ತಾಲೂಕ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 15- ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಾರ್ಕಂಡೆಪ್ಪ ಎಸ್.ಮೇಟಿ ಉಪಾಧ್ಯಕ್ಷರಾಗಿ ಬಸವರಾಜ ಪೂಜಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಆವರಣದಲ್ಲಿ ಮಂಗಳವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಈ ಇಬ್ಬರೇ ನಾಮಪತ್ರ ಸಲ್ಲಿಸಿರುವ ಹಿನ್ನಲೇಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಸಹಾಯಕ ಚುನಾವಣಾಧಿಕಾರಿಯಾಗಿ ಚಂದ್ರಶೇಖರ ಘೋಷಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಸವರಾಜ ಎಚ್ ಪೂಜಾರ, ಸದಸ್ಯ ಮರಿಸ್ವಾಮಿ ಡಿ ಕಡೆಮನಿ, ದೇವಪ್ಪ ಗುಡಿಹಿಂದಲ, ಶರಣಪ್ಪ ಎಂ ದೇವಲ್, ಹನುಮಂತಪ್ಪ ವಿ ಸಿದ್ದಾಪುರ, ಹನುಮಂತಪ್ಪ ಗದ್ದಿ, ಶರಣಪ್ಪ ಅಳ್ಳಳ್ಳಿ, ಮಲ್ಲಪ್ಪ ಬಡಿಗೇರ, ನರಸಿಂಗರಾವ್ ದೇಸಾಯಿ, ಚೆನ್ನಮ್ಮ ದೇವಲ್, ಶಾಂತಮ್ಮ ಮೇಟಿ, ಕಾರ್ಯದರ್ಶಿ ಸತೀಶ ಸಿದ್ದಾಪುರ ಹಾಗೂ ಗ್ರಾಮದ ಯುವಕರು ಹಿರಿಯರು ಭಾಗವಹಿಸಿದ್ದರು.
