4

ಆಶಾ ಕಾರ್ಯಕರ್ತೆಯರ ಎರಡು ದಿನಗಳ ಸಮ್ಮೇಳನ ಯಶಸ್ವಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 15- ಕಲಬುರಗಿ ನಗರದ ಡಾ.ಎಸ್.ಎಂ ಪಂಡಿತ್ ರಂಗಮಂದಿರದಲ್ಲಿ ನಡೆದ ಪ್ರತಿನಿಧಿ ಅಧಿವೇಶನದಲ್ಲಿ ಅತಿಥಿಗಳಾಗಿ ಎಐಎಂಎಸ್‌ಎಸ್ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಶ್ರೀಮತಿ ಶೋಭಾ ಎಸ್ ರವರು ಮಾತನಾಡಿ, ಮಹಿಳಾ ಸ್ವಾತಂತ್ರ‍್ಯ ಯಾರು ತಂದು ಕೊಡುವುದಿಲ್ಲ; ಮಹಿಳೆಯರೇ ಹೋರಾಟದ ಮೂಲಕ ಗಳಿಸಿಕೊಳ್ಳಬೇಕು-ಎಂಬ ಶಿವದಾಸ್ ಘೋಷ್ ಅವರ ಸೂಕ್ತಿ ಸ್ಮರಿಸುತ್ತಾ, ಆಶಾ ಕಾರ್ಯಕರ್ತೆಯರು ವೈಚಾರಿಕವಾಗಿ, ಸಾಂಸ್ಕೃತಿಕವಾಗಿ ಸಜ್ಜುಗೊಳ್ಳಲು ಈ ಸಮ್ಮೇಳನ ಸ್ಪೂರ್ತಿ ತುಂಬಲಿ ಎಂದು ಹಾರೈಸಿದರು.

ಕಲಬುರಗಿ ಕರ್ನಾಟಕ ಕೇಂದ್ರೀಯ ವಿ.ವಿಯ ಪ್ರಾಧ್ಯಾಪಕರಾದ ಪ್ರೊ. ಶಿವಗಂಗಮ್ಮ ರುಮ್ಮಾ ಅವರು, ಮೌನ ಮುರಿದು ಮಾತಾಡುವುದು ಘಳಿಗೆಯ ಅವಶ್ಯಕತೆಯಾಗಿದೆ. ನಮ್ಮ ಹಕ್ಕುಗಳಿಗಾಗಿ ಮಾತನಾಡುವುದು ಶ್ರೇಷ್ಠ ಕಾರ್ಯ. ಅದಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ನೆರೆದಿರುವುದು ಅಭಿನಂದನಾರ್ಹ ಎಂದು ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಅಧಿವೇಶನದಲ್ಲಿ ಆಶಾ ಸೇವೆ ಖಾಯಂಮಾತಿ ಒಳಗೊಂಡ ಮುಖ್ಯ ಗೊತ್ತುವಳಿ, ದುಡಿಯುವ ಮಹಿಳೆಯರ ಮೇಲಿನ ಅತ್ಯಾಚಾರ ದೌರ್ಜನ್ಯ ಖಂಡಿಸಿ ಗೊತ್ತುವಳಿ, ಹೋರಾಟದ ವರದಿಯುಳ್ಳ ಸಂಘಟನಾತ್ಮಕ ವರದಿ ಸೇರಿದಂತೆ ಹಲವು ಗೊತ್ತುವಳಿಗಳನ್ನು ಮಂಡಿಸಿ ಚರ್ಚಿದ ನಂತರ ಅಂಗೀಕರಿಸಲಾಯಿತು. ಅನುಮೋದಿತ ಬೇಡಿಕೆಗಳ ಈಡೇರಿಕೆಗಾಗಿ ಬಲಿಷ್ಠ ಹೋರಾಟ ಹರಿಬಿಡಲು ನಿರ್ಧರಿಸಿ ನೂತನ ರಾಜ್ಯ ಸಮಿತಿ ಆಯ್ಕೆಮಾಡಲಾಯಿತು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೂತನ ರಾಜ್ಯ ಸಮಿತಿ: ರಾಜ್ಯ ಅಧ್ಯಕ್ಷರಾಗಿ ಕಾ.ಕೆ.ಸೋಮಶೇಖರ್ ಯಾದಗಿರಿ, 25 ಜನ ರಾಜ್ಯ ಉಪಾಧ್ಯಕ್ಷರು, ರಾಜ್ಯ ಕಾರ್ಯದರ್ಶಿ ಕಾ.ಡಿ.ನಾಗಲಕ್ಷಿ 42 ಜನ ಜಂಟಿ ಕಾರ್ಯದರ್ಶಿ, ಖಜಾಂಚಿ ಕಾ.ಸಂಧ್ಯಾ ಪಿ.ಎಸ್ ಹಾಗೂ 240 ಜನ ಕಾರ್ಯಕಾರಿ ಸಮಿತಿ ಸದಸ್ಯರುಳ್ಳ ರಾಜ್ಯ ಸಮಿತಿ ಸಮ್ಮೇಳನದಲ್ಲಿ ಆಯ್ಕೆಯಾಯಿತು.

