ರಾಜ ವೀರ ಮದಕರಿ ನಾಯಕರ ಪುತ್ತಳಿ ಅನಾವರಣ ಪ್ರಯುಕ್ತ ರಸಮಂಜರಿ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 31- ಕುರುಗೋಡು ತಾಲೂಕಿನ ಸೋಮ ಸಮುದ್ರ ಗ್ರಾಮದಲ್ಲಿ ರಾಜ ವೀರ ಮದಕರಿ ನಾಯಕರ ಪುತ್ತಳಿ ಅನಾವರಣವಾಯಿತು.
ಬೆಳಿಗ್ಗೆ ಆದ ಪ್ರಯುಕ್ತ ಸಾಯಂಕಾಲ ಮಹಾದೇವ ತಾತ ಕಲಾ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆದವು ಗಾಯಕರಾಗಿ ಕುಮಾರ ಗೌಡ, ಅಮರಾಪುರ ಗಾದಿ ಲಿಂಗಪ್ಪ, ಆನಂದ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಎ ಎರ್ರಿಸ್ವಾಮಿ ಹಾಸ್ಯ ಕಲಾವಿದರು ತಮ್ಮ ಹಾಸ್ಯದ ಮೂಲಕ ರಂಜಿಸಿದರು.
ನಂತರ ದಿವಂಗತ ಶಂಕರ್ ನಾಯ್ಡು ರವರು ರಚಿಸಿದ ದನಾಕಾಯುವವರ ದೊಡ್ಡಾಟ ಎಂಬ ಹಾಸ್ಯ ಭರಿತ ನಾಟಕ ಪುರುಷೋತ್ತಮ ಹಂದ್ಯಾಳು ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು ಕಲಾವಿದರಾದ ಪುರುಷೋತ್ತಮ ಹಂದ್ಯಾಳು ಪಾರ್ವತೀಶ್, ಅಂಬರೀಶ್, ಚಂದ್ರಶೇಖರ ಆಚಾರ್, ಮೌನೇಶ್, ಎ ಎರ್ರಿಸ್ವಾಮಿ ,ಸುಂಕಣ್ಣ, ದಾನಯ್ಯ ಸ್ವಾಮಿ, ಕರೆಂಟ್ ಹನುಮಂತ, ಗೌಡರ ಪಾತ್ರದಲ್ಲಿ ಪುರುಷೋತ್ತಮ ಗೌಡ್ರು ಎಲ್ಲಾ ಕಲಾವಿದರೂ ಸೇರಿ ನೆರೆದಿದ್ದ ಜನಸಮೂಹವನ್ನು ರಂಜಿಸಿದರು.
ಈ ಸಂದರ್ಬದಲ್ಲಿ ಊರಿನ ಹಿರಿಯರು ಗ್ರಾಮ ಪಂಚಾಯತಿ ಅದ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.