ಶಾಸಕ ನಾಗೇಂದ್ರ ಹುಟ್ಟು ಹಬ್ಬದ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 15- ಯುವಜನ ಕ್ರೀಡೆ ಹಾಗೂ ಪರಿಶಿಷ್ಟ ಪಂಗಡಗಳ ಇಲಾಖೆ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಾಜಿ ಸಚಿವ ಹಾಗೂ ಗ್ರಾಮೀಣ ಜನಪ್ರೀಯ ಶಾಸಕ ಬಿ.ನಾಗೇಂದ್ರ ಅವರ 53ನೇ ಹುಟ್ಟು ಹಬ್ಬದ ಅಂಗವಾಗಿ ಬಳ್ಳಾರಿ ನಗರದ ಶ್ರೀ ಕನಕ ದುರ್ಗಮ್ಮ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಬಳಿಕ ಎಸ್ ಪಿ ಸರ್ಕಲ್, ಮೋತಿ ಸರ್ಕಲ್ ಮತ್ತು ರಾಯಲ್ ಸರ್ಕಲ್ ನಲ್ಲಿ ಇರುವ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಬಿ.ನಾಗೇಂದ್ರ ರವರ ಭಾವಚಿತ್ರದ ಕಟೌಟ್ಗಳ ಮುಂದೆ ಪಟಾಕಿ ಸಿಡಿಸಿ, ಕೇಕ್ ಕತ್ತರಿಸುವ ಮೂಲಕ ಅಭಿಮಾನಿಗಳು ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ನಂತರ ನೂರಾರೂ ನಾಗೇಂದ್ರ ಅವರ ಅಭಿಮಾನಿಗಳು ಸಂಗನಕಲ್ಲು ಆದರ್ಶ ಹಿರಿಯ ವೃದ್ಧಾಶ್ರಮದಲ್ಲಿ ಹಿರಿಯರಿಗೆ ಅನ್ನದಾನ ಹಾಗೂ ಹಣ್ಣು ಹಂಪಲು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಹಿಂದ ಯುವ ಘಟಕದ ಬಳ್ಳಾರಿ ಜಿಲ್ಲಾಧ್ಯಕ್ಷ ಎಂ.ಜಿ ಕನಕ ಅವರು ಮಾಜಿ ಸಚಿವ ಹಾಗೂ ಶಾಸಕ ಬಿ.ನಾಗೇಂದ್ರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಕೋರಿದರು. ಆದರ್ಶ ವೃದ್ಧಾಶ್ರಮದ ಹಿರಿಯರಲ್ಲಿ ಮಾಜಿ ಸಚಿವರಿಗೆ ಶುಭ ಕೋರಿ ಆಶೀರ್ವದಿಸಬೇಕೆಂದು ಹಿರಿಯರಲ್ಲಿ ವಿನಂತಿಸಿಕೊಂಡರು. ಬಿ.ನಾಗೇಂದ್ರ ಅವರು ಶೀಘ್ರದಲ್ಲಿಯೇ ಆರೋಪ ಮುಕ್ತರಾಗಿ ಹೊರಬಂದು ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು ಶ್ರೀ ಕನಕ ದುರ್ಗಮ್ಮ ದೇವಿಯಲ್ಲಿ ಪ್ರಾರ್ಥಿಸಿದರು.
ಈ ಕಾರ್ಯಕ್ರಮದಲ್ಲಿ ದುರ್ಗಮ್ಮ ದೇವಿಯ ದೇವಸ್ಥಾನದ ಧರ್ಮ ಕರ್ತರಾದ ಪಿ.ಗಾದೆಪ್ಪ, ಮಾಜಿ ಸಚಿವ ನಾಗೇಂದ್ರ ಅವರ ಆಪ್ತರಾದ ಬಿ.ದುರುಗಣ್ಣ, ಅಲ್ಲಿಪುರ ಆನಂದ, ಅಹಿಂದ ಯುವ ಘಟಕದ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ವೈ.ಅರುಣ್ ಕುಮಾರ್, ಸಂಚಾಲಕರಾದ ಶಾಷ ಮೋಕ, ಕಾಂಗ್ರೆಸ್ ಪಕ್ಷದ ಮುಖಂಡರಾದ ಮರಿಲಿಂಗ, ಶಿವನಗೌಡ, ಸಿದ್ದನಗೌಡ, ಆಪ್ತಮಿತ್ರ ಭಾಷಾ, ಮಲ್ಲಿಕಾರ್ಜುನ, ಅರುಣ್, ಸುನೀಲ್, ಕಾಂಗ್ರೆಸ್ ಮಹಿಳಾ ಮುಖಂಡರಾದ ಅರುಣ ಜ್ಯೋತಿ ಸೇರಿದಂತೆ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.
