ತಿ ಅವರು ಪ್ರಕಟಿಸಿದ್ದಾರೆ ಊಟ ತಯಾರಿಸಲು ಅಕ್ಕಿ ಶುದ್ಧ ತುಪ್ಪ ಒಣ ಹಣ್ಣುಗಳನ್ನು ಎಂದು ಅವರು ವಿವರಿಸಿದ್ದಾರೆ ನರೇಂದ್ರ ಮೋದಿ ಹುಟ್ಟು ಹಬ್ಬದ ಅಂಗವಾಗಿ ದೇಶದಾದ್ಯಂತ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಸೇವಾ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತದೆ ಎಂದು ಅಜ್ಮೀರ್ ಷರೀಫ್ ದರ್ಗಾದ ಗದ್ದಿ ನಶೀನ್ ಸೈಯದ್ ಅಫ್ಶಾನ್ ಚಿಸ್ತಿ ಹೇಳಿದ್ದಾರೆ.
ನಮ್ಮ ಸುತ್ತಮುತ್ತಲಿನ ಗುರುಗಳು ಮತ್ತು ಬಡ ಜನರಿಗೆ ಕೂಡ ಸೇವೆಗಾಗಿ ಲಂಗರ್ ನೀಡಲಾಗುತ್ತದೆ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆಯ ದಿನದಂದು ಅವರಿಗೆ ದೀರ್ಘಾಯುಷ್ಯ ಕೋರಿ ನಾವು ಪ್ರಾರ್ಥನೆ ಸಲ್ಲಿಸುತ್ತೇವೆ ಭಾರತೀಯ ಅಲ್ಪಸಂಖ್ಯಾತ ಪ್ರತಿಷ್ಠಾನ ಮತ್ತು ಅಜ್ಮೀರ್ ಷರೀಫ್ ನ ಚಿಸ್ತಿ ಪ್ರತಿಷ್ಠಾನ ಇಡಿ ಲಂಗರ್ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಚಿಸ್ತಿ ಅವರು ವಿವರಿಸಿದರು.
ಹಜರತ್ ಖ್ವಾಜಾ ಮೋಹಿನುದ್ದೀನ್ ಚಿಸ್ತಿಯ ಬಿಗ್ ಶಾಹಿ ದೇಗ್ ನಲ್ಲಿ ರಾತ್ರಿ ೧೦:೩೦ಕ್ಕೆ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಆರಂಭವಾಗುತ್ತದೆ ಶಾಂತಿ ಏಕತೆ ಸಮೃದ್ಧಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಒಳತಿಗಾಗಿ ದುವಾ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ ಅವರು ಪ್ರಕಟಿಸಿದ್ದಾರೆ ಎಂದು ಹಾಜಿ ಅಬ್ದುಲ್ ನಬಿ ಅವರು ತಿಳಿಸಿದ್ದಾರೆ.
