ಆಸ್ಪತ್ರೆಗಳು ಸ್ವ-ಸಾರ್ಮಥ್ಯದಿಂದ ಉತ್ತಮ ಚಿಕಿತ್ಸೆ ನೀಡುವಂತಾಗಬೇಕು : ಸಚಿವ ಗುಂಡೂರಾವ್
ಕರುನಾಡ ಬೆಳಗು ಸುದ್ದಿ
ವಿಜಯನಗರ, 23- ಸರ್ಕಾರಿ ಆಸ್ಪತ್ರೆಗಳು ಎ.ಬಿ.ಆರ್.ಕೆ ಯಿಂದ ಪಡೆಯುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಗಂಗಾವತಿ ಸಾರ್ವಜನಿಕ ಆಸ್ಪತ್ರೆಯ ರೀತಿ ಎಲ್ಲಾ ಆಸ್ಪತ್ರೆಗಳು ಸ್ವ ಸಾಮರ್ಥ್ಯದ ಮೇಲೆ ಕಾರ್ಯನಿರ್ವಹಿಸುವಂತಾಗಬೇಕೆAದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್.ಆರ್.ಗುಂಡೂರಾವ್ ಹೇಳಿದರು.
ಹೊಸಪೇಟೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಜಯನಗರ ಜಿಲ್ಲೆಯು ಆರೋಗ್ಯ ಸುಧಾರಣೆಯಲ್ಲಿ ಬಹಳ ಹಿಂದುಳಿದಿದೆ, ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಿದರೆ ಜಿಲ್ಲೆಯ ಪ್ರಗತಿ ಸಾಧ್ಯ, ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದಾಗ ಈ ಜಿಲ್ಲೆ ಆರೋಗ್ಯ ಸೇವೆ ನೀಡುವಲ್ಲಿ ಹಿಂದಿದ್ದು ಮಕ್ಕಳಿಗೆ ಹಾಕಲಾಗುವ ಲಸಿಕಾ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಮಕ್ಕಳ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸಲು ಲಸಿಕಾ ಕಾರ್ಯಕ್ರಮಗಳು ಬಹಳ ಪ್ರಮುಖವಾಗಿದ್ದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ನಿಟ್ಟಿನಲ್ಲಿ ಆರೋಗ್ಯ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲು ತಿಳಿಸಿದರು.
ಎಬಿಆರ್ಕೆ ಸಮರ್ಪಕ ಬಳಕೆಗೆ ಸೂಚನೆ : ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಯಕ್ರಮಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ನೊಂದಾಯಿತ ಆಸ್ಪತ್ರೆಗಳಾಗಿದ್ದು ಈ ಯೋಜನೆಯಡಿ ಚಿಕಿತ್ಸೆ ನೀಡಿದಲ್ಲಿ ಅಂತಹ ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚ ಬರುತ್ತದೆ. ಈ ಅನುದಾನದಲ್ಲಿ ಆಸ್ಪತ್ರೆಗೆ ಬೇಕಾದ ವೈದ್ಯಕೀಯ ಪರಿಕರ, ಔಷಧಗಳು, ಸೇವೆಗಳಿಗೆ ವೆಚ್ಚ ಸೇರಿದಂತೆ ಆಸ್ಪತ್ರೆಯ ಅಭಿವೃದ್ದಿಗೆ ಬಳಕೆ ಮಾಡಿಕೊಂಡು ಸ್ವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದಾಗಿದೆ ಎಂದರು.
ರೆಫರಲ್ ಗೊಂದಲ : ಎಬಿಆರ್ಕೆಯಡಿ ಚಿಕಿತ್ಸೆ ಪಡೆಯಲು ರೆಫರಲ್ ಬೇಕಾಗಿದೆ, ಆನ್ಲೈನ್ನಲ್ಲಿ ದಾಖಲು ಮಾಡಬೇಕಾಗಿರುವುದರಿಂದ ಇದು ಗೊಂದಲಕ್ಕೆ ಕಾರಣವಾಗಿದೆ ಎಂದು ಕೊಪ್ಪಳ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಸಭೆಯಲ್ಲಿ ಪ್ರಸ್ತಾಪಿಸಿದಾಗ ಚಿಕಿತ್ಸೆ ಪಡೆಯುವ ರೋಗಿಯ ವ್ಯಾಪ್ತಿಯ ಆಸ್ಪತ್ರೆಯಲ್ಲಿ ಮೊದಲು ಚಿಕಿತ್ಸೆ ಪಡೆಯಬೇಕು, ಅಲ್ಲಿ ಅಂತಹ ಚಿಕಿತ್ಸಾ ಸೌಲಭ್ಯ ಇಲ್ಲದಿದ್ದಲ್ಲಿ ಇತರೆ ಆಸ್ಪತ್ರೆಗೆ ರೆಫರಲ್ ನೀಡಲಾಗುತ್ತದೆ. ಕೆಲವೊಂದು ಕಾಯಿಲೆಗಳಿಗೆ ರೆಫರಲ್ ಅಗತ್ಯವಿರುವುದಿಲ್ಲ ಎಂದು ತಿಳಿಸಿ ಪರಿಶೀಲಿಸಲು ಆರೋಗ್ಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ತಿಳಿಸಿದರು.
