IMG-20240704-WA0006

ಅಂಗವಿಕಲತೆ‌ಯನ್ನು‌ ಸವಾಲಾಗಿ‌ ಸ್ವೀಕರಿಸಿ ಸಾಧನೆ ಮಾಡಬೇಕು : ಯಲ್ಲಮ್ಮ‌ ಹೆಚ್

ಕರುನಾಡ ಬೆಳಗು ಸುದ್ದಿ

ಕುಷ್ಟಗಿ, 4- ವಿಕಲಚೇತನರು ತಮ್ಮ ಅಂಗವೈಕಲ್ಯತೆಯನ್ನು‌ ಸವಾಲನ್ನಾಗಿ ಸಗವೀಕರಿಸಿ ಬದುಕನ್ನು ದಿಟ್ಟತನದಿಂದ ಎದುರಿಸುವ ಶಕ್ತಿ ಬೆಳೆಸಿಕೊಂಡು ಸಾಧನೆಗೆ ಸ್ಪೂರ್ತಿಯಾಗಿಸಿಕೊಳ್ಳಬೇಕು ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಮ್ಮ ಹಚ್. ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಜಿಲ್ಲಾ ವಿಶೇಷಚೇತನ ಇಲಾಖೆ, ಅಲಿಂಕೋ ಸಂಸ್ಥೆ ಬೆಂಗಳೂರು ಹಾಗೂ ಶಿವಶಕ್ತಿ ಗ್ರಾಮೀಣ ವಿವಿಧೋದ್ದೇಶ ಸೇವಾ ಸಂಸ್ಥೆ ಕುಷ್ಟಗಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ವಿಕಲಚೇತನರಿಗೆ ಮತ್ತು ಹಿರಿಯನಾಗರಿಕರಿಗೆ ಸಾಧನಾ ಸಲಕರಣಾ ಮೌಲ್ಯಮಾಪನ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಕಾರವು ವಿಕಲಚೇತನರಿಗಾಗಿ‌ಅನೇಕ‌ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳ ಸದುಪಯೋಗಪಡಿಸಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು. ಅಂಗವಿಕಲತೆಯಿಂದ ಕುಗ್ಗದೇ ಸಾಧನೆಗೆ ದಾರಿ ಮಾಡಿಕೊಳ್ಳಬೇಕು. ವಿಕಲಚೇತನ ಇಲಾಖೆ ಹಾಗೂ ವಿವಿಧ ಸಂಸ್ಥೆಯವರು ಇಂದು ಆಯೋಜಿರುವ ಸಾಧನಾ ಸಲಕರಣೆ ಶಿಬಿರದ ಸದುಪಯೋಗ ಪಡಿಸಿಕೊಂಡು ಇಲಾಖೆಯಿಂದ ಯೋಜನೆಗಳ ಸದುಪಯೋಗ ಪಡೆಯಲು ಬೇಕಾದ ಎಲ್ಲಾ ಸೂಕ್ತ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು. ಪ್ರತಿಯೊಬ್ಬರೂ ಯುಡಿಐಡಿ ಕಾರ್ಡ ಮಾಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಾಸ್ತಾವಿಕವಾಗಿ ಮಾತನಾಡಿದ ಪುನರ್ವಸತಿ ಯೋಜನಾ ಜಿಲ್ಲಾ ನಿರ್ದೇಶಕ ಟೇಕ್ ರಾಜ್ ಅಲಿಂಕೋ ಸಂಸ್ಥೆ ಯವರು ನೀಡುವ ಸಾಧನಾ ಸಲಕರಣೆಗಳು ತುಂಬಾ ಗುಣಮಟ್ಟದಿಂದ ಕೂಡಿರುತ್ತವೆ ಸೂಕ್ತ ದಾಖಲೆಗಳನ್ನು ನೀಡಿ ಸಾಧನಾ ಸಲಕರಣೆ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ದೇಶಿಸಿ ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಚಂದ್ರಶೇಖರ ಹಿರೆಮನಿ ಮಾತನಾಡಿದರು. ತಾಲೂಕು ಪಂಚಾಯತ್ ಯೋಜನಾಧಿಕಾರಿ ಸುವರ್ಣಮ್ಮ ಅಲಿಂಕೋ ಸಂಸ್ಥೆ ಪದಾಧಿಕಾರಿಗಳು, ವೈದ್ಯಕೀಯ ಮಂಡಳಿ,ಶಿವ ಶಕ್ತಿ ಗ್ರಾಮೀಣ ವಿವಿಧೋದ್ದೇಶ ಸೇವಾ ಸಂಸ್ಥೆ ಅಧ್ಯಕ್ಷ ನಾಗರಾಜ ಮೇಲಿನ ಮನಿ , ಪುನರ್ವಸತಿ ಕಾರ್ಯಕರ್ತರಾದ ಆದಪ್ಪ ಮಾಲಿಪಾಟೀಲ, ಚಂದ್ರಶೇಖರ ಕುಂಬಾರ, ರಾಯನಗೌಡ ಶಿವಯ್ಯ ಗದ್ದಡಕಿ, ಹುಲಿಗೆಮ್ಮ, ದಾವಲಬಿ ಸೇರಿದಂತೆ ತಾಲೂಕಿನ ವಿಶೇಷ ಚೇತನರು, ಹಿರಿಯ ನಾಗರಿಕರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

error: Content is protected !!