5ffc620e-3d31-465d-bf38-1214d259c676

ಶ್ರೀ ವಿಠ್ಠಲಕೃಷ್ಣೊ ವಿಜಯತೆ

🕉️🕉️🕉️🕉️🕉️🕉️🕉️🕉️🕉️
ಶ್ರೀ ೧೦೦೮ ಶ್ರೀ ವಿದ್ಯಾವಿರಾಜ ತೀರ್ಥರು
🕉️🕉️🕉️🕉️🕉️🕉️🕉️🕉️🕉️

( 1919ರಿಂದ 1947)

ಆರಾಧನಾ ಮಹೋತ್ಸವ

13-09-24 : ಪೂರ್ವಾರಾಧನೆ
14-09-2024 ಏಕಾದಶಿ,
15-09-2025 ಶ್ರವಣೋಪಾಸ( ಹರಿವಾಸರ)
17-09-24 : ಪಾರಣಿ ಉತ್ತರಾರಾಧನೆ.

(ಭಾದ್ರಪದ ಶುಕ್ಲ ಏಕಾದಶಿ ಆರಾಧನೆ ನಿಮಿತ್ತ)

ಅನಂತಗುಣಪರಿಪೂರ್ಣಂ ಶ್ರೀ ಕೃಷ್ಣಸಕ್ತಮಾನಸಂ|
ಪ್ರಗಲ್ಭಭಕ್ತಿಸಂಯುಕ್ತಂ ಸಮುಪೇಕ್ಷಿತಭಾವಜಮ್||
ವಿದ್ಯಾವಿರಾಜನಾಮಾನಂ ವಿದ್ಯಯಾಲಂಕೃತಂ ಗುರುಮ್|
ಜ್ಣಾನಭಕ್ತ್ಯಾದಿ ಸಿದ್ಧ್ಯರ್ಥಂ ಪ್ರಣತೋsಸ್ಮಿ ಸುರದ್ರುಮಮ್|

ವೃಂದಾವನ ಸ್ಥಳ ; ಕಮಲಾಪೂರ ( ಹೊಸಪೇಟೆ)

ಯತ್ಯಾಶ್ರಮ ಗುರುಗಳು :
ಶ್ರೀ ವಿದ್ಯಾಧಿರಾಜರು

ಶ್ರೀ ಕಣ್ವ ಮಠದ 7 ನೇ ಪೀಠಾದಿಪತಿಗಳು.

ಇವರಿಂದ ಯತ್ಯಾಶ್ರಮ ಪಡೆದು ಕೊಂಡವರು.

ಶ್ರೀ ವಿದ್ಯಾವಿಜಯ ತೀರ್ಥರು
ಶ್ರೀ ವಿದ್ಯಮನೋಹರ ತೀರ್ಥರು

ಪೂರ್ವಾಶ್ರಮದ ಮನೆತನ: ಕನಕಗಿರಿ ವೇ.ಬ್ರ. ಗುರುರಾಜಾಚಾರ್ಯರರ ವಂಶಸ್ಥರು,

ಪೂರ್ವಾಶ್ರಮದ ಹೆಸರು;
ವೇ.ಬ್ರ. ಮಾಧವಾಚಾರ್ಯ ಕನಕಗಿರಿ
ಕಾಶ್ಯಪ ಗೋತ್ರ.

ಪೂರ್ವಾಶ್ರಮದ ಸ್ಥಳ : ಸುರಪುರ.

 

