ರಾಮಾಯಣ ಕಾಲದ ಬೀಡು ಹನುಮ ಉದಿಸಿದ ಕಿಷ್ಕಿಂಧೇಯ ಅಂಜನಾದ್ರಿ ನಾಡು
ಕರುನಾಡ ಬೆಳಗು ಸುದ್ದಿ
* ಪ್ರಸನ್ನಕುಮಾರ ದೇಸಾಯಿ
ಗಂಗಾವತಿ, 31- ಐತಿಹಾಸಿಕ ಪರಂಪರೆಯ ರಾಮಾಯಣ ಕಾಲದ ಬಿಡು. ಹನುಮ ಉದಿಸಿದ ಕಿಷ್ಕಿಂಧೆಯ ನಾಡು ಅಂಜನಾದ್ರಿ. ವಿಶವ ಪರಂಪರೆಯ ಪಟ್ಟಿಯಲ್ಲಿ ತನ್ನದೆಯಾದ ವಿಶೆಷತೆ ಪಡೆದಿರುವ ಧಾರ್ಮಿಕ,ಆಧ್ಯಾತ್ಮಿಕ ಸಾಂಸ್ಕೃತಿಕ ಕಲೆಯ ತವರೂರಾಗಿದೆ ಅಂಜನಾದ್ರಿಯ ಕ್ಷೇತ್ರ. ರಾಮಾಯಣ ಕಾಲದಲ್ಲಿ ಶ್ರೀ ರಾಮಚಂದ್ರ, ಸೀತಾಮಾತೆ,ಲಕ್ಷಣರೋಡಗೂಡಿ ಹನುಮಂತ(ಆಂಜನೇಯ) ಅನುಗ್ರಹಿಸಿದ ನಾಡಾಗಿತ್ತು. ದೀಪಾವಳಿ ಹಬ್ಬವನ್ನು ಆಚರಿಸಿದ ಪ್ರತಿತಿ ಇದೆ.
ಅಷ್ಟೇ ಅಲ್ಲದೇ ವಿಜಯನಗರದ ಸಾಮ್ರಾಜ್ಯದ ಮೋದಲ ರಾಜಧಾನಿ ಆನೆಗೋಂದಿಯಾಗಿತ್ತು. ಅಭಿವೃದ್ಧಿ ಆಮೆಗತಿ-ಮುಖ್ಯಮಂತ್ರಿ ಸಿದ್ದರಾಮಯ್ಯರು ಅಭಿವೃದ್ಧಿಗಾಗಿ 100 ಕೋಟಿ, ಹಿಂದೇ ಬವಸವರಾಜ ಬೋಮ್ಮಾಯಿಯವರ ಕಾಲದಲ್ಲಿ 100 ಕೋಟಿ ಯಡಿಯೂರಪ್ಪ ಅವಧಿಯಲ್ಲಿ 20 ಕೋಟಿ ಅನುದಾನ ಮಂಜೂರಾತಿ ದೋರೆತಿದ್ದರು. ಅಭಿವೃದ್ಧಿ ಕೆಲಸ ಮಾತ್ರ ಆಮೆಗತಿಯಲ್ಲಿ ಸಾಗಿದೆ. ಪ್ರವಾಸೋದ್ಯಮ ಸಚಿವರು ಇತ್ತಕಡೆ ಬಂದಿಲ್ಲ.
ಶಾಸಕ ಗಾಲಿ ಜನಾರ್ಧನರೆಡ್ಡಿಯವರು ಖಾಸಗಿ ಸಹಬಾಗಿತ್ವ ಸೇರಿ ಕೇಂದ್ರ ಸರಕಾರದ ಸಚಿವರೋಂದಿಗೆ ಚರ್ಚಿಸಿದ್ದನೆ 500 ಕೋಟಿ ಅನುದಾನ ತಂದು ವಿಶಿಷ್ಟ ರೀತಿಯಲ್ಲಿ ಅಭಿವೃದ್ಧಿ ಪಡಿಸುವುದು ಗ್ಯಾರಂಟಿ ಎನ್ನುತ್ತಾರೆ.
ಆನೆಗೋಂದಿ ಸಂಸ್ಥಾನದ ರಾಜಮಾತೆ ಲಲಿತಾರಾಣಿಯವರು ತಿಳಿಸಿ ಅಂಜನಾದ್ರಿ ನಾಡು ಸುತ್ತಮುತ್ತಲಿನ ಪಂಪಾಸರೋವರ ಅನೇಕ ಧಾರ್ಮಿಕ ಕ್ಷೇತ್ರ ಗಳ ಅಭಿಕಾರ್ಯ ತ್ವರಿತಗತಿಯಲ್ಲಿ ಆಗಬೇಕು.
ಯಾವುದೇ ಸ್ಮಾರಕಗಳಿಗೆ ಧಕ್ಕೆ ಯಾಗಲಾರದಂತೆ ಅಭಿವೃದ್ಧಿಯಾಗಲಿ. ಜಿಲ್ಲಾ ಡಳಿತ ಹಾಗೂ ತಾಲೂಕ ಆಡಳಿತ ಸುರ್ಪದಿಗೆ ಬಂದ ಮೇಲೆ ಹುಂಡಿಯ ಹಣದಲ್ಲಿ ಏರಿಕೆಯಾಗಿದೆ. ಬರುವ ಭಕ್ತರಿಗೆ ಇನ್ನೂ ಹೆಚ್ಚಿನ ಮೂಲಭೂತ ಸೌಲಭ್ಯ ದೋರೆಯುಂತೆ ಆಗಬೇಕು.
ಒಟ್ಟಾರೆ ಅಂಜನಾದ್ರಿಯ ಆಂಜನೇಯ ನಾಡು ವಿಶ್ವಮಟ್ಟದಲ್ಲಿ ತನ್ನದೇ ಯಾದ ಛಾಪು ಮೂಡಿಸುವಂತೆ ಆಗಲಿ ಎಂಬುದು ಸಾರ್ವಜನಿಕ ಅಂಭೋಣವಾಗಿದೆ.