ಗ್ರಾಹಕರಿಗೆ ನಿರಂತರ ಸೇವೆ ಸೌಲಭ್ಯ ಕಲ್ಪಿಸುವ ವಿಕಾಸ ಬ್ಯಾಂಕ್ : ವಿಶ್ವನಾಥ್ ಹಿರೇಮಠ
ಕರುನಾಡ ಬೆಳಗು ಸುದ್ದಿ
ಕುಕನೂರು, 15- ಗ್ರಾಹಕರಿಗೆ 365 ದಿನ ನಿರಂತರ ಸೇವೆ ಸೌಲಭ್ಯ ಕಲ್ಪಿಸುವ ಬ್ಯಾಂಕ್ ಅದುವೇ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ. ಎಂದು ವಿಶ್ವನಾಥ್ ಹಿರೇಮಠ ಅಧ್ಯಕ್ಷರು, ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ. ಹೊಸಪೇಟೆ ಅವರು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿ, ಗ್ರಾಹಕರ ಆರ್ಥಿಕ ಅಗತ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದ ಗ್ರಾಹಕರಗೆ ನಿರಂತರ ಸೇವೆ ಸೌಲಭ್ಯಕ್ಕಾಗಿ ವರ್ಷದ365ದಿನ ಸೇವೆ ಸೌಲಭ್ಯ ಕಲ್ಪಿಸುವುದಕ್ಕಾಗಿ ಕುಕನೂರು ಪಟ್ಟಣದಲ್ಲಿ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ. ನ ಬ್ಯಾಂಕಿನ 18ನೇ ಶಾಖೆಯು ಸರ್ವೋದಯ ಕಾಂಪ್ಲೆಕ್ಸ್ ಡಾ. ಅಂಬೇಡ್ಕರ್ ಸರ್ಕಲ್ ನಲ್ಲಿ ನಿರ್ಮಿಸಿರುವ ಕಟ್ಟಡವನ್ನು ದಿ.16.9.2024 ರಂದು ಸೋಮವಾರ ಬೆಳಗ್ಗೆ 9 ಗಂಟೆಗೆ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ ಹಾಲಕೇರಿ ಹಾಗೂ ಡಾ. ಮಹಾದೇವ ಮಹಾಸ್ವಾಮಿಗಳು ಮುಂಡರಗಿ ಅನ್ನದಾನೇಶ್ವರ ಶಾಖಾ ಮಠ ಕುಕನೂರು ಅವರು ಉದ್ಘಾಟಿಸಿ ದಿವ್ಯ ಸಾನಿಧ್ಯ ನೀಡಲಿದ್ದಾರೆ.
ಅಧ್ಯಕ್ಷತೆ ವಿಶ್ವನಾಥ್ ಹಿರೇಮಠ ಅಧ್ಯಕ್ಷರು ವಿಕಾಸ ಸೌಹಾರ್ದ ಕೋ- ಆಪರೇಟಿವ್ ಬ್ಯಾಂಕ್ ಲಿ. ಹೊಸಪೇಟೆ ಯವರು ವಹಿಸಿಕೊಳ್ಳಲಿದ್ದಾರೆ.
ನಮ್ಮ ಬ್ಯಾಂಕಿನ ಆರ್ಥಿಕ ಅಂಕಿ ಸಂಖ್ಯೆಗಳು ಈ ರೀತಿ ಇವೆ. ಠೇವಣಿ 811 ಕೋಟಿ ರೂ. ಸಾಲಗಳು 544 ಕೋಟಿ ರೂ. ಒಟ್ಟು ವ್ಯವಹಾರ 1355 ಕೋಟಿ ರೂ. ಅನು ಅನುತ್ಪಾದಕ ಆಸ್ತಿ 4.17 % ನಿವ್ವಳ ಅನುತ್ಪಾದಕ ಆಸ್ತಿ 0.75% ಸ್ವಂತ ಬಂಡವಾಳ 76 ಕೋಟಿ ರೂಪಾಯಿಗಳು ಇರುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರಸನ್ ಹಿರೇಮಠ ವ್ಯವಸ್ಥಾಪಕ ನಿರ್ದೇಶಕರು ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ. ಹೊಸಪೇಟೆ, ನಿರ್ದೇಶಕ ಮಂಡಳಿಯವರಾದ ಶ್ರೀಮತಿ ಛಾಯಾ ದಿವಾಕರ್, ಎಂ ವೆಂಕಟಪ್ಪ, ರಮೇಶ್ ಪುರೋಹಿತ್, ವಿಕಾಸ ಬ್ಯಾಂಕಿನ ಸರ್ವ ಸಿಬ್ಬಂದಿಗಳು ಇದ್ದರು.
