ಎಸ್ ಎಫ್ ಎಸ್ ಐಸಿಎಸ್ಇ ಶಾಲೆಯಲ್ಲಿ ಅದ್ಧೂರಿಯ ಕರ್ನಾಟಕ ರಾಜ್ಯೋತ್ಸವ ಆಚರಣೆ
ಮಕ್ಕಳು ಸಾಹಿತ್ಯಕ ಪುಸ್ತಕ ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು- ಡಾ. ಮಹಾಂತೇಶ ಮಲ್ಲನಗೌಡರ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 01- ವಿದ್ಯಾರ್ಥಿಗಳು ನಾಡು ನುಡಿಗೆ ಸೇವೆ ಸಲ್ಲಿಸಿದ ಮಹನಿಯರ ಕೊಡುಗೆಗಳನ್ನು ಸ್ಮರಿಸುವುದರ ಜೊತೆಗೆ ಅವರ ರಚಿಸಿದ ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಡಾ. ಮಹಾಂತೇಶ ಮಲ್ಲನಗೌಡರ ಹೇಳಿದರು.
ಅವರು ಎಸ್ ಎಫ್ ಎಸ್ ಐಸಿಎಸ್ಇ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುವೆಂಪು ರವರ ವಿಶ್ವ ಮಾನವ ಸಂದೇಶ ಸಾರುವಂತಹ. ಕನ್ನಡ ಸಾಹಿತ್ಯದಲ್ಲಿ ಕೈ ತೊಳೆದುಕೊಂಡು ಮುಟ್ಟಿ ಹಿಡಿದುಕೊಂಡು ಓದುವ ಪುಸ್ತಕಗಳಿವೆ ಅಂತಹ ಕೃತಿಗಳನ್ನು ಓದಿ ತಮ್ಮ ಜ್ಞಾನದ ವಿಸ್ತಾರವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಶಾಲಾ ಆವರಣವನ್ನು ತಳಿರು ತೋರಣ, ಹೂವುಗಳಿಂದ ಸಿಂಗರಿಸಲಾಗಿತ್ತು. ಕಾರ್ಯಕ್ರಮದ ಅಚ್ಚುಕಟ್ಟುತನ ಕಂಡು ಈ ಶಾಲೆಯಲ್ಲಿ ಕರುನಾಡಿನ ನೆಲದ ಮಣ್ಣಿನ ವಾಸನೆ ಅಡಗಿದೆ ಎಂದು ಮಕ್ಕಳನ್ನು ಪ್ರಶಂಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ
ಪ್ರಾಂಶುಪಾಲರಾದ ರೆ. ಫಾ. ಜಬಮಲೈ ರವರು ಮಾತನಾಡಿ ಈ ನೆಲ ನಮಗೆ ಎಲ್ಲವನ್ನೂ ಕೊಟ್ಟಿದೆ, ಅನೇಕ ಬೇರೆ ಬೇರೆ ಮಾತೃ ಭಾಷೆ ಜನರಿಗೆ ಆಶ್ರಯ ನೀಡಿದೆ ಪ್ರತಿಯೊಬ್ಬರು ಕನ್ನಡದ ಗೌರವವನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕನ್ನಡದ ಐದು ಹಾಡುಗಳ ನೃತ್ಯವನ್ನು ಮಾಡಿದರು, ನಾಡು ನುಡಿಗೆ ಸೇವೆ ಸಲ್ಲಿಸಿಸಿದ ಮಹನೀಯರ ವೇಷಭೂಷಣಗಳನ್ನು ಪ್ರಸ್ತುತ ಪಡಿಸಿದರು.
ರಾಜ್ಯೋತ್ಸವ ಕುರಿತು ಶಿಕ್ಷಕರಾದ ಸಂಗಮೇಶ್ವರ ಪಾಟೀಲ ಹಾಗೂ ಶಿಕ್ಷಕಿ ಪೂರ್ಣಿಮಾ ರವರು ಕವನ ವಾಚನ ಮಾಡಿದರು.
ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ರೆ. ಫಾ ಮ್ಯಾಥ್ಯೂ ರವರು ಉಪಸ್ಥಿತರಿದ್ದರು. ಕಾರ್ಯಕ್ರಮ ಅರ್ಥಪೂರ್ಣವಾಗಿ ಯಶಸ್ವಿಯಾಗಿ ಜರುಗಿತು.
