ನೂಜಿವೀಡು ಸೀಡ್ಸ್ ಸಂಸ್ಥೆಯ ಶ್ರೀ ಅನ್ನಪೂರ್ಣ ಭತ್ತದ ತಳಿಯ ಕ್ಷೇತ್ರೋತ್ಸವ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 30- ತಾಲೂಕಿನ ಕರೂರು ಗ್ರಾಮದ ಪ್ರಗತಿಪರ ರೈತರಾದ ಚಂದ್ರಾರೆಡ್ಡಿ ಅವರ ಜಮೀನಿನಲ್ಲಿ ನೂಜಿವೀಡು ಸೀಡ್ಸ್ ಸಂಸ್ಥೆಯ ಶ್ರೀ ಅನ್ನಪೂರ್ಣ ಭತ್ತದ ತಳಿಯ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪಿ.ಜಿ.ಶಿವಕುಮಾರ್ ಕಂಪನಿಯ ನೂತನವಾಗಿ ಸಂಸ್ಕರಿಸಿದ ಶ್ರೀ ಅನ್ನಪೂರ್ಣ ಭತ್ತದ ತಳಿಯ ಕುರಿತು ಮಾಹಿತಿಯನ್ನು ನೀಡಿದರು.
ಈ ತಳಿಯು ಸೋನ ಸೆಗ್ಮೆಂಟ್‌ನ ತಳಿಯಾಗಿದ್ದು ೧೩೫ ರಿಂದ ೧೪೦ ದಿನಗಳೊಳಗೆ ಕಟಾವಿಗೆ ಬರುತ್ತದೆ, ರೋಗದ ಸಹಿಷ್ಣುತೆಯನ್ನು ಹೊಂದಿರುವ0ತಹ ತಳಿಯಾಗಿದೆ ಎಂದು ವಿವರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಮ್ಮ ಆಗ್ರೋ ಏಜೆನ್ಸೀಸ್‌ನ ಹೇಮರೆಡ್ಡಿ ಅವರು ಮಾತನಾಡಿ ಹೊಸ ತಳಿಯಾದ ಶ್ರೀ ಅನ್ನಪೂರ್ಣ ತಳಿ ಹೊಸ ತಳಿಯಾಗಿರುವುದರಿಂದಕಳೆದ ಮುಂಗಾರು ಹಂಗಾಮಿನಲ್ಲಿ ಮಾರಾಟ ಮಾಡುವಾಗ ಆತಂಕ ವಿತ್ತು ಆದರೆ ಈ ಈ ಜಮೀನನ್ನು ವೀಕ್ಷಣೆ ಮಾಡಿದಾಗ ತುಂಬಾ ಸಂತೋಷವಾಯಿತು ಇದು ಒಂದು ಅತ್ಯುತ್ತಮ ತಳಿಯಾಗಿದ್ದು ಲೋಕಲ್ ಸೋನಾ ತಳಿಗಿಂತ ೧೫ ದಿನಗಳ ಮುಂಚೆ ಕಟಾವಿಗೆ ಬರುತ್ತದೆ, ಯಾವುದೇ ರೋಗಗಳು ಕಂಡುಬ0ದಿಲ್ಲ, ಔಷಧಿ ಸಿಂಪಡಣೆಯೂ ಕೂಡ ತುಂಬಾನೇ ಕಡಿಮೆ ಇರುವುದರಿಂದ ಅಧಿಕ ಇಳುವರಿ ಲಾಭ ಪಡೆಯಬಹುದು ಹಳೆ ಲೋಕಲ್ ತಳಿಗಳು ರೋಗದ ಸಹಿಷ್ಣತೆಯನ್ನು ಹೊಂದಿರುವುದಿಲ್ಲ, ಔಷಧ ಸಿಂಪಡಣೆಯೂ ಜಾಸ್ತಿ ಆಗುವುದರಿಂದ ಭತ್ತವು ವಿಷಪೂರಿತವಾಗುತ್ತದೆ. ಶ್ರೀ ಅನ್ನಪೂರ್ಣ ತಳಿಯು ಔಷಧಿ ಸಿಂಪಡಣೆ ಕಡಿಮೆ ಇರುವುದರಿಂದ ಅಕ್ಕಿ ತಿನ್ನುವುದಕ್ಕೆ ಆರೋಗ್ಯಕರವಾಗಿರುತ್ತದೆ ಹಾಗೂ ಉತ್ತಮ ರುಚಿಯಿಂದ ಕೂಡಿರುತ್ತದೆ ಎಂದು ರೈತರಿಗೆ ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಹೊನ್ನೂರ್ ವಲಿ, ತಿಪ್ಪಾರೆಡ್ಡಿ, ಹನುಮಪ್ಪ ರೆಡ್ಡಿ, ರಾಘವೇಂದ್ರ ರೆಡ್ಡಿ, ಲಕ್ಷ್ಮೀಕಾಂತ ರೆಡ್ಡಿ, ಶಿವಾರೆಡ್ಡಿ, ಗುತ್ತಿ ಬೀಮರೆಡ್ಡಿ, ಗಾದಿಲಿಂಗ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.