ಕಿಮ್ಸ್ ವಿದ್ಯಾರ್ಥಿಳಿಂದ ರಕ್ತದಾನ
ಅಂತರಾಷ್ಟ್ರೀಯ ರೋಗನಿದಾನಶಾಸ್ತ್ರ ದಿನಾಚರಣೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, _08- ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕೊಪ್ಪಳ, ರೋಗನಿದಾನಶಾಸ್ತ್ರ ವಿಭಾಗ,ಕಿಮ್ಸ್ ಕೊಪ್ಪಳ, ಕರ್ನಾಟಕ ರಾಜ್ಯ ರೋಗನಿದಾನಶಾಸ್ತ್ರ ಪರಿಷತ್ತು ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ವತಿಯಿಂದ “ ಅಂತರಾಷ್ಟ್ರೀಯ ರೋಗನಿದಾನಶಾಸ್ತ್ರ ದಿನಾಚರಣೆ “ ಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ 2ನೇ ವರ್ಷದ ಅಭಯನ್ಸ್-2021 ಬ್ಯಾಚರವರು ಕಿಮ್ಸ್ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಕಿಮ್ಸ್ ವೈದ್ಯಕೀಯ ಅಧಿಕ್ಷಕರಾದ ಡಾ.ವೇಣುಗೋಪಾಲ ರವರು ಮತ್ತು ರೋಗನಿದಾನಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಅನಿರುದ್ಧ ವಸಂತ ಕುಷ್ಟಗಿ, ಹಾಗೂ ಡಾ.ಸಿದ್ಧಲಿಂಗರಡ್ಡಿ ಸಹಪ್ರಾಧ್ಯಾಪಕರು, ಡಾ.ಹೇಮವತಿರೆಡ್ಡಿ ಸಹಾಯಕ ಪ್ರಾಧ್ಯಾಪಕರು
ಡಾ.
, ಡಾ.ಧನ್ಯಾ, ಡಾ.ಶಶಿಕಲಾ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿಗಳು, ವಿದ್ಯಾಥಿಗಳು ಭಾಗವಹಿಸಿದ್ದರು.
ಕಿಮ್ಸ್ ನ ಮುಖ್ಯಸ್ಥರಾದ ಡಾ ವಿಜಯನಾಥ ಇಟಗಿ, ಪ್ರಾಂಶುಪಾಲರಾದ ಡಾ ರಾಘವೇಂದ್ರ ಬಾಬು, ಜಿಲ್ಲಾ ಶಾಸ್ತ್ರಚಿಕಿತ್ಸಕರದ ಸುಶೀಲ್ ಕುಮಾರ ಕಲಾಲ ಇವರು ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರೋಗನಿದಾನ ಶಾಸ್ತ್ರದ ಕುರಿತು ರಸಪ್ರಶ್ನೆ ಸ್ಪರ್ಧೆ ಮತ್ತು ಸೆಮಿನಾರ್ ಗಳನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕುಮಾರಿ ಮಿಸಬಾ, ಕುಮಾರ ಕೃಷ್ಣಕಿಶೋರ್ ಇತ್ಯಾದಿ ಸುಮಾರು ರವರು ಆಯೋಜಿಸಿದ್ದರು. ಇಂಟರ್ನ್ಸ್ ಕು.ವಚನಶ್ರೀ, ಶೀತಲ್, ಗಜಾನನ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.
