ಮಕ್ಕಳನ್ನು ವಿಜ್ಞಾನ ಲೋಕದ ದೃವತಾರೆಗಳನ್ನಾಗಿ ಮಾಡಿ : ದೇವೆಂದ್ರ ಜಿರ್ಲಿ
ಎಸ್ ಎಫ್ ಎಸ್ ಐಸಿಎಸ್ಇ ಶಾಲೆಯಲ್ಲಿ ಕೆಜಿ ತರಗತಿ ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನ ಉತ್ಸವ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 9 – ಮಕ್ಕಳ ಕಲಿಕೆ ಪ್ರಶ್ನೆ ಕೇಳುವ ಮೂಲಕ ಆರಂಭವಾಗುತ್ತದೆ, ಬಾಲ್ಯದಲ್ಲಿದ್ದಾಗ ಮಕ್ಕಳು ಕೇಳುವ ಪ್ರಶ್ನೆಗಳು ಕಲಿಕೆಯಲ್ಲಿ ಮಕ್ಕಳ ಆಸಕ್ತಿಯನ್ನು ಹೆಚ್ಚಿಸುತ್ತವೆ. ಶಾಲೆಯಲ್ಲಿ ಶಿಕ್ಷಕರು ಮತ್ತು ಮನೆಯಲ್ಲಿ ಪಾಲಕರು ಮಕ್ಕಳು ಕೇಳುವ ಪ್ರಶ್ನೆಗಳಿಗೆ ಸಮಾಧಾನವಾಗಿ ಸಮರ್ಥವಾಗಿ ಉತ್ತರ ನೀಡಬೇಕು ಎಂದು ಜಿಲ್ಲಾ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿ ದೇವೆಂದ್ರ ಜಿರ್ಲಿ ಹೇಳಿದರು.
ಅವರು ನಗರದ ಎಸ್ ಎಫ್ ಐಸಿಎಸ್ಇ ಶಾಲೆಯಲ್ಲಿ ಕೆಜಿ ತರಗತಿ ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಬಾಲ್ಯದಿಂದ ಆರಂಭವಾದ ಕುತೂಹಲ ದೊಡ್ಡ ದೊಡ್ಡ ಸಂಶೋಧನೆಗಳಿಗೆ ಎಡೆ ಮಾಡಿಕೊಡುತ್ತದೆ, ಅಷ್ಟೇ ಅಲ್ಲದೆ ಮಕ್ಕಳಲ್ಲಿ ಬಾಲ್ಯದಲ್ಲಿಯೇ ವೈಜ್ಞಾನಿಕ ಮನೋಭಾವನೆ ಮೂಡಿ ವಿಜ್ಞಾನ ಲೋಕದ ದೃವತಾರೆಗಳಾಗುತ್ತಾರೆ ಎಂದು ಅಭಿಪ್ರಾಯ ಪಟ್ಟರು.
ಶಾಲೆಯ ಪ್ರಾಂಶುಪಾಲರಾದ ಫಾ.ಜಬಮಲೈ ರವರು ಮಾತನಾಡಿ ಕೇವಲ ಪುಸ್ತಕ ಪೆನ್ನುಗಳಿಂದ ಜ್ಞಾನ ವೃದ್ಧಿಯಾಗುವುದಿಲ್ಲ ಇಂಥಹ ವಿಜ್ಞಾನ ಉತ್ಸವಗಳು ಬಾಲ್ಯದಿಂದಲೇ ಮಕ್ಕಳಲ್ಲಿ ಪಾಯೋಗಿಕತ್ವ ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸುವುದರಿಂದ ಹೊಸ ಸಂಶೋಧನೆಗಳಿಗೆ ದಾರಿಯಾಗಿ ಮಕ್ಕಳನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯುತ್ತವೆ. ಎಂದು ಮಾತನಾಡಿದರು.
ಆಡಳಿತಾಧಿಕಾರಿಗಳಾದ ಫಾ. ಮ್ಯಾಥ್ಯೂ ಮಾಮ್ಲ ರವರು ಇದೊಂದು ಚಿಕ್ಕ ಮಕ್ಕಳ ವೈಜ್ಞಾನಿಕ ಪ್ರೇರಣೋತ್ಸವ ಕಾರ್ಯಕ್ರಮ ಎಂದು ಶಾಘಿಸಿದರು.
ಮಕ್ಕಳು ರಚಿಸಿದ ಅಕ್ವೇರಿಯಂ, ಫಾರೆಸ್ಟ್, ರೋಬೋಟಿಕ್ಸ್, ಸೆನ್ಸ್ ಆರ್ಗನ್ಸ್ ಮುಂತಾದ ವಸ್ತು ಪ್ರದೆರ್ಶನದ ಮಾದರಿಗಳು ಗಮನ ಸೆಳೆದವು. ಚಿಕ್ಕ ಮಕ್ಕಳ ನಿರೂಪಣೆ, ನೃತ್ಯಗಳು ಎಲ್ಲರ ಮನಸೂರೆಗೊಂಡವು.

