ಜ್ಞಾನ ಬಂಧು ಸಂಸ್ಥೆ : ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ
ಕರುನಾಡ ಬೆಳಗು ಸುದ್ದಿ
ಭಾಗ್ಯನಗರ, 17- ಪಟ್ಟಣದ ಜ್ಞಾನ ಬಂಧು ಸಂಸ್ಥೆಯಲ್ಲಿ ಮಂಗಳವಾರದಂದು ಕಲ್ಯಾಣ ಕರ್ನಾಟಕ ಉತ್ಸವವನ್ನು ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಕವಲೂರ ಅವರು ಸರ್ದಾರ್ ವಲ್ಲಭಬಾಯಿ ಪಟೇಲ್ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಶ್ರೀಮತಿ ರಾಧಾ ಏಣಿ ಮಾತನಾಡಿ, ಸರ್ದಾರ್ ಪಟೇಲರು ಹೈದ್ರಾಬಾದ್ ಕರ್ನಾಟಕವನ್ನು ಭಾರತದ ಒಕ್ಕೂಟಕ್ಕೆ ಒಳಪಡಿಸಲು ನಿಜಾಮನ ದಬ್ಬಾಳಿಕೆ ವಿರುದ್ದ ಸಂವಿಧಾನ ಬದ್ಧವಾದ ಮತ್ತು ಮಂತ್ರಿಮಂಡಳದ ಒಪ್ಪಿಗೆ ಮೇರೆಗೆ ಸೆಪ್ಟೆಂಬರ್ ೧೩, ೧೯೪೮ ರಂದುಪೋಲಿಸ್ ಕಾರ್ಯಚರಣೆಯನ್ನು ೫ ಭಾಗಗಳಿಂದ ನಡೆಸಿ ನಿಜಾಮನ ಹುಟ್ಟುಡಗಿಸಿ, ರಜಾಕಾರರನ್ನು ಮಟ್ಟಹಾಕಲಾಗಿ ಕೊನೆಗೆ ೧೭ನೇ ಸೆಪ್ಟೆಂಬರ್ ೧೯೪೮ ರಂದು ನಿಜಾಮನು ರೇಡಿಯೊ ಮೂಲಕ ಭಾರತದ ಒಕ್ಕೂಟಕ್ಕೆ ವಿಲೀನಗೊಳುತ್ತೇನೆ ಎಂದು ನಿರ್ಧಾರ ತಿಳಿಸುತ್ತಾನೆ. ಈ ಕಾರ್ಯ ಯಶಶ್ವಿಗೊಳಿಸಲು ಡಾ.ಬಿ.ಆರ್.ಅಂಬೇಡ್ಕರ್ಅವರ ಪಾತ್ರ ಪ್ರಮುಖವಾದದ್ದು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ದಾನಪ್ಪ ಜಿ ಕವಲೂರು ಕಲ್ಯಾಣ ಕರ್ನಾಟಕ ಬಗ್ಗೆ ಮಾತನಾಡಿ, ನಿಜಾಮನ ದಬ್ಬಾಳಿಕೆಯಿಂದ ನಮ್ಮ ಈ ಭಾಗದ ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸ್ವಾತಂತ್ಯ ಕ್ಷೀಣಿಸಿತ್ತು. ಸರ್ದಾರ ಪಟೇಲರ್ ದಿಟ್ಟ ನಿಲುವಿನಿಂದ ವಿಮೋಚನೆಗೊಳ್ಳುವಂತಾಯಿತು. ಈ ಕಾರಣದಿಂದಾಗಿ ನಾವು ಇಂದು ಹಿಂದುಳಿದವರು ಎಂಬ ಪಟ್ಟ ತೊಡೆದು ಹಾಕಲು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಾಧನೆ ಸಾಧಿಸುವ ಮಹತ್ತರವಾದ ಜವಬ್ದಾರಿ ನಿರ್ವಹಿಸೋಣ ಹಾಗೂ ಈ ವಿಮೋಚನೆಗೆ ಶ್ರಮಿಸಿದ ಹೋರಾಟಗಾರರನ್ನು ಸರಿಸುವುದು ನಮ್ಮಕರ್ತವ್ಯ ಎಂದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ವಿಶ್ವನಾಥಜಿ.ಎಸ್, ಶಾಲಾ ಪ್ರಾಚಾರ್ಯರಾದ ಶ್ರೀಮತಿ ಲಿಲಿಯನ್ ಆಂಟೋನಿ, ಉಪ-ಪ್ರಾಚಾರ್ಯರಾದ ಶ್ರೀಮತಿ ಜ್ಯೋತಿಎಸ್.ಎಸ್, ಶಾಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಶಿಕ್ಷಕನಾಗರಾಜಡಿ.ಎಸ್. ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
