ಅಧಿದೇವತೆ ಬನ್ನಿ ಮಹಾಂಕಾಳಿ ರಥೋತ್ಸವ ಭಕ್ತರಿಂದ ಕುಂಭ ಸಮರ್ಪಣೆ ಅದ್ದೂರಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,11- ತಾಲೂಕು ಬಲಕುಂದಿ ಗ್ರಾಮದಲ್ಲಿ ಅಧಿದೇವತೆ ಬನ್ನಿ ಮಹಾಂಕಾಳಿ ಜಾತ್ರಾ ಮಹೋತ್ಸವ 5 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಬೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತಿತರ ಜಿಲ್ಲೆಗಳ ಭಕ್ತಾದಿಗಳು ಬನ್ನಿ ಮಹಾಂಕಾಳಿ ದೇವಿಗೆ ಹೂ ಹಣ್ಣು ಕಾಯಿ ಸಮರ್ಪಿಸಿ ದರ್ಶನ ಪಡೆದರು ನಂತರ ಸಾಧು ಸಂತರಿಗೆ ಊಟ ಉಣ ಬಡಿಸಿದರು ಗ್ರಾಮದ ಶ್ರೀ ಧರ ಗೌಡ ಮನೆಯಿಂದ ಮೇಟಿ ಕುಂಭವನ್ನು ಸಕಲ ಮಂಗಳ ವಾದ್ಯಗಳನೊಂದಿಗೆ ಗ್ರಾಮದ ಪ್ರಮುಖ ಬೀದಿಗಳಿಂದ ಬನ್ನಿ ಮಹಾಂಕಾಳಿ ದೇವಸ್ಥಾನಕ್ಕೆ ತೆರಳಿತು ಎಂದು ಗ್ರಾಮಸ್ಥ ರುದ್ರಮುನಿ ಸ್ವಾಮಿ ತಿಳಿಸಿದರು.