ಇವರು ಯತ್ಯಾ ಶ್ರಮ ಸ್ವೀಕರಿಸಿದ ೨-೩ ವರ್ಷಗಳ ನಂತರ ಶ್ರೀ ಮಠದಲ್ಲಿ ವೈದೀಕ ಪಾಠಶಾಲೆ ಪ್ರಾರಂಭಿಸಿದರು, ನಂತರ ದಕ್ಷಿಣಕ್ಕೆ ಧ್ಗಿವಿಜಯ ಯಾತ್ರೆ ಕೈಗೊಂಡರು, ಕೋಲಾರ, ಮುಳಬಾಗಿಲು, ಬೆಂಗಳೂರು ( ಅಂದಿನ ಮೈಸೂರು ಪ್ರಾಂತ್ಯದಲ್ಲಿ) ಸಂಚಾರ ಮಾಡಿ ಧರ್ಮಜಾಗೃತಿ ಮಾಡಿದರು, ಕೋಲಾರ ಜಿಲ್ಲೆಯ “ದಳಸನೂರ” ಎಂಬಲ್ಲಿ ಶಾ. ಶೆ. 1855ಚಾತುರ್ಮಾಸ ನೇರವೆರಿಸಿದರು ಅಲ್ಲಿನ ಭಕ್ತರ ಅಪೇಕ್ಷೆಯಂತೆ ಶ್ರೀ ವೀರಾಂಜನೆಯ ದೇವಸ್ಥಾನದಲ್ಲಿ ಶ್ರೀ ಮಠದ ಶಾಖಾ ಮಠ ಸ್ಥಾಪಿಸಿದರು, ಅಲ್ಲಿ ಶ್ರೀ ಪಾದ ರಾಜರ ಮಠದ ಶ್ರೀಮದಯಾನೀಧಿತೀರ್ಥರು ಪರಸ್ಪರ ಗೌರವ ದಿಂದ ಪೂಜೆಗೆ ಅನೂಕುಲ ಮಾಡಿಕೊಟ್ಟರು ಮತ್ತು ಪಾಂಡಿತ್ಯದ ಸ್ವವಿದರು, ಶ್ರೀ ಆತ್ರಿ ಮಹರ್ಷಿಗಳ ಪುತ್ರರಾದ ಶ್ರೀ ದುರ್ವಾಸ ಮಹರ್ಷಿಗಳಿಂದ ಪ್ರತಿಷ್ಠಿತ ಶ್ರೀ ನರಸಿಂಹ ದೇವರ ದೇವಸ್ಥಾನದಲ್ಲಿ ಪೂಜೆ ನೇರವೇರಿಸಿದರು.ಆ ಮೆಲೆ ಕಾವೇರಿ ತೀರದ ಯಾತ್ರೆ ಮಾಡಿದರು,

       ಉತ್ತರದ ಚಂದ್ರಭಾಗ( ಭೀಮಾ ತೀರ) ಶ್ರೀ ಕ್ಷೇತ್ರ ಪಂಢಾರಾಪೂರದ ವರೆಗೆ ಯಾತ್ರೆ ಕೈಗೊಂಡರು,ತುಂಗಾ ತೀರದ “ಮಾಧವವಾರ” ಎಂಬಲ್ಲಿ ಚಾತುರ್ಮಾಸ ಬಹುವಿಜ್ರಂಭಣೆ ನೇರವೆರಿಸಿದರು,ಅನೇಕ ಪಂಡಿತರು ಭಕ್ತರು ಇವರ ಪಾಂಡಿತ್ಯ ಮತ್ತು ತಪ್ಪಸ್ಸಿನಶಕ್ತಿಗೆ ತಲೆದುಗಿದರು. ಇವರ ಕಾಲದಲ್ಲಿ ಶ್ರೀ ಮಠಕ್ಕೆ ಹೆಚ್ಚಿನ ಶಿಷ್ಯರನ್ನು ಸಂಪಾದಿಸಿದರು, ಮತ್ತು ಪಂಡಿತರನ್ನು ಗೌವರವಿಸಿದರು.

     ಇಗ ಕಮಲಾಪೂರದಲ್ಲಿ ಸುಸಜ್ಜಿತ ಕಟ್ಟಡ ವಿದ್ದು ವೃಂದಾನ ಮತ್ತು ಯಾತ್ರಿನಿವಾಸ ಇದ್ದು ಪ್ರತಿವರ್ಷ ವಿಜೃಂಭಣೆಯಿಂದ ಆರಾಧನೆ ನಡೆಯುತ್ತದೆ, ಪಕ್ಷಮಾಸದ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯವನ್ನು ನೇರವೇರಿಸಲಾಗುತ್ತಿದೆ.

ವಿಶೇಷ ಸೂಚನೆ :
*ಪ್ರಸ್ತುತ ಪಿಠಾಧಿಪತಿಗಳಾದ ಶ್ರೀ ವಿದ್ಯಾಕಣ್ವ ವಿರಾಜ ತೀರ್ಥರ ಪಂಚಮ ಚತುರ್ಮಾಸ ನೆರೆವೇರುತ್ತಿದೆ .
ನಾಡಿನ ಬಹುಕಡೆಯಿಂದ ಭಕ್ತರು ಬಂದು ಆರಾಧನೆಯಲ್ಲಿ ಭಾಗವಹಿಸುತ್ತಾರೆ.

ಆಧಾರ : ಶ್ರೀ ಕಣ್ವ ಮಠದ ಚರಿತ್ರೆ

 

 

                                         ಸಂಗ್ರಹ ; ಸಂಜೀವ ಮೂರ್ತಿ ದೇಶಪಾಂಡೆ

ಕೊಪ್ಪಳ ,೯೯೮೬೧೫೧೯೦೯

 

Leave a Reply

Your email address will not be published. Required fields are marked *

error: Content is protected !!