ರೈತರಿಂದ ಸಹಕಾರಿ ಸಂಘಗಳ ಅಭಿವೃದ್ಧಿ : ಕೆ.ತಿಪ್ಪೇಸ್ವಾಮಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 30- ರೈತರ ಸಹಕಾರದಿಂದ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಿವೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ ತಿಪ್ಪೇಸ್ವಾಮಿ ಅವರು ಹೇಳಿದರು.
ತಾಲೂಕಿನ ಮುದ್ದಟನೂರು ಕ್ಯಾಂಪಿನಲ್ಲಿ ವಿವಿಧ ಉದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಗೋದಮು ಮತ್ತು ಕಚೇರಿ ಉದ್ಘಾಟಿಸಿ ಅವರು ಮಾತನಾಡುತ್ತಾ ಆರಂಭದಿAದಲೂ ಸಹಕಾರ ಸಂಘಗಳು ರೈತರ ನೆರವಿನಡಿ ಬೆಳೆದು ಅಭಿವೃದ್ಧಿ ಹೊಂದಿವೆ ಹೀಗಾಗಿ ಯಾವುದೇ ಕಾರಣಕ್ಕೂ ಸಹಕಾರಿ ಸಂಘಗಳಲ್ಲಿ ರಾಜಕೀಯ ಬೆರೆಸದೆ ಚುನಾವಣೆ ನಡೆಸದೇ ಒಮ್ಮತದಿಂದ ಅವಿರೋಧ ಆಯ್ಕೆ ಮಾಡಿ ಸಹಕಾರ ಸಂಘಗಳನ್ನು ಬೆಳೆಸಬೇಕು ಎಂದು ಅವರು ಹೇಳಿದರು.
ಸಂಘಗಳ ಅಭಿವೃದ್ಧಿಗೆ ಸಹಕರಿಸಿ ಸಿರುಗುಪ್ಪ ತಾಲೂಕಿನ ಸಿದ್ದರಾಮಪುರ ಬೃಹನ್ಮಠದ ಚಿದಾನಂದ ತಾತನವರು ೭೦ ಲಕ್ಷ ರೂ ವೆಚ್ಚದ ವಿವಿಧ ಉದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಚೇರಿ ಹಾಗೂ ಗೋದಾಮು ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ರೈತರು ಕೈ ಜೋಡಿಸಿದಾಗ ಸಹಕಾರ ಸಂಘ ಸದೃಢವಾಗಿ ಬೆಳೆಯಲು ಸಾಧ್ಯ ಎಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕ ಟಿ ಎಂ ಚಂದ್ರಶೇಖರಯ್ಯ ಅವರು ನಬಾರ್ಡ್ನಿಂದ ರೈತರಿಗೆ ಹೆಚ್ಚಿನ ಸಾಲ ದೊರೆಯುತ್ತದೆ ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಕೊಡುವ ಸಾಲ ಕಡಿಮೆ ಮಾಡಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಲ ನೀಡಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಚೊಕ್ಕ ಬಸವನಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಭೀಮಲಿಂಗಪ್ಪ, ವಿವಿಧ ಉದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಟಿ.ಸೂರಿಬಾಬು ಅವರು ಮಾತನಾಡಿದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ ರಾವ್, ತೆಕ್ಕಲಕೋಟೆ ಕ್ಷೇತ್ರ ಅಧಿಕಾರಿ ಎಲ್.ಬಾಲಪ್ಪ, ಕೆ.ಎಸ್.ಮಂಗಳೇಶ, ಕೆ.ಪರಶುರಾಮ, ಕೆಓಎಫ್ ರಾಜ್ಯ ಉಪಾಧ್ಯಕ್ಷ ಸುಗನಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಭೀಮಲಿಂಗಪ್ಪ, ಕೆ.ಎಂ.ಮಲ್ಲಯ್ಯ ಸ್ವಾಮಿ, ಸಿರುಗುಪ್ಪ ಕ್ಷೇತ್ರದ ವಿಎಸ್‌ಎಸ್‌ಎನ್ ಅಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಮ್ಯಾನ್ಚರಯ್ಯ, ವಿಎಸ್‌ಎಸ್‌ಎನ್ ಅಧ್ಯಕ್ಷ ತಿಮ್ಮಪ್ಪ ತೆಕ್ಕಲಕೋಟೆ, ವಿಎಸ್‌ಎಸ್‌ಎನ್ ಅಧ್ಯಕ್ಷ ಬಸವನಗೌಡ ಬೈರಾಪುರ, ಪಿಎನ್‌ಡಿ ಬ್ಯಾಂಕ್ ನಿರ್ದೇಶಕ ಜಡೇಸ್ವಾವಿ, ಸಿರುಗುಪ್ಪ ಟಿಏಪಿಸಿಎಂಎಸ್ ಅಧ್ಯಕ್ಷ ಹೆಚ್.ಶಾಂತನಗೌಡ, ವಿಎಸ್‌ಎಸ್‌ಎನ್ ಅಧ್ಯಕ್ಷ ಕುಮಾರ ರಾಜ ಗೌಡ, ಶಾನವಾಸಪುರ ಅಧ್ಯಕ್ಷ ಬಸವಣ್ಣಪ್ಪ ಮಣ್ಣೂರು, ಸೂಗೂರು, ಮುದ್ದೆಟನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರಪ್ಪ, ಮುಖಂಡರಾದ ಮಲ್ಲಿಕಾರ್ಜುನ, ಬಾಲಪ್ಪ ತೆಕ್ಕಲಕೋಟೆ, ಫಕೀರಪ್ಪ ನಡಿವಿ, ನಿರ್ದೇಶಕ ಪಂಪನಗೌಡ, ಲಿಂಗನಗೌಡ, ಎಲ್.ದೊಡ್ದನಗೌಡ, ಸುಭಾಷ್ ಚಂದ್ರ ಬೋಸ್, ಪಿ.ಸತ್ಯನಾರಾಯಣ, ಡಿ.ವೀರೇಶಪ್ಪ, ಬಿ.ವೆಂಕಟೇಶ ನಾಯಕ್, ವಿ.ಲಕ್ಕಮ್ಮ, ಕೆ.ಶಾಂತಮ್ಮ, ಬಿ.ಮಂಜುನಾಥ, ಶಿವರಾಜ್, ಹನುಮಂತ ಆಚಾರಿ ಇದ್ದರು.
ಸಿರಿಗೇರಿ ಗ್ರಾಮದ ಎಸ್‌ಎಂ ನಾಗರಾಜಸ್ವಾಮಿ ಕಾರ್ಯಕ್ರಮ ನಿರೂಪಿಸಿದರು, ಬಾಲಪ್ಪ ನಿರ್ವಹಿಸಿದರು, ಶ್ರೀನಿವಾಸರಾವ್ ವಂದಿಸಿದರು.