ಪಾರದರ್ಶಕ ಆಡಳಿತಕ್ಕೆ ಕೌನ್ಸಿಲಿಂಗ್ : ಆರೋಗ್ಯ ಇಲಾಖೆ ಹೆಚ್ಚು ಮಾನವ ಸಂಪನ್ಮೂಲ ಹೊಂದಿದ ಇಲಾಖೆಯಾಗಿದ್ದು ರಾಜ್ಯದಲ್ಲಿ ೭೦ ಸಾವಿರದಷ್ಟು ಅಧಿಕಾರಿ, ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಚನ್ನಾಗಿ ಕೆಲಸ ಮಾಡಿದರೆ ಜನ ಹತ್ತಿರವಾಗಿರುತ್ತಾರೆ. ಈ ಎಲ್ಲಾ ಸಿಬ್ಬಂದಿಗಳು ಉತ್ತಮ ಸೇವೆ ನೀಡಲು ಮತ್ತು ಪಾರದರ್ಶಕವಾದ ಆಡಳಿತಕ್ಕಾಗಿ ವರ್ಗಾವಣೆಗಾಗಿ ಯಾವುದೇ ಒತ್ತಡ, ಶಿಫಾರಸು ಇಲ್ಲದ ರೀತಿಯಲ್ಲಿ ಕೌನ್ಸಿಲಿಂಗ್ ಮೂಲಕವೇ ವರ್ಗಾವಣೆ ಮಾಡಲು ಉದ್ದೇಶಿಸಲಾಗಿದ್ದು ವೈದ್ಯರು ಮತ್ತು ಸಿಬ್ಬಂದಿಯವರು ಯಾವುದೇ ಪಕ್ಷಪಾತವಿಲ್ಲದೇ ಕೆಲಸ ಮಾಡಲು ತಿಳಿಸಿದರು.
ಜನಸಂಖ್ಯೆಗನುಗುಣವಾಗಿ ಆರೋಗ್ಯ ಸೌಲಬ್ಯ : ಇತ್ತೀಚಿನ ದಿನಗಳಲ್ಲಿ ನಗರೀಕರಣ ಹೆಚ್ಚುತ್ತಿದ್ದು ೨೦೨೭ ರ ವೇಳೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಸಂಖ್ಯೆಗನುಗುಣವಾಗಿ ಆಸ್ಪತ್ರೆಗಳಲ್ಲಿನ ಹಾಸಿಗೆ ಸಾಮರ್ಥ್ಯಗಳನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ಅದಕ್ಕಾನು ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳ ಸ್ಥಾಪನೆ ಸೇರಿದಂತೆ ಈಗಿರುವ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿನ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ನಮ್ಮ ಕ್ಲಿನಿಕ್ಗಳನ್ನು ಹೆಚ್ಚಿಸಲಾಗುತ್ತದೆ, ಇತ್ತೀಚೆಗೆ ನಡೆದ ಕಲಬುರಗಿ ಕ್ಯಾಬಿನೆಟ್ನಲ್ಲಿ ಈ ಭಾಗಕ್ಕೆ ಆರೋಗ್ಯ ಸುಧಾರಣೆಗೆ ಒತ್ತು ನೀಡಲಾಗಿದೆ ಎಂದರು.
ವಿಜಯನಗರ ಶಾಸಕ ಹೆಚ್.ಆರ್.ಗವಿಯಪ್ಪ ಜಿಲ್ಲಾ ಆಸ್ಪತ್ರೆ ಆರಂಭ ವಿಳಂಬವಾಗುವುದರಿ0ದ ಹೃದ್ರೋಗ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲು, ಇದಕ್ಕಾಗಿ ಕೆಕೆಆರ್ಡಿಬಿಯಿಂದ ಔಷಧ ಮತ್ತು ವೈದ್ಯರ ಸೇವೆಯನ್ನು ಸಿಎಸ್ಆರ್ ಅಡಿ ಒದಗಿಸಲಿದ್ದು ಸರ್ಕಾರದಿಂದ ಅನುಮತಿ ನೀಡಲು ಮನವಿ ಮಾಡಿದಾಗ ಸಚಿವರು ಅನುಮೋದನೆ ನೀಡಲಾಗುತ್ತದೆ ಎಂದರು.
ಹಡಗಲಿ ಶಾಸಕ ಕೃಷ್ಣನಾಯ್ಕ ವೈದ್ಯಕೀಯ ಪರಿಕರಣಗಳ ನಿರ್ವಹಣೆಗೆ ತಾಂತ್ರಿಕ ಸಿಬ್ಬಂದಿಗಳ ಕೊರತೆಯ ಕಾರಣ ಸಮರ್ಪಕ ಬಳಕೆಯಾಗುತ್ತಿಲ್ಲ, ಇದಕ್ಕೆ ಇಲಾಖೆಯಿಂದಲೇ ಜಿಲ್ಲೆಗೊಬ್ಬರನ್ನು ತಾಂತ್ರಿಕ ಸಿಬ್ಬಂದಿಗಳ ಸೇವೆ ಒದಗಿಸಲು ಮನವಿ ಮಾಡಿದಾಗ ಎಬಿಆರ್ಕೆಯಡಿ ದುರಸ್ಥಿ ಮಾಡಿದಲು ಆಡಳಿತ ವೈದ್ಯಾಧಿಕಾರಿಗಳೆ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.
ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಜಿಲ್ಲಾ ಆಸ್ಪತ್ರೆ ಇಲ್ಲದಿರುವುದರಿಂzದೀ ಭಾಗದ ಜನರು ಹೆಚ್ಚುವರಿ ಚಿಕಿತ್ಸೆಗಾಗಿ ಹತ್ತಿರದ ಕೊಪ್ಪಳಕ್ಕೆ ಹೋಗುವರು, ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸೆಗೆ ಸ್ಪಂದಿಸಬೇಕೆ0ದು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಶಿವಕುಮಾರ.ಕೆ.ವಿ., ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೋಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಕೊಪ್ಪಳ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೇಯ ಮತ್ತು ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
