ಪತ್ರಕರ್ತರು ವಸೂಲಿಯಲ್ಲಿ ಭಾಗಿಯಾಗಬಾರದು : .ಹೆಚ್.ಎಸ್.ರಾಜು

ಕರುನಾಡ ಬೆಳಗು ಸುದ್ದಿ

ವಿಜಯನಗರ, 31- ನಗರದ ಐಎಸ್ಆರ್  ಚರ್ಚ್ ಕಾಂಪ್ಲೆಕ್ಸ್ ನಲ್ಲಿರುವ ಕರ್ನಾಟಕ ಪತ್ರ ಕರ್ತರ ಸಂಘದ ಕಛೇರಿಯಲ್ಲಿ ಪತ್ರಿಕಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂಧರ್ಭದಲ್ಲಿ ವೇಧಿಕೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಪತ್ರ ಕರ್ತರ ಸಂಘದ ವಿಜಯನಗರ ಜಿಲ್ಲಾ ಘಟಕದ ಧ್ಯಕ್ಷರಾದ ಬಿ.ಹೆಚ್.ಎಸ್. ರಾಜು ಮಾತನಾಡಿ ಪತ್ರ ಕರ್ತರು ಸಮಾಜದಲ್ಲಿನ ಅಂಕು ಡೊಂಕು ಗಳನ್ನು ತಿದ್ದುತ್ತಾ ಸಮಾಜಕ್ಕೆ ಅನುಕೂಲಮಾಡಬೇಕೆ ವಿನಹ ವಸೂಲಿಯಲ್ಲಿ ಭಾಗಿ ಯಾಗಬಾರದು, ನಿಮ್ಮ ಬರವಣಿಗೆಯ ಮೂಲಕ ಸಮಾಜ ನಿಮ್ಮನ್ನು ಗುರುತಿಸುವಂತೆ ಮುನ್ನಡೆಯಬೇಕು.

ಪತ್ರಿಕಾ ರಂಗವು ಮುಗಿಯದ ಅಧ್ಯಾಯ ಜೀವನ ಪರ್ಯಂತ ಹೊಸದು ಕಲಿಯುವಂತದ್ದು ಇದ್ದೆ ಇರುತ್ತದೆ. ಹಾಗಾಗಿ ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಈ ರಂಗದಲ್ಲಿ ಕೆಲಸ ಮಾಡಬೇಕು. ಸಮಾಜವು ನಮ್ಮನ್ನು ನೋಡುತ್ತಿರುತ್ತದೆ ಅದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಮೇಲಿರುವ ಸಮಾಜದ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಬೇಕೆಂದು ಯುವ ಪತ್ರಕರ್ತರಿಗೆ ಸಲಹೆ ನೀಡಿದರು.

ಉದ್ಘಾಟಕರಾಗಿ ಆಗಮಿಸಿದ್ದ ಕಮಲಾಪುರ ಪಟ್ಟಣ ಪಂಚಾಯಿತಿಯ ಸದಸ್ಯರಾದ ಬಿ. ರವಿಕುಮಾರ ರವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ ಪತ್ರಕರ್ತರ ದಿನಾಚರಣೆಯ ಅಂಗವಾಗಿ ಶುಭಾಶಯಕೋರಿ ಮಾತನಾಡಿದ ಅವರು ಪತ್ರಕರ್ತರು ಸಮಾಜದಲ್ಲಿನ ಅಂಕುಡೊಂಕುಗಳ ತಿದ್ದುವುದಲ್ಲದೆ ಭ್ರಷ್ಟ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಸರಿ ದಾರಿಯಲ್ಲಿ ನಡೆಸುವ ದೊಡ್ಡ ಹೊಣೆಗಾರಿಕೆ ಅವರ ಮೇಲಿರುತ್ತದೆ. ಪತ್ರಿಕೆಗಳು ಒಂದು ವೇಳೆ ಇಲ್ಲದೆ ಹೋದಲ್ಲಿ ಸಮಾಜದಲ್ಲಿ ಏನು ನಡೆಯುತ್ತದೆ ಎಂದು ಹೊರ ಜಗತ್ತಿಗೆ ಗೊತ್ತೇ ಆಗುವುದಿಲ್ಲ. ಅಂತವುಗಳನ್ನು ತಿಳಿಸುವ ಕಾರ್ಯ ಪತ್ರಕರ್ತರು ಮಾಡುತ್ತಾರೆ ನಿಮ್ಮ ಕಾರ್ಯ ಸಮಾಜಕ್ಕೆ ಮಹತ್ವದ್ದಾಗಿದೆ. ಪತ್ರ ಕರ್ತರಿಗೂ ಹಲವಾರು ಸಮಸ್ಯೆಗಳಿರುತ್ತವೆ ಸರ್ಕಾರಗಳು ಅವರ ಸಮಸ್ಯೆಗಳನ್ನು ಆಲಿಸಿ ಸಹಕರಿಸುವಂತ ಕೆಲಸ ಮಾಡಬೇಕಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷರಾದ ಗಾಳೆಪ್ಪ, ಆಶ್ರೀತ್, ಚಿದಾನಂದ, ಗೀತಾಸುರೇಶ್,ಕುಬೇರ ಪತ್ರಕರ್ತರ ದಿನಾಚರಣೆಯ ಕುರಿತು ಮಾತನಾಡಿದರು.

ಈ ಸಂಧರ್ಭದಲ್ಲಿ ರಾಮಜಿನಾಯ್ಕ್ ಎಲ್.ಮಂಜುನಾಥ, ರಾಘವೇಂದ್ರ, ವಿಜಯವಾಣಿ, ಶೇಖರ್, ನೇಹಾ, ವೆಂಕಟೇಶ್ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!