8

ಒಳ ಮೀಸಲಾತಿಗಾಗಿ ಪ್ರತಿಭಟನೆ : ಹೆಚ್ಚಿನ ಜನಸಂಖ್ಯೆಯಲ್ಲಿ ಜನರು ಭಾಗವಹಿಸಲು ಕರೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 15- ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿ ಜಾರಿಗೆ ತರುವಂತೆ ಆದೇಶ ನೀಡಿದ್ದು ಅನುಷ್ಠಾನಕ್ಕೆ ಸರಕಾರ ಮುಂದಾಗಬೇಕೆAದು ಅಖಿಲ ಭಾರತ ಮಾದಿಗ ದಂಡೋರ ಸಮಿತಿ ರಾಜ್ಯಾಧ್ಯಕ್ಷ ಬಿ.ಹುಸೇನಪ್ಪ ಸ್ವಾಮಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸರ್ವೋಚ್ಚ ನ್ಯಾಯಾಲಯ ಒಳ ಮೀಸಲಾತಿಗೆ ಸಂಬ0ಧಿಸಿದ0ತೆ ಆದೇಶ ಮಾಡಿದ್ದು ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿಯನ್ನು ಜಾರಿಗೆ ತರಬೇಕು ಇಲ್ಲದಿದ್ದಲ್ಲಿ ಅವರ ವಿರುದ್ಧ ನ್ಯಾಯಾಲಯದ ಆದೇಶ ಉಲ್ಲಂಘನೆ ಕುರಿತು ಮೊಕದ್ದಮೆ ದಾಖಲಿಸುವುದಾಗಿ ಹೇಳಿದರು.

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ನೇತೃತ್ವದಲ್ಲಿ ಏಳು ನ್ಯಾಯಾಧೀಶರ ಪೀಠವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಡುವಿನ ವಿವಿಧ ಹಂತಗಳ ತಾರತಮ್ಯವನ್ನು ಪರಿಹರಿಸಲು ಉಪ ವರ್ಗೀಕರಣವನ್ನು ಅನುಮೋದಿಸಿದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪ ವರ್ಗಗಳನ್ನ ಜಾರಿ ಮಾಡಲು ರಾಜ್ಯಗಳಿಗೆ ಅಧಿಕಾರವಿದೆ ಹಿಂದುಳಿದ ಜಾತಿಗಳನ್ನು ಉನ್ನತೀಕರಿಸಲು ಮೀಸಲು ವರ್ಗದೊಳಗೆ ಕೋಟಗಳನ್ನು ನೀಡಲು ಪರಿಶಿಷ್ಟ ಜಾತಿ ಏಕರೂಪದ ಗುಂಪು ಮತ್ತು ಎಸ್‌ಸಿ, ಎಸ್‌ಟಿಗಳಲ್ಲಿ ತಾರತಮ್ಯಗಳನ್ನು ಅನುಭವಿಸಿದವರಿಗೆ ಶೇಕಡ ೧೫% ರಷ್ಟು ಮೀಸಲಾತಿಯಲ್ಲಿ ಹೆಚ್ಚಿನ ತೂಕವನ್ನು ನೀಡಲು ರಾಜ್ಯ ಸರ್ಕಾರಗಳು ಅವರನ್ನ ವರ್ಗೀಕರಿಸಬಹುದು ಎಂದು ಸರ್ವೋಚ್ಛ ನ್ಯಾಯಾಲಯ ಆದೇಶಿಸಿದೆ.