ನೂತನ ಸಮಿತಿಯಿಂದ ಕಾರ್ಯಕ್ರಮ ಘೋಷಣೆ : ಅಂಗೀಕರಿಸಿದ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲಬುರಗಿಗೆ ಆಗಮಿಸುತ್ತಿರುವ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸುವುದು. ಬೇಡಿಕೆ ಈಡೇರದಿದ್ದರೆ ನವೆಂಬರ್ 2ನೇ ವಾರದಲ್ಲಿ ವಿಧಾನಸೌಧ ಮುತ್ತಿಗೆ ಚಳುವಳಿಯನ್ನು ಹಮ್ಮಿಕೊಳ್ಳುವುದಾಗಿ ಘೋಷಿಸಲಾಯಿತು.

ಸಮಾರೋಪ ಕಾರ್ಯಕ್ರಮ : ಸಮಾರೋಪ ಕಾರ್ಯಕ್ರಮದಲ್ಲಿ ಚುನಾಯಿತ ನೂತನ ರಾಜ್ಯ ಸಮಿತಿಯನ್ನು ಅಭಿನಂದಿಸಿ ಎಐಯುಟಿಯುಸಿ ರಾಜ್ಯ ಅಧ್ಯಕ್ಷರಾದ ಕಾಮ್ರೇಡ್.ಕೆ ಸೋಮಶೇಖರ್ ಅವರು ಮಾತನಾಡಿ, ಕಳೆದ 15 ವರ್ಷ ಹೋರಾಟದ ಪಯಣದಲ್ಲಿ ಪಿಎಚ್‌ಸಿ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಗಟ್ಟಿಯಾಗಿ ನಿಂತಿದ್ದೀರಿ, ಶಕ್ತಿಯಾಗಿದ್ದೀರಿ. ಬಂಡವಾಳಶಾಹಿ ಪರ ಸರ್ಕಾರಗಳ ನೀತಿಗಳಿಂದ ಮಾಲೀಕವರ್ಗದ ಕುಟುಂಬಗಳು ಜಗತ್ತಿನ ಅತೀ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡರೆ ಮತ್ತೊಂದೆಡೆ ಭೀಕರ ಬಡತನ, ಹಸಿವು, ನಿರುದ್ಯೋಗಗಳಿಂದ ಜರ್ಝರಿತವಾದ ದುಡಿಯುವ ಕಾರ್ಮಿಕ ವರ್ಗ ದಾರಿದ್ರ್ಯಕ್ಕೆ ತಳ್ಳಲ್ಪಡುತ್ತಿದೆ. ಈ ತಾರತಮ್ಯ ಆಧಾರಿತ ವ್ಯವಸ್ಥೆ ಕೊನೆಯೊಂದಿಗೆ ಮಾತ್ರ ಕಾರ್ಮಿಕ ವರ್ಗದ ಶೋಷಣೆ ಮುಕ್ತವಾಗುತ್ತದೆಂದು ಕಾರ್ಮಿಕ ವರ್ಗದ ಶಿಕ್ಷಕರಾದ ಕಾಮ್ರೇಡ್ ಶಿವದಾಸ್ ಘೋಷ್‌ರವರು ಚಿಂತನೆಯಂತೆ ಉನ್ನತ ನೀತಿ-ನೈತಿಕತೆ-ವೈಚಾರಿಕತೆ ಆಧಾರದ ಮೇಲೆ ಒಗ್ಗಟ್ಟಾಗಿ ಎಂದರು.

ಪ್ರತಿನಿಧಿ ಅಧಿವೇಶನದ ಪ್ರಾರಂಭಕ್ಕೂ ಮುನ್ನ ಸಂಘದ ರಾಜ್ಯ ಅಧ್ಯಕ್ಷರಾದ ಕಾ.ಕೆ.ಸೋಮಶೇಖರ ಯಾದಗಿರಿ ಅವರು ಧ್ವಜಾರೋಹಣ ನೆರವೇರಿಸಿ ಹುತಾತ್ಮ ಸ್ಥಂಭಕ್ಕೆ ಗೌರವ ಸಲ್ಲಿಸಲಾಯಿತು. ರಾಜ್ಯ ಸಮ್ಮೇಳನದಲ್ಲಿ ದಿಂದ ಪ್ರತಿನಿಧಿಗಳು ಭಾಗವಹಿಸಿದ್ದರು.

ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಶರಣು ಗಡ್ಡಿ ಮತ್ತು ಕೌಶಲ್ಯ, ಶೋಭಾ ಹೂಗಾರ, ಶಂಕ್ರಮ್ಮ ಹಳ್ಳಿಕೇರಿ, ಅನ್ನಪೂರ್ಣ ಯಲಬುರ್ಗಾ, ಶಿವಮ್ಮ ಯಲಬುರ್ಗಾ, ಲಲಿತಾ ಗಂಗಾವತಿ, ಗಿರಿಜಮ್ಮ, ನಿರ್ಮಲ ಇರಕಲ್ ಗಡ, ವಿಜಯಲಕ್ಷ್ಮಿ ಬಡಿಗೇರ್,  ಚಂಪಾ ಕುಷ್ಟಗಿ, ಜ್ಯೋತಿಲಕ್ಷ್ಮಿ, ಲಲಿತಾ ಗಂಗಾವತಿ, ಗಿರಿಜಮ್ಮ ಹುಲಿಗಿ, 14 ಜನ ಆಶಾ ಮುಖಂಡರನ್ನು ರಾಜ್ಯ ಸಮಿತಿಗೆ ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!