6

ವಿದ್ಯಾರ್ಥಿಗಳು ಸದಾ ಕ್ರೀಡಾಯಲ್ಲಿ ತೊಡಗಲಿ : ಹುಲಿಗೆಮ್ಮ ತಳವಾರ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 13- ಗ್ರಾಮೀಣ ಭಾಗದಲ್ಲಿನ ಮಕ್ಕಳು ಕ್ರೀಡಾಕೂಟದಲ್ಲಿ ತೊಡಗಿ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಮುಂದಾಗಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಿಗೆಮ್ಮ ಬಸವರಾಜ್ ತಳವಾರ ಹೇಳಿದರು.

ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಾಲಯ, ಸರಕಾರಿ ಪದವಿ ಪೂರ್ವ ಕಾಲೇಜು(ಪ್ರೌಢ ಶಾಲಾ ವಿಭಾಗ) ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.

ಕ್ರೀಡೆಯಿಲ್ಲದೇ ಜೀವನ ಕೀಟ ತಿಂದ ಹಣ್ಣಿನಂತೆ ಇಂದಿನ ಆಧುನಿಕ ಯುಗದಲ್ಲಿ ಜೀವನ ನಡೆಸುತ್ತಿದ್ದು, ಸದೃಢ ಆರೋಗ್ಯದಿಂದ ಹೊಂದಲು ಕ್ರೀಡಾ ಮನೋಭಾವನೆ ಅತ್ಯವಶ್ಯ. ಕೇವಲ ಪಠ್ಯ ಆಲಿಸಿದರೆ ಸಾಲದು. ಆಟೋಟಗಳಲ್ಲಿ ಭಾಗಿಯಾಗಿ ಆಗಬೇಕು ಎಂದರು.

ನಿವೃತ್ತ ದೈ.ಶಿ. ಶಿಕ್ಷಕ ಅಮರಪ್ಪ ಎಸ್.ಬೋಗಾಪೂರ ಮಾತನಾಡಿ, ಸೋÃಲು-ಗೆಲುವುನ್ನದೇ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡಾಪಟುಗಳಿಗೆ ನಿರ್ಣಾಯಕರು ಪಾರದರ್ಶಕವಾದ ತೀರ್ಪು ನೀಡಬೇಕು. ವಿದ್ಯಾರ್ಥಿಗಳು ಆಟೋಟಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ವಿರುಪಣ್ಣ ಕೋರಿ ಧ್ವಜಾರೋಹಣ ನೇರವೇರಿಸಿದರು.

ಗ್ರಾ.ಪಂ.ಉಪಾಧ್ಯಕ್ಷ ಮಂಜುನಾಥ ಹಿರೇಮಠ, ಸದಸ್ಯರಾದ ಆನಂದ ಈಳಿಗೇರ್, ಶಿವಮ್ಮ ಗಾಳೆಪ್ಪ ಓಜನಹಳ್ಳಿ, ನಿಂಗಪ್ಪ ತೊಣಸಿಹಾಳ್, ಹುಲಿಗೆಮ್ಮ ಬಾಲಪ್ಪ ಹರಿಜನ, ಕುಂಟೆಪ್ಪ ಚಿಣಿಗಿ, ಶರಣಪ್ಪ ಹರಿಜನ, ಶಂಕ್ರವ್ವ ಭೀಮನಗೌಡ ಕೋಳೂರು, ಸೋಮಲಿಂಗಪ್ಪ ಹರ್ಲಾಪೂರ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಮಂಜುನಾಥ ಸಜ್ಜನ್, ಗಾಳೆಪ್ಪ ಓಜನಹಳ್ಳಿ, ದೈಹಿಕ ವೀರಿಕ್ಷಕ ವೀರಭದ್ರಪ್ಪ ಅಂಗಡಿ, ಜಿಲ್ಲಾ ದೈ.ಶಿ.ಶಿ ಜಿಲ್ಲಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ನಿವೃತ್ತ ಪ್ರಾಚಾರ್ಯ ಚಂದ್ರಕಾAತಯ್ಯ ಕಲ್ಯಾಣಮಠ, ಉಪ ಪ್ರಾಚಾರ್ಯ ಬಾಬುಸಾಬ್ ಲೈನದಾರ್, ಎಸ್ಡಿಎಂಸಿ ಸದಸ್ಯ ಶಂಕರ ಸಾಹಕಾರ, ಮುಖಂಡ ಮಲ್ಲಣ್ಣ ಹರ್ಲಾಪೂರ, ಶಾಲಾ ಶಿಕ್ಷಕರು, ದೈ.ಶಿ. ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!