ಕೊಪ್ಪಳದಲ್ಲಿ ವಕ್ಫ್ ಹೆಸರಲ್ಲಿ ಸರಕಾರದಿಂದಲೇ ರೈತರಿಗೆ ಅನ್ಯಾಯ : ಡಾ.ಬಸವರಾಜ ಕ್ಯಾವಟರ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 31- ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ದಾಖಲಿಸಿರುವ ಸರ್ಕಾರ ಕೊಪ್ಪಳದ ರೈತರಿಗೂ ದೋಖಾ ಮಾಡಿರುವುದು ಬೆಳಕಿಗೆ ಬಂದಿದೆ. ರೈತರನ್ನು ಯಾಮಾರಿಸಿ ಆಸ್ತಿ ವಶಕ್ಕೆ ಮುಂದಾಗಿರುವುದು ಕಾಂಗ್ರೆಸ್ ಸತಕಾರದ ರೈತ ವಿರೋಧಿ ನಡೆ ಎಂದು ಬಿಜೆಪಿ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಖಂಡಿಸಿದ್ದಾರೆ.

ವಕ್ಫ್ ಮಂಡಳಿ ಬೆನ್ನಿಗೆ ನಿಂತಿರುವ ಸರ್ಕಾರ ಅನ್ನದಾತರ ಬೆನ್ನಿಗೆ ಚೂರಿ ಹಾಕುತ್ತಿದೆ. ಜಿಲ್ಲಾದ್ಯಂತ 3475 ಎಕರೆಗೂ ಅಧಿಕ‌ಆಸ್ತಿ ಹೊಂದಿರುವುದಾಗಿ ಹೇಳುವ ಬೋರ್ಡ್ ಯಾವಾಗಾ ಯಾರಿಂದ ಬಂದಿದ್ದು ಎಂಬುದನ್ನು ಬಹಿರಂಗಪಡಿಸಬೇಕಿದೆ. ಯಲಬುರ್ಗಾ ತಾಲೂಕಿನ ಹಾಗೂ ಕುಕುನೂರು ತಾಲ್ಲೂಕಿನ ರೈತರಿಗೆ ವಿಚಾರಣೆ ಮಾಡದೆ ರೈತರ ಭೂಮಿಯನ್ನು ಕಡೆಗಣಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 700 ಎಕರೆ ಆಸ್ತಿಗಳಲ್ಲಿ ವಕ್ಫ ಅಸ್ತಿ ಇದೆ ಎಂದು ನಮೂದಿಸಿದೆ.

ಕುಕನೂರು ತಾಲೂಕಿನಲ್ಲಿ 700 ಎಕರೆ, ಯಲಬುರ್ಗಾ ತಾಲೂಕುಗಳಲ್ಲಿ 210, ಗಂಗಾವತಿ ತಾಲೂಕಿನಲ್ಲಿ 163 ಎಕರೆ, ಕನಕಗಿರಿಯಲ್ಲಿ 257 ಎಕರೆ, ಕಾರಟಗಿಯಲ್ಲಿ 149 ಎಕರೆ, ಕುಷ್ಟಗಿಯಲ್ಲಿ 607ಎಕರೆ ಸೇರಿ ಒಟ್ಟು 3475 ಎಕರೆ ಹೊಂದಿದೆ ಎನ್ನಲಾಗಿದೆ. ಈ ಕುರಿತು ಸರಿಯಾದ ದಾಖಲೆ ಬಹಿರಂಗಪಡಿಸಲಿ. ಅದ ಬಿಟ್ಟು ರೈತರ ಜಮೀನುಗಳ ಪಹಣಿ ಪತ್ರಿಕೆಯ ಕಲಂ 11 ರಲ್ಲಿ ವಕ್ಪ್ ಬೋರ್ಡ್ ನಲ್ಲಿ ವಿಚಾರಣೆ ಇದೆ ಎಂದು ಸೇರ್ಪಡೆ ಮಾಡಲಾಗಿದ್ದು, ರೈತರಲ್ಲಿ ಆತಂಕ ಉಂಟಾಗಿರುತ್ತದೆ.