ಆದಕಾರಣ ಕೂಡಲೇ ಒಳ ಮೀಸಲಾತಿಯನ್ನು ಜಾರಿಗೆ ತರಬೇಕು ಪರಿಶಿಷ್ಟ ಜಾತಿಗಳು ಸಾಮಾಜಿಕವಾಗಿ ಏಕರೂಪಿಯಾಗಿಲ್ಲ ಎಂದು ಏಳು ನ್ಯಾಯಮೂರ್ತಿಗಳ ಸಾಂವಿದಾನ ಪೀಠವು ಹೇಳಿದೆ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿರವರು ನೇತೃತ್ವವಹಿಸಿದ್ದರು ೬:೧ರ ಬಹುಮತದ ತಿರ್ಪು ನೀಡುವದರೊಂದಿಗೆ ಒಟ್ಟು ೫೬೫ ಪುಟಗಳ ಒಮ್ಮತದ ತೀರ್ಪು ನೀಡಿದೆ.

ಕರ್ನಾಟಕದಲ್ಲಿ ಈಗಾಗಲೇ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ವರದಿಯಂತೆ ಶೇ ೧೫%ರ ಮೀಸಲಾತಿಯ ಮಿತಿಯನ್ನು ಪರಿಶಿಷ್ಟರ್ ಜನಸಂಖ್ಯೆಯ0ತೆ ಶೇ ೨% ರಷ್ಟು ಹೆಚ್ಚಿಸಿ ಒಟ್ಟು ಶೇ ೧೭% ರ ಮೀಸಲಾತಿಯನ್ನು ನಿಗದಿಪಡಿಸಲು ಶಿಫಾರಸ್ಸು ಮಾಡಿದೆ. ಅದರಂತೆ ಸರಕಾರವು ೨೦೨೩ ರಲ್ಲಿ ಶೇ ೧೭%ರ ಮೀಸಲಾತಿ ಕ್ರಮವಹಿಸಿದೆ. ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯ ದತ್ತಾಂಶಗಳನ್ನು ಪರಿಗಣಿಸಿ ನ್ಯಾಯಮೂರ್ತಿ ಅಡಿಗ ರವರ ಸಲಹೆಯಂತೆ ಮಾಧುಸ್ವಾಮಿ ನೇತೃತ್ವದ ಸಂಪುಟ ಉಪಸಮಿತಿಯು ಕಾನೂನು ಬದ್ಧವಾಗಿ ಒಟ್ಟು ಶೇ ೧೭% ರ ಮೀಸಲಾತಿಯಲ್ಲಿ ಪರಿಶಿಷ್ಟರಲ್ಲಿರುವ ಆಯಾ ಜಾತಿ ಸಂಬAಧಿತ ಜಾತಿಗಳ ೪ ಗುಂಪು ಮಾಡಿ ಅವರವರ ಜಾತಿ ಜನಸಂಖ್ಯೆ ಆಧಾರವಾಗಿ ಒಳಮೀಸಲಾತಿಗೆ ಶಿಫಾರಸ್ಸು ಮಾಡಿದೆ.

ಸುಪ್ರೀಂ ಕೋರ್ಟ್ ಒಳ ಮಿಸಲಾತಿ ತೀರ್ಪುನ್ನು ಕೂಡಲೇ ರಾಜ್ಯ ಸರಕಾರವು ಜಾರಿಗೊಳಿಸಲೇಬೇಕೆಂದು ಅಗ್ರಹಿಸಿ ರಾಜ್ಯದ್ಯಾಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸರಕಾರದ ಗಮನ ಸೆಳೆಯಲು ಬುಧವಾರ ೧೬ ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಬಾಗ ಬೃಹತ್ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವದು ಆದ್ದರಿಂದ ಮಾದಿಗ ಸಮಾಜದ ಮುಖಂಡರು ಹೋರಾಟದಲ್ಲಿ ಭಾಗವಹಿಸ ಬೇಕೆಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ವಸಂತಕುಮಾರ ಭಾವಿಮನಿ, ಜಿಲ್ಲಾ ಸಹ ಸಂಚಾಲಕ ಡಿ.ಹುಲ್ಲೇಶ ಬೂದಗುಂಪಾ, ತಾಲೂಕಾಧ್ಯಕ್ಷ ಹುಲಗಪ್ಪ ಹರಿಜನ, ಶಿವಾನಂದ ಹಿರೇಮನಿ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!