ಕುಕನೂರು ತಾಲ್ಲೂಕಿನ 481 ಎಕರೆ ರೈತರ ಭೂಮಿಯ ಪಹಣಿಯಲ್ಲಿ ವಕ್ಫ್‌ ಮಂಡಳಿ ಆಸ್ತಿ ಎಂದು ನಮೂದಿಸಲಾಗಿದೆ.

ವಕ್ಸ್ ಬೋರ್ಡ್ 1974ರಲ್ಲಿ ಸ್ಥಾಪಿತ ಗೊಂಡಿದ್ದು ಅದಕ್ಕಿಂತ ನೂರಾರು ವರ್ಷಗಳ ಹಿಂದಿನಿಂದ ಒಡೆತನ ಹೊಂದಿರುವ ಭೂಮಿಯನ್ನು ಸಹ ಕಸಿದುಕೊಳ್ಳುತ್ತಿರುವು ಭೂ ಮಾಫಿಯಾ ಹಾಗೂ ಲವ್ ಜಿಹಾದ್ ತರಹವೇ ಲ್ಯಾಂಡ್‌ ಜಿಹದ್ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ರಾಜಕೀಯ ಲಾಭಕ್ಕಾಗಿ ಕೆಲವರು ವಕ್ಸ್ ಬೋರ್ಡ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಇದಕ್ಕೆಲ್ಲ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ರೈತರು ಹಾಗೂ ರೈತ ಪರ ಸಂಘಟನೆಗಳ ಜೊತೆಯಲ್ಲಿ ಉಗ್ರ ಹೋರಾಟಕ್ಕೆ ಸಜ್ಜಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ಜನತೆಯ ಜೊತೆಯಲ್ಲಿ ನಮ್ಮ ಪಕ್ಷದ ಹಿರಿಯರು ಹಾಗೂ ನಮ್ಮ ಕಾರ್ಯಕರ್ತರು ಸದಾ ಇರಲಿದ್ದಾರೆ. ರೈತರ ಭೂಮಿ ಅವರಿಗೆ ಮರಳಿ ಕೊಡಿಸುವವರೆಗೆ ಹೋರಾಟ ನಿಲ್ಲುವುದಿಲ್ಲವೆಂದು ತಿಳಿಸಿದ್ದಾರೆ.

ನೋಟಿಸ್‌ ನೀಡಿಲ್ಲ : ‘ವಕ್ಫ್‌ ಆಸ್ತಿಗೆ ಸಂಬಂಧಿಸಿದಂತೆ ವಕ್ಫ್‌ ಮಂಡಳಿಯಿಂದ ಜಿಲ್ಲೆಯ ರೈತರಿಗೆ ನೋಟಿಸ್ ನೀಡಿಲ್ಲ. ಈ ವಿಷಯದಲ್ಲಿ ರೈತರಿಗೆ ಯಾವುದೇ ಮಾಹಿತಿಯು ಸರಿಯಾಗಿ ನೀಡದೇ ರೈತರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡಲಾಗಿದೆ. ತಮ್ಮ ಅಧಿಕಾರದ ಆಸೆಗೆ ರೈತರನ್ನು ಬಲಿ ಕೊಡುವ ಷಡ್ಯಂತರ ನಡೆಸುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಅವರ ಪಟಲಾಂಗಳು ಇದಕ್ಕೆ ಉತ್ತರ ನೀಡಬೇಕಿದೆ.

ಒಂದೇ ಧರ್ಮಕ್ಕೆ ಆಧಾರಿತವಾದ ನೀತಿ ಹಾಗೂ ರೈತರ ಕಣ್ಣಿಗೆ ಮಣ್ಣು ಎರಚುವ ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠಕಲಿಸುತ್ತಾರೆ. ಇವರ ಬಣ್ಣ ಬಯಲಾಗಿದ್ದು, ಡೋಂಗಿತನ ಬಹಳ ದಿನ ನಡೆಯುವುದಿಲ್ಲ. ಕೂಡಲೇ ರೈತರ ಪಹಣಿಯಲ್ಲಿನ ವಕ್ಫ್ ಆಸ್ತಿ ಎಂಬುದನ್ನು ತೆರವು ಮಾಡಲಿ.

Leave a Reply

Your email address will not be published. Required fields are marked *

error: Content is protected